ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧ -ಶಾಕುಂತಲನಾಟಕ ನವೀನಟೀಕೆ-- ಆ ಕರಭಕನು ಸವಿಾಪಗತನಾಗಿ, ರಾಯಂಗೆ ಪ್ರಣಾಮವಂ ವಿರಚಿಸಿ, “ಎಲೈ ಸ್ವಾಮಿಯೇ, ಬರುವ ಚತುರ್ಥಿಯ ದಿವಸ ವ್ರತಸಮಾಪ್ತಿಯಾಗಿ ಪಾರಣೆಯ ವಸವಾದ ಹೆ೦ ಆಯುಷ್ಮಂತರಾದ ಸ್ವಾಮಿಯವರು ಪುರಕ್ಕೆ ಬರುವಂತೆ ದೇವಿ ಯರು ಅಪ್ಪಣೆಯಂ ಇರುವರು ” ಎಂದು ವಿಜ್ಞಾಪನೆಯಂ ಗೆಯ್ಯಲು ; ರಾಯನು- ಎಲೈ ವಿದೂಷಕನೇ, ಇತ್ತಲು ಋಷಿಗಳ ಕಾರ್ಯವಿರು ವುದು, ಅತ್ತಲು ಮಾತೃವಿನ ಆಜ್ಞೆಯಾಗಿರುವುದು. ಈ ಎರಡು ಕಾರ್ಯಗಳೂ ಮೂಡುವುದಕ್ಕೆ ಆಗದೆ ಇರುವುವು. ಈ ಎರಡಲ್ಲಿ ಯಾವ ಕಾರ್ಯವಂ ಮಾಡತ ಕುದು ಯಾವ ಕಾರ್ಯವಂ ಬಿಡತಕ್ಕುದು ಪೇಳು ? ” ಎನಲು ; ವಿದೂಷಕನು_ರಾಯನೇ ನೀನು ತ್ರಿಶಂಕುರಾಯನಂತೆ ಭೂಮ್ಯಂತರಿಕ್ಷ ಗಳೆರಡಂ ಬಿಟ್ಟು ಮಧ್ಯದಲ್ಲಿ ನಿಲ್ಲು ಎಂದು ಹಾಸ್ಯವಂ ಗೆಯ್ಯಲು; ರಾಯನು_“ಎಲೈ ವಿದೂಷಕನೇ ಈ ಸಮಯದಲ್ಲಿ ಹಾಸ್ಯದಿಂಪ್ರಯೋಜನ ಎಲ್ಲ. ನಿಶ್ಚಯವಾಗಿ ನಾನು ಚಿಂತೆಯುಳ್ಳವನಾಗಿರುವೆನು: ಹೇಗೆಂದರೆ-ನದೀ ಪ್ರವಾಹವು ಪರ್ವತವಂ ತಗಲಿ ಎರಡು ಭಾಗವಾಗುವಂತೆ ಈ ಕಾರ್ಯಗಳೆರಡೂ ಅಗತ್ಯವಾಗಿ ಮಾಡತಕ್ಕುದಾದ್ದರಿಂದ ಎನ್ನ ಮನವು ಯಾವುದಕಲ್ಲಿ ಪ್ರವರ್ತಿಸುವು ದೆಂಬ ಚಿಂತೆಯಿಂದಿರುವುದು ” ಎಂದು ನುಡಿದು, ಒಂದು ಕ್ಷಣ ತನ್ನೊಳು ತಾನು ಯೋಚನೆಯಂ ಗೆಯ್ಯು, “ ಎಲೈ ವಿದೂಷಕನೇ, ನಮ್ಮ ತಾಯಿಯು ನಿನ್ನಂ ಪುತ್ರ ನಂತೆ ಸಂರಕ್ಷಿಸಿರುವಳಾದ್ದ೦ ಈತಪೋವನವಂ ಬಿಟ್ಟು ಪ್ರತಿಷ್ಟಾನಪುರವಂ ಕು' ತು ಪೋಗಿ, ' ದುಷ್ಯಂತರಾಯನು ಬಂದನೇ' ಎಂದು ಕೇಳಲು, " ಋಷಿಗಳು ಮಾಳ ಯಜ್ಞಕ್ಕೆ ರಾಕ್ಷಸರ ಬಾಧೆಯುಂಟಾಗಿರುವುದು ಪರಿಹರಿಸುವುದಕ್ಕೆ ಪೋಗಿರುವ ನೆಂಬೀವೃತ್ತಾಂತವಂ ವಿಸ್ತಾರವಾಗಿ ನನ್ನ ಮಾತೃ ಸನ್ನಿಧಿಯಲ್ಲಿ ವಿಜ್ಞಾಪನೆಯಂ ಗೆಯು ನಾನು ಬಂದು ಮಾಳ್ಳ ಕೃತ್ಯವಂ ನೀನು ನೆರವೇರಿಸುವುದು ” ಎಂದು ನುಡಿಯಲು; ವಿದೂಷಕನು--'ಎಲೈ ರಾಯನೇ, ರಾಕ್ಷಸರ ವೃತ್ತಾಂತವು ಕೇಳಿದ್ದ ೦ದ ಭಯಯುಕ್ತನಾಗಿರುವೆನೆಂದು ನೀನು ಎನ್ನಂ ಪಟ್ಟಣಪ್ರಯಾಣವಂ ಮಾಡೆಂದು ಹೇಳುತ್ತಿರುವೆಯೋ ? ” ಎನಲು ; ಆ ವಾಕ್ಯಕ್ಕೆ ರಾಯನು ನಸುನಗುತ, ಈ ಎಲೈ ವಿಷಕನೇ, ನಾನೊಂದು ಪ್ರಕಾರವಾಗಿ ಹೇಳಲಾ ವಾಕ್ಯವಂ ನೀನೊಂದು ಪ್ರಕಾರವಾಗಿ ತಿಳಿದುಕೊಳ್ಳುವೆ! ಎಂದು ನುಡಿಯಲು ;