ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ ಕರ್ಣಾಟಕ ಕಾವ್ಯಕಲಾನಿಧಿ -- ಪ್ರಿಯಂವದೆಯು- ಎಲೆ ಸಖಿಯೇ, ನೀನು ಚಂಚಳಾಗಬೇಡ, ಮಹಾರಾ ಜನಾದ ಆ ದುಷ್ಯಂತರಾಜನ ಆಕಾರವಿಶೇಷವು ಪರಿಭಾವಿಸಿ ನೋಡಿದ್ದಲ್ಲಿ ಗುಣಕ್ಕೆ ವಿರೋಧವಂ ಮಾಡಲಾದಾಗಿ ತೋರುವುದು. ಆದರೆ ತಂದೆಯಾದ ಕಣ್ಯ ಮುನೀಶ್ವರನು ಈ ಗಾಂಧರ್ವವಿವಾಹದ ವೃತ್ತಾಂತವಂ ಕೇಳಿ ಏನು ಮಾಡು ವನೋ ತಿಳಿಯದು ” ಎಂದು ನುಡಿಯಲು; ಅನಸೂಯೆಯು_* ಎಲೆ ಪ್ರಿಯಂವದೆ, ನಮ್ಮ ಶಕುಂತಲೆಗೆ ಗಾಂಧ ರ್ವವಿವಾಹವಾದುದು ನಮಗೆ ಹೇಗೆ ಸಮ್ಮತವೋ ಹಾಗೆ ಆ ಕಣ್ವಮುನೀಶ್ವ ರನಿಗೂ ಸಮ್ಮತವಾಗಿರುವುದು ” ಎನಲು; ಪ್ರಿಯಂವದೆಯು ನಮಗೆ ಸಮ್ಮತವಾದರೆ ಆ ಋಷಿಗೆ ಎಂತು ಸಮ್ಮತವಾ ಗುವುದು ? ಹೇಳು " ಎನಲು; ಅನಸೂಯೆಯು ಎಲೆ ಪ್ರಿಯಂವದೆ, ಸದ್ಗುಣಶಾಲಿಯಾದ ಸತ್ಕುಲದಲ್ಲಿ ಪಟ್ಟಿ ರೂಪವನಶಾಲಿಯಾದ ವರನಿಗೆ ಈ ಶಕುಂತಲೆಯಂ ಕೊಟ್ಟು ವಿವಾ ಹವಂ ಗೆಯ್ಯಬೇಕೆಂದು ಮೊದಲೇ ತಂದೆಯಾದ ಕಣ. ಋುಷಿಗೆ ಸಂಕಲ್ಪವಿರ್ದು ದಷ್ಟೆ. ಅವನ ಮನದಲ್ಲಿರ್ದ ಕಾರೈವಂ ದೈವವೇ ಮಾಡಿದುದಾದ್ದಿ೦ದ ಪ್ರಯಾಸವಿಲ್ಲದೆ ಆ ಮುನಿಯು ಕೃತಾರ್ಥನಾದನು ಎಂದು ನುಡಿಯಲು; ಆ ವಾಕ್ಯವಂ ಕೇಳಿ ಪ್ರಿಯಂವದೆಯು..* ಎಲೆ ಸಖಿಯೆ, ಅದಂತಿರಲಿ, ಈಗ ಪೂಜಾಕಾರಕ್ಕೋಸುಗ ಪುಷ್ಪಗಳಂ ಕೊಟ್ಟಿರುವೆಯೋ ಏನು ? " ಎಂದು ಕೇಳಲು; ಆ ಅನಸೂಯೆಯು “ ಎಲೆ ಪ್ರಿಯಂವದೆಯೇ, ಈಗ ಕೊಟ್ಟಿರುವ ಪುಷ್ಪಗಳಿಂದಾಶಕುಂತಲೆಯು ಅನುರೂಪನಾದ ಪುರುಷನು ದೊರಕಲೆಂದು ಪೂಜಿಸು ತಿರ್ದ ಸೌಭಾಗ್ಯಗೌರಿಯಂ ಪೂಜಿಸಬೇಕು ” ಎನ್ನಲು; ಆ ವಾಕ್ಯಕ್ಕೆ ಪ್ರಿಯಂವದೆಯು ಗೌರಿಯ ಪೂಜೆಯಂ ಗೆಯ್ಯುವುದು ಸ್ತ್ರೀಯ ರಿಗೆ ಮುಖ್ಯವಾದ ಕಾರವೆಂದು, ಅನುಮತಿಸಿ, ಸರಸಾಲಾಪವಂ ಗೆಯ್ಯುತ್ತಿರಲು ಅಷ್ಟ ಇಲ್ಲೇ ಏನೋ ಒಂದು ಶಬ್ದವುಂಟಾಗಲಾಅನಸೂಯೆಯು ಕಿವಿಗೊಟ್ಟಾ ಶುವಂ ಕೇಳಿ, “ ಎಲೆ ಪ್ರಿಯಂವದೆಯೇ, ಯಾರೋ ಕೆಲವು ಅತಿಥಿಗಳು ನಮ್ಮಾ ಶ್ರಮಕ್ಕೆ ಬಂದಂತೆ ತೋಚುವುದು. ನಮ್ಮ ಶಕುಂತಲೆಯು ಪರ್ಣಶಾಲೆಯಲ್ಲಿ ಶರೀರದಿಂದಿರುವಳಲ್ಲದೆ ತನ್ನ ಮನದಿಂ ಕೂಡಿರಳಾದ್ದಂ ಬಂದ ಅತಿಥಿಗೆ. ಸತ್ಕಾರವಂ ಮಾಡುವ ವ್ಯಸನದಿಂ ಸುಮ್ಮನಿರುವಳೋ ತಿಳಿಯದು. ಈಗ