ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮ - ಕರ್ಣಾಟಕ ಕಾವ್ಯಕಲಾನಿಧಿ ತಿಯಂ ವಿಚಾರಿಸುವುದಕ್ಕೆ ಬರುವಂತೆ ತೋತುವುದು, ನೀನು ಜಾಗ್ರತೆಯಾಗಿ ಒತ್ತಿನಲ್ಲಿರುವ ವೃಕ್ಷಂಗಳ ಮತಿಯಂ ಸೇರುವುದು' ಎಂದು ನುಡಿಯಲಾ ವಾಕ್ಯಕ್ಕೆ ರಾ.ಸು ಅದೇ ರೀತಿಯಿಂದಾಸ್ಥಳದಿಂದೆದ್ದು ಅತಿಬೇದಾನ್ವಿತನಾಗಿ ವೃಕ್ಷಗಳ ಮಕ್ಕಿಯಂ ಸೇರುತಿರುವಷ್ಟ ಅಲ್ಲಿ ; ಗೌತಮಿಯು ಹಸ್ತದಲ್ಲಿ ಜಲಪಾತ್ರೆಯಂ ಪಿಡಿದು ಸಖಿಯರಿಂದೊಡ ಗೂಡಿ ಶಕುಂತಲೆಯು ಇರುವ ಲತಾಗೃಹವಂ ಪ್ರವೇಶವಂ ಗೆಯ್ಯು, ಅವಳ ಸಮೀಪವಂ ಸೇರಿ, ಎ ಪುತ್ರಿ, ಶಕುಂತಲೆ, ನಿನ್ನ ಶರೀರವ ತಾನರಹಿತ ಮಾಗಿರುವುದೆ ? ” ಎಂದು ಕೇಳಲು; ಶಕುಂತಳೆಯು ಎಲ್‌ ಪೂಜ್ಯಳಾದ ಕವಿಯೇ, ಇನ್ನೂ ಸಂತಾ ಪವಿರುವುದು ” ಎಂದು ನುಡಿಯಲು; ಸ ಗೌತಮಿಯು “ಎಲೆ ಪ್ರತ್ರಿ, ಈಗ ನಾನು ತಂದಿರುವ ಶಾಂತಿಕರವಾದ ಈ ದರ್ಭೋದಕದಿಂ ನಿನ್ನ ಸಮಸ್ತ ಸಂತಾಪವು ಪರಿಹರವಾಗುವುದು' ಎಂದು ನುಡಿದು, ಕುಶೋದಕವನ್ನಾ ಶಕುಂತಲೆಯ ಶಿರಸ್ಸಿನಲ್ಲಿ ಪ್ರೋಕ್ಷಣೆಯಂ ಗೆಯ್ತು, ಎಲೆಬಾಲೆ ಯೇ, ಈಗ ಸಾಯಂಕಾಲವಾದುದು, ನಮ್ಮ ಪರ್ಣಶಾಲೆಗೆ ಪೋಗುವ ನಡೆ' ಎಂದು ನುಡಿದು, ಆ ಸ್ಥಳದಿಂದೆದ್ದು ಮುಂದಡಿಯಿಡಲು, ಶಕುಂತಲೆಯು ಬಿನ್ನ ಹೃದಯ ಳಾಗಿ ತನ್ನ ಮನವಂ ಕುಕ್ ತು* ಎಲೈ ಮನವೇ, ಮೊದಲೇ ನಿನ್ನ ಬಯಕೆಯ. ಆಯಾಸವಿಲ್ಲದಂತೆ ಕೈಗೂಡಿರ್ದರೂ ಇನ್ನೂ ಚಾಪಲ್ಯವಂ ಪೊಂದುತ್ತಿರುವೆ. ಈಗ ಗೌತಮಿಯು ಬಂದಿದ್ದು ದಂದುಂಟಾದ ರಾಯನಗಲಿಕೆಯು ಚಿಂತೆಯಂ ಕೂಡಿರುವ ನಿನಗೆ ಮರಳಿಯಾದುಷ್ಯಂತರಾಯನ ಸಂಗದಿಂ ತಾಪಪರಿಹಾರವು ಎಲ್ಲಿ ಉಂಟಾದೀತು ?” ಎಂದು ತನ್ನೊಳು ನುಡಿದು ಕೊಂಡು, ತಾನಿರ್ದ ಲತಾ ಗೃಹದ ಬಳ್ಳಿಗಳ ಸಮೂಹವಂ ನೆವಗೆಯು, ` ಸಂತಾಪಪರಿಹಾರಕವಾದ ಲತಾ ವಲಯವೇ, ಮರಳಿ ನಿನ್ನಂ ಯಾವಾಗ ನೋಡುವೆನೋ ಎಂದು ಇಚ್ಛಿಸುವೆನು ಎಂದು ಮರದ ಮ೪.ತಿಯಲ್ಲಿರ್ದ ರಾಯಂಗೆ ತಾನು ಪೋಗುವ ತನ್ನ ಭಿಪ್ರಾಯವಂ ಸೂಚಿಸಿ, ಆಸ್ಥಾನವಂ ಬಿಟ್ಟು ಪೋಗಲಾಗದೆ, ಅಕದುಃಖದಿಂ ಕಂಬನಿಯಂ ತುಂಬಿ, ಅನಸೂಯೆ ಪ್ರಿಯಂವದೆಯರಿಂದೊಡಗೂಡಿ ಗೌತಮಿಯನ್ನ ನುಸರಿಸಿ ಪೋಗಲು ;