ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫9 ಕರ್ಣಾಟಕ ಕಾವ್ಯಕಲಾನಿಧಿ ನಡೆಸುವುದು ಯುಕ್ತವೇ ಸರಿ ” ಎಂದು ಹೇಳಲು ; ರಾಯನು- ಎಲೈ ಋಷಿ ಕುಮಾರರುಗಳಿರಾ, ನೀವಿಬ್ಬರು ಮುಂದುಗಡೆಯಲ್ಲಿ ಪೋಗತಕ್ಕುದು ನಾನು ನಿಮ್ಮ ಅನುಸರಿಸಿಯೇ ಬರುವೆನು ” ಎಂದು ನುಡಿಯಲಾವಾಕ್ಯಕ್ಕೆ ಆ ಋಷಿಗಳು ಸಂತುಷ್ಟರಾಗಿ, “ನೀನು ಜಯಶೀಲನಾಗು! ” ಎಂದು ಆಶೀರ್ವಾದವಂ ಗೆಯು ಆಶ್ರಮವಂ ಕು೫ ತವರೀರ್ವರು ತೆರಳಲು ; ಆರಾಯನು ವಿದೂಷಕನಂ ಕು೦> ತು, ಎಲೈ ಸ್ನೇಹಿತನಾದ ವಿದೂಷ ಕನೇ, ಶಕುಂತಲೆಯಂ ನೋಡಬೇಕೆಂಬ ಕುತೂಹಲವಿರುವುದೆ ಏನು ? ” ಎಂದು ನುಡಿಯಲು ; ವಿದೂಷಕನು- ಎಲೈರಾಯನೇ, ಮೊದಲು ಆ ಶಕುಂತಲೆಯಂ ನೋಡು ವೆನೆಂಬ ಅಭಿಲಾಷೆಯೆಂಬ ತಟಾಕವು ಕೋಡಿಬಿದ್ದು ಹರಿಯುತ್ತಿರ್ದುದು. ಈಗ ಈ ಋಷಿಗಳು ಪೇಳ ರಾಕ್ಷಸವೃತ್ತಾಂತದಿಂ ಒಂದು ಹನಿಯೂ ಇಲ್ಲದಂತೆ ಒಣಗಿ ಪೋದುದು ” ಎಂದು ನುಡಿಯಲು ; ರಾಯನು_ ಎಲೈ ವಿದೂಷಕನೇ, ಬೆಳುದಿರು, ನೀನು ಎನ್ನ ಸಮಾಸದ ಇರುವೆಯಷ್ಟೆ ” ಎನಲು ; ಆವಾಕ್ಯಕ್ಕೆ ವಿದೂಷಕನು- ಆಯ್ತಾ ರಾಯನೇ, ನಿನ್ನ ಸಮೀಪದಲ್ಲಿರ್ದ ಮಾತ್ರದಿಂದಲೇ ನಾನು ರಾಕ್ಷ ಸಬಾಧೆಯಿಂ ಸಂರಕ್ಷಿಸಲ್ಪಟ್ಟಿನೋ ಏನು? ” ಎಂದು ನುಡಿಯಲು; ಅಷ್ಟ ಅಲ್ಲೇ ರೈವತಕನೆಂಬ.ದ್ವಾರಪಾಲಕನು ಬಂದು--ಎಲೈ ಸ್ವಾಮಿಯೇ, ರಥವು ಸನ್ನದ್ಧವಾಗಿ ಬಂದಿರುವುದು. ಸ್ವಾಮಿಯವರು ವಿಜಯ ಪ್ರಯಾಣವಂ ಗೆಯ್ಯ ಬಹುದು. ಇದಲ್ಲದೆ ಪುರದಿಂದ ತಮ್ಮ ಮಾತುಯವರ ಆಜ್ಞೆಯಂ ತೆಗೆದು ಕೊಂಡು ಕರಭಕನೆಂಬ ಚಾರನು ಬಂದಿರುವನು ಎಂದು ನುಡಿಯಲು ; ರ ಯನು_ ಎಲೈ ದ್ವಾರಪಾಲಕನೇ, ನಮ್ಮ ತಾಯಿಯವರು ಕಳುಹಿಸಿ ರುವರೇ! ” ಎಂದ ವಾಕ್ಯಕ್ಕೆ, ( ಯಥಾರ್ಥವಾಗಿ ದೇವಿಯವರು ಕಳುಹಿಸಿರು ವರು ” ಎಂಬ ದ್ವಾರಪಾಲಕನ ವಚನವ ಕೇಳಿ, “ ಅವನು ಎನ್ನ ಸವಿಾಪಕ್ಕೆ ಬರುವಂತೆ ಮಾಡುವುದು' ಎಂದು ಅಪ್ಪಣೆಯಯ್ಯಲು; ಆ ದ್ವಾರಪಾಲಕನು ಅದೇ ರೀತಿಯಿಂ ಪುರದಿಂ ಬಂದಿರ್ದ ಕರಭಕಸಂ ಕರೆದು ಕೊಂಡು ಬಂದು, “ ಎಲೈ ಸ್ವಾಮಿಯೇ, ಇವನೇ ಕರಭಕನೆಂಬ ನಾಮವುಳ್ಳವನು' ಎಂದು ತೋ೫ ಸಲು ;