ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೯ -ಶಾಕುಂತಲನಾಟಕ ನವೀನಟೀಕೆಎಂದು ರಾಯನ ಸಮೀಪವಂ ಸೇರಿ ಇಬ್ಬರು ಒಳ್ಳೆ ಮಹಾರಾಜನಾದ ದುಷ್ಯಂತನೇ, ಜಯವಂತನಾಗು ! ” ಎಂದು ವೇದೋಕ್ತವಾದ ಆಶೀರ್ವಾದವು ಗೆಯ್ಯಲಾ ರಾಯನು ತಾನು ಕುಳಿತಿರ್ದ ಸ್ಥಾನದಿಂದೆದ್ದು, ಆ ಋಷಿಕುಮಾರರ ಪರ ಣಗಳಿಗೆ ಆಗಿ, ಅವರು ಆಶೀರ್ವಾದವಂ ಗೆಯ್ಯು ತಂದಿತ್ತ ಫಲವಂ ತೆಗೆದುಕೊಂಡು, * ಎಲೈ ಪೂಜ್ಯರಾದ ಋಷಿಕುಮಾರರುಗಳಿರಾ, ಎನಗೆ ಏನು ಅಪ್ಪಣೆಯನ್ನೀಯಲಿ ಜೈಯಿಂದಿಲ್ಲಿಗೆ ಬಿಜಯಂಗೆಯ್ದಿರಿ ? ಎನಲಾ ಋಷಿಕುಮಾರರು ಎಲೆ ಪೂ "ನಾದ ಮಹಾರಾಯನೇ, ಇಲ್ಲಿ ನೀನಿರುವ ವಾರ್ತೆಯಂ ಈ ಆಶ್ರಮವಾಸಿಗಳಾದ ಖುಷಿಗಳು ತಿಳಿದಿರುವರಾದ್ದರಿ೦ ನಿನ್ನ ಪ್ರಾರ್ಥನೆಯಂ ಗೆಯ್ಯುವರು ” ಎಂದು ನುಡಿದ ವಾಕ್ಯಕ್ಕೆ ರಾಯನು_“ಎಲೈ ಪೂಜ್ಯರುಗಳಿರಾ, ಏನೆಂದು ಆಜ್ಞಾಪಿಸು ವರು? ಏನು ಕಾರ್ಯವನ್ನೀಯುವುದಕ್ಕೆ ಆಜ್ಞೆಯಂ ಗೆಯ್ಯುವರು” ಎನಲಾ ಋಷಿ ಗಳು-“ಪೂಜ್ಯನಾದ ಕಣ್ವಗುಟೀಶ್ವರನು ಆಶ್ರಮದಲ್ಲಿಲ್ಲದೆ ಇರುವುದರಿ೦ ರಾಕ್ಷ ಸರುಗಳು ಯಜ್ಞಕ್ಕೆ ವಿಘ್ನಗಳನ್ನುಂಟುಮಾಡಲಿಚ್ಚಿಸುತ್ತಿರುವರಾದ್ದ ಜ೦ದ ಸಾಯುಧನಾದ ನೀನು ಸಾರಥಿ ಸಮೇತನಾಗಿ ಬಂದು ಕೆಲವು ರಾತ್ರೆ ನಮ್ಮ ಆಶ್ರಮ ದಲ್ಲಿರ್ದು ಆ ರಾಕ್ಷಸರ ಬಾಧೆಯಂ ಪರಿಹರಿಸಬೇಕೆಂದು ಸಮಸ್ತ ಋಷಿಗಳು ಪ್ರಾರ್ಥ ನೆಯಂ ಗೆಯ್ಯುತ್ತಿರುವರು ” ಎನಲಾರಾಯನು( ನೀವಪ್ಪಣೆಯಂತೆ ನಡೆದು ಕೊಳ್ಳುವೆನು ಎಂದು ನುಡಿಯಲು ; - ವಿದೂಷಕನು ರಾಯನು ಕೇಳದಂತೆ ತನ್ನೊಳು ತಾನು ಈರಾಯನು ಒಂದು ಕಾರ್ಯವಂ ಯೋಚಿಸುತಿರ್ದನು ; ಇದೊಂದು ಕಾರ್ಯವು ಬಂದುದು! ?? ಎಂದು ನುಡಿಯುತ್ತಿರಲು ; ರಾಯನು ದ್ವಾರಪಾಲಕನಂ ಕು* ತು_ ಎಲೈ ರೈವತಕನೆ, ನೀನು ಜಾಗ್ರತೆಯಿಂ ಪೋಗಿ ಧನುರ್ಬಾಣದಿಂ ಯುಕ್ತವಾದ ರಥವು ತೆಗೆದುಕೊಂಡು ಬರುವುದೆಂಬ ನನ್ನಾಜ್ಞೆಯಂ ಸಾರಥಿಗೆ ಹೇಳುವುದು ” ಎನಲಾ ರೈವತಕನು SC ಅಪ್ಪಣೆಯಾದಂತೆ ನಡೆದುಕೊಳ್ಳುವೆನು ” ಎಂದು ರಥವಂ ತಿರಿಗಿಸಿಕೊಂಡು ಬರು ವುದಕ್ಕೆ ಪೋಗಲು ; ಆ ಋಷಿಗಳೀರ್ವರು ಅಧಿಕಹರ್ಷದಿಂ ಯುಕ್ತರಾಗಿ._ಎಲೈ ರಾಯನೇ ಪುರುವಂಶದಲ್ಲಿ ಹುಟ್ಟಿದವರು ಎಪತ್ತನ್ನು ಪೊಂದಿರುವ ಜನರುಗಳಿಗೆ ಅಭಯಪ್ರದಾ ನವಂ ಗೆಯ್ಯುವುದೆಂಬ ಯಜ್ಞದಲ್ಲಿ ದೀಕ್ಷೆಯಂ ಕೈಕೊಂಡಿರುವರು. ಆ ಪೂರ್ವಿಕರ ನಡತೆಯನ್ನೇ ಅನುಸರಿಸುವ ನೀನು ನಮ್ಮಂಥ ಋಷಿಗಳು ಹೇಳಿದ ಕಾರ್ಯವ೦