ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

---ಶಾಕುಂತಲನಾಟಕ ನಪೀನಟೀಕೆ ೫೬ ತಿಳಿಯದು” ಎನಲಾಶಕುಂತಲೆಯು ಆ ಹೂವಿನ ಹಾಸಿಗೆಯಿಂ ತನ್ನೆ ಮುಂಭಾಗ ವತಿ ಮೊಳಕೆಯ್ಯನ್ನೂ ಕೊಂಡು,“ಸಖಿಯೇ, ಈಗ ಏನೋಒಂದು ವಾಕ್ಯವಂ ಪೇಳಿರುವೆ, ಅದು ವ್ಯಕ್ತವಾಗಿ ನಿನ್ನ ಮನದಲ್ಲಿರುವಂತೆ ನುಡಿಯುವುದು' ಎಂದು ಬೆಸ ಗೊಳ್ಳಲಾ ಅನಸೂಯೆಯು-'ಎಲ್‌ ಶಕುಂತಲೆಯೇ, ಋಷಿ ಪುತ್ರಿಯರಾಗಿ ಈತವೋ ವನದಲ್ಲಿ ವಾಸವಂ ಗೆಯ್ಯುತ್ತಿರುವ ನಾವು ಮನ್ಮಥವ್ಯಾಪಾರಕ್ಕೆ ಯೋಗ್ಯರಲ್ಲ. ಆದರೂ ಅನೇಕವಾದ ಪುರಾಣಗಳಲ್ಲಿ ಕಾಮಿಗಳಾದ ಜನಗಳಿಗೆ ಯಾವ ಪ್ರಕಾರ ಮಾದ ಮನ್ಮಥವಿಕಾರಗಳು ಹೇಳಿರುವುವೋ ಈಗ ನೀನು ಆ ಪ್ರಕಾರವಾದ ಮದನತಾಪವುಳ್ಳವಳೆಂದು ತೋಚುತ್ತಿರುವೆ. ಯಾವ ನಿಮಿತ್ತದಿಂ ನಿನಗಿಂತು ಸಂತಾಪವುಂಟಾಗಿರುವುದೋ ಅದಂ ಪೇಳು. ಏಕೆಂದರೆ:-ನಿನ್ನ ವ್ಯಥೆಯು ಇಂಥ ಕಾರಣ ದಿಂದುಂಟಾದುದೆಂದು ನಿಶ್ಚಯವಾಗಿ ತಿಳಿಯದೆ ಇದ್ದರೆ ನಿನ್ನ ಶರೀರತಾಪಕ್ಕೆ ತಕ್ಕ ಉಪಚಾರವಂ ಗೆಯ್ಯುವುದಕ್ಕಾಗದೆ ಇರುವುದು. ಲೋಕದಲ್ಲಿ ರೋಗನಿ ದಾನವಂ ತಿಳಿಯದೆ ಔಷಧವಂ ಕೊಡಲು, ದೇಹೋಪದ್ರವಕಾರಣವಾಗುವುದಾದ ಏಂ ಯಥಾರ್ಥವಾಗಿ ನಿನ್ನ ಮನೋಗತವಂ ಪೇಳು ಎನ್ನಲು ; ರಾಯನು ಆ ಅನಸೂಯಾವಾಕ್ಯ ವಂ ಕೇಳಿ.._* ಈ ಶಕುಂತಲೆಗೆ ಉಂಟಾ ಗಿರುವ ಸಂತಾಪವು ಯಾವ ನಿಮಿತ್ತದಿಂದಾದುದೋ ಎಂದು ನಾನು ಸಂಶಯವಂ ಪೊಂದುವಂತೆ ಅನಸೂಯೆಗೂ ಎನ್ನ೦ತೆ ಸಂಶಯ ಪಟ್ಟಿ ಶಕುಂತಲೆಯಂ ಕೇಳುತಿರು ವಳು. ಯಾವ ಕಾರ್ಯಗಳಾದರೂ ಅಪ್ತ ಜನವಾಕ್ಯದಿಂ ನಿಶ್ಚಯಿಸಲ್ಪಡಬೇಕಲ್ಲದೆ ತನ್ನ ಬುದ್ಧಿಯೊಂದಿ೦ದಲೇ ಧೃಡವಂ ಹೊಂದಲಾಆವ್ರ' ಎಂದು ತಿಳಿಯುತ್ತಿರಲು; ಶಕುಂತಲೆಯು ಅನಸೂಯೆ ಕೇಳಿದ ಪ್ರಶ್ನೆಗೆ ತನ್ನ ಮನದಲ್ಲಿ, “ ಎನಗಾ ದರೋ ಅನುರಾಗವು ಹೃದಯದಲ್ಲಿ ಬಹಳ ಒಲವಾಗಿರುವುದು. ಇವುಗೆ ಎನ್ನ ಅಂತರಂಗವಂ ಹೇಳುವುದಕ್ಕೆ ಲಜ್ಜೆಯಿಂ ಸಮರ್ಥಳಾಗಲಾರೆನು” ಎಂದು ಯೋಚ ನೆಯಂ ಗೆಯ್ಯುತ್ತಿರಲು ; ಪ್ರಿಯಂವದೆಯು ಶಕುಂತಲೆಯಂ ಕು* ತು- ಎಲೆ ಶಕುಂತಲೆ, ಈ ಅನಸೂಯೆಯು ನೀತಿವಾಕ್ಯವಂ ಚೆನ್ನಾಗಿ ಹೇಳುತ್ತಿರುವಳು. ನೀನು ನಿನ್ನ ದೇಹದಲ್ಲಿರುವ ಸಂತಾಪಮಂ ಪೇಳದೆ ಉಪೇಕ್ಷೆಯಂ ಗೆಯ್ದೆ ಯಾದರೆ ದಿನದಿನದ ಸರ್ವಾಂಗಗಳಿಂದಲೂ ಕೃಶಳಾಗುತ್ತಿರುವೆ. ಆದರೂ ನಿನ್ನ ಲಾವಣ್ಯಮಯವಾದ ಒಂದಾನೊಂದು ಕಾಂತಿಮಾತ್ರ ಅಗಲಿವೋಗದೆ ಇರುವುದು ” ಎನಲು ;