ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬. -ಕರ್ಣಾಟಕ ಕಾವ್ಯಕಲಾನಿಧಿ -- ಯೆಲೆಯ 1 ಆಸಣಿಗೆಯ ಗಾಳಿಯು ಇಬ್ಬವನ್ನು ಂಟುಮಾಡುವ ಏನು ? ' ಎಂದು ಕೇಳಲಾಶಕುಂತಲೆಯು ಅತ್ಯಧಿಕಸಂತಾಪದಿಂ ಯುಕ್ತಳಾಗಿ, “ಎಲ್‌ ಸಖಿ ಯರುಗಳಿರಾ, ಏನು ಸುಖವುಂಟಾಗುವುದೊ ಎನಗೆ ತಿಳಿಯದು. ನೀವು ಬೀಸಣಿ ಗೆ ಯಂ ಬೀಸುತ್ತಿರುವಿರಾ? ” ಎಂದು ಕೇಳಿ, ಚೆನ್ನಾಗಿ ಪ್ರತ್ಯುತ್ತರವಯದಿರಲಾ ಸಖಿಯರೀರ್ವರು ಅಧಿಕ ವಿಷಾದವಂ ಪೊಂದಿ ಒಬ್ಬರೊಬ್ಬರ ಮುಖವ ನೋಡಿ ಕೊಳ್ಳುತ್ತಿರಲು; ಇತ್ತಲಾ ರಾಯನು( ಈ ಶಕುಂತಲೆಯು ಅಧಿಕ ಆಯಾಸವುಳ್ಳವಳಾಗಿ ತೋಯಿವಳು. ಈ ಸಂತಾಪವು ಬೆಸಗೆಯ ಬಿಸಲಿನಿಂದುಂಟಾದುದೋ ಅಲ್ಲವೆ ಮನ್ನ ಥನಿಂದುಂಟಾದುದೋ ತಿಳಿಯದು. ಎನ್ನ ಮನದಲ್ಲಿ ಎರಡು ಪ್ರಕಾರವಾಗಿ ಸಂದೇಹ ಎರುವುದು ಎಂದು ತನ್ನೊಳು ತಾನು ಊಹಿಸಿ, ಇನ್ನು ಸಂದೇಹದಿಂ ಪ್ರಯೋಜ ನವಿಲ್ಲ. ಹೇಗೆಂದರೆ - ಈ ಶಕುಂತಲೆಯ ಸ್ತನದಲ್ಲಿ ಲೇಪನಂ ಗೆದ್ದಿರುವ ಲಾಮಂ ಚದ ಗಂಧವುಳ್ಳವಳಾಗಿ, ತಾಪದಿಂ ಕೃಶವಾದ ಹಸ್ತದಿಂ ಜಾರುತ್ತಿರುವ ತಾವರೆದಂಟಿ ನದೊಂದುತೋಳ್ವಳೆಯುಳ್ಳವಳಾಗಿ, ಅಧಿಕಸಂತಾಪದಿಂ ಯುಕ್ತಳಾಗಿರ್ದರೂ ಇವಳ ಶರೀರವು ಏನೋ ಒಂದು ಕಾಂತಿಯುಂ ಬೀಳತ್ತ ಮನೋಹರವಾಗಿ ಇರುವುದು. ಮತ್ತು ಕೋಮಲವಾದ ಸ್ತ್ರೀಯರುಗಳಲ್ಲಿ ಮನ್ಮಥನು ವಿರಚಿಸುವ ಸಂತಾದವು ಬೇಸಗೆಯ ಬಿಸಲಿನಿಂದುಂಟಾಗುವ ವ್ಯಥೆಯು ಇವೆರಡೂ ಸಮವಾಗಿರ್ದರೂ ಮದನ ಬಾಧೆಯಿಂ ಒಂದಾನೊಂದು ಮನೋಹರವಾದ ಕಾಂತಿಯುಂಟಾಗುವಂತೆ ಗ್ರೀಷ್ಮ ಕಾಲದಿಂದಾಗಲಾರದು. ಆದ್ದ೦ದೀಶಕುಂತಲೆಗೆ ಮದನ ರವೇ ಸರಿ ಎಂದು ತನ್ನ ಮನದಲ್ಲಿ ನಿಶ್ಚಿಸುತ್ತಿರಲು; ಪ್ರಿಯಂವದೆಯು ಅನಸೂಯೆಯಂ ಏಕಾಂತಕ್ಕೆ ಕರೆದು, “ಎಲೌಸಖಿಯೇ , ಈ ಶಕುಂತಲೆಯು ಮಹಾನುಭಾವನಾದ ರಾಜರ್ಷಿಯಾದ ಆದುಷ್ಯಂತರಾಯನು ನೋಡಿದ್ದು ಮೊದಲಾಗಿ ಅಧಿಕಾಯಾಸದಿಂ ಯುಕ್ತಳಾಗಿ ಏನೋ ಒಂದು ವಿಪತ್ತು ಪೊಂದಿದವಳಂತೆ ಮರುಳುಗೊಂಡಿರುವಳು. ಇವಳ ವ್ಯಥೆಯು ಆ ಮಹಾರಾಜನಂ ನೋಡಿದಿ೦ದಲೇ ಪುಟ್ಟಿತೆಂದು ಎನ್ನ ಮನದಲ್ಲಿ ನಿಶ್ಚಯಿಸುತ್ತಿರುವೆನು” ಎನ್ನಲಾ ಅನಸೂಯೆಯು_ಎಲೌ ಪ್ರಿಯಂವದೆ, ಎನ್ನ ಮನದಲ್ಲಿಯ ನೀನು ಹೇಳ ಸಂದೇಹವಿರುವುದಾದ್ದR೦ದೀಶಕುಂತಲೆಯನ್ನೇ ಕೇಳುವ ಎಂದು ಅವಳಂ ಕುಕ್ಷಿ ತು-'ಎಲೆ ಶಕುಂತಲೆಯೇ, ಈಗ ನಿನ್ನ ಕೆಲವು ವಾಕ್ಯವಂ ಕೇಳಬೇಕಾಗಿರುವುದು. ಏನೆಂದರೆ:-ನಿನಗೆ ಸಂತಾಪವಾದರೋ ಬಹಳ ಬಲವಾಗಿರುವುದು, ಏನು ನಿಮಿತ್ತವೋ