ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨ ಕರ್ಣಾಟಕ ಕಾವ್ಯಕಲಾನಿಧಿ ವಿದೂಷಕನು_* ಎಲೈ ಮಹಾರಾಯನೇ, ನಿನ್ನಾಜ್ಞೆಯಾದಂತೆ ಪೋಗಬೇ ಕಾದಲ್ಲಿ ಈಗ ಬಂದಿರುವ ಕರಭಕನೊಡನೆ ಪೋಗುವೆನಾದ್ದ೦ ನಾನು ಯುವ ರಾಜನಾದೆನು! ” ಎಂದು ತನ್ನೊಳು ತಾನು ಸಂತೋಷವಂ ಪೊಂದುತ್ತಿರಲು ; ರಾಯನು ತನ್ನ ಮನದೊಳು, “ ಈ ವಟುವು ಮಹಾಚಪಲನಾಗಿ ಇರುವನು. ಈಗ ನಾನು ಶಕುಂತಲೆಯಂ ಕುಯಿತು ಪ್ರಾರ್ಥನೆಯಂ ಗೆಯ್ಯುತ್ತ ವಿಷಾದನಂ ಪೊಂದುತಿರ್ದುದಂ ಅಂತಃಪರಸ್ತ್ರೀಯರೊಡನೆ ಪೇಳದೆ ಇರನು. ಆದ್ದ೦ದಿ ನ್ನೊಂದು ಪ್ರಕಾರವಾದ ವಂಚನೆಯ ವಾಕ್ಯವಂ ಇವನೊಡನೆ ನುಡಿಯುವೆನು ? ಎಂದಾಲೋಚಿಸಿ, ಆ ವಿದೂಷಕನಂ ತನ್ನ ಕರದಲ್ಲಿ ನಿಡಿದು, ( ಎಲೈ ಸ್ನೇಹಿತನೇ, ನಾನು ಪೂಜ್ಯರಾದ ಋಷಿಗಳ ಸಂದರ್ಶನಕ್ಕೋಸುಗ ಈಕಣ್ಯಾಶ್ರಮಕ್ಕೆ ಪೋಗು ವೆನಲ್ಲದೆ ನಿಶ್ಚಯವಾಗಿ ಆಗಮಿಪುತ್ರಿಯಾದ ಶಕುಂತಲೆಯಲ್ಲಿ ಅಭಿಲಾಷೆಯಿಲ್ಲ. ನೀನೇ ಈಗ ನೋಡು ಹುಲ್ಲೆಗಳ ಮಿ ಗಳೊಡನೆ ವೃದ್ಧಿಯಂ ಪೊಂದಿ ಮನ್ಮಥವಿ ಕಾರವನ್ನಯದೆ ಇರುವ ಈಶಕುಂತಲೆಯು ಎಲ್ಲಿ ! ಸದ್ಗುಣಭರಿತನಾದ ನಾನೆಲ್ಲಿ! ಇಂತು ಒಂದಕ್ಕೊಂದು ವಿಗಡವಾಗಿರುವುದು. ನಿಮ್ಮೊಡನೆ ವಿನೋದಕ್ಕೋಸುಗ ಆಶಕುಂತಲೆಯ ವೃತ್ತಾಂತವಂ ಪೇಳಿದೆನಲ್ಲದೆ ನಿಶ್ಚಯವಾದ ವಾಕ್ಯವೆಂದು ತಿಳಿಯ ದಿರು ?” ಎನಲು: ವಿದೂಷಕನು ರಾಯನು ಪೇಳುದೆಲ್ಲವು ಯಥಾರ್ಥವೆಂದು ತಿಳಿದು ಪುರ ವಂ ಕುಚಿತು ತೆರಳಲು; ರಾಯನು ರಥಾರೂಢನಾಗಿ ಕಣ್ಣಾಶ್ರಮವಂ ಕು ತು ತೆರಳಲಿ ಸಿದನು. ಎಂಬಲ್ಲಿಗೆ ಕೃಷ್ಣರಾಜವಾಣೀವಿಲಾಸ ರತ್ನಾಕರವೆಂಬ ಶಾಕುಂತಲ ನಾಟಕ ನವೀನಟಕಿನಲ್ಲಿ ದುಷ್ಯಂತರಾಯನು ವಿದೂಷಕನಂ ಪುರಕ್ಕೆ ಕಳುಹಿ ತಾನು ಕಣ್ಣಾಶ್ರಮಕ್ಕೆ ಪೋದನೆಂಬ ದ್ವಿತೀಯ ಕಲ್ಲೋಲದಲ್ಲಿ ದ್ವಿತೀಯ ತರಂಗಂ ಸಂಪೂರ್ಣ೦. @ @ REGISTRAR 03MANIA UNIVERSITY