ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವನಟೀಕೆ ೬೩, ನಾವು ಕೊಯ್ಲಿರುವ ಪುಷ್ಪಗಳೇ ಸಾಕು, ನಡೆ ಎಂದು ನುಡಿದು, ಪೊಡಮಟ್ಟು ಬರುತ್ತಿರಲು; ಅಷ್ಟ ಕಲ್ಲೇ ದುರಾ ಸಖತೀಶ್ವರನು- ಎಲೆ ಅತಿಥಿಗಳಿಗೆ ಅಪಮಾನವಂ ಗೆಯುವ ಶಕುಂತಲೆಯೇ, ನೀನು ಯಾವ ಪದಾರ್ಥದಲ್ಲಿಯ ಮನವನ್ನಿರಿಸದೆ, ಬಂದಿರುವ ತಪಸ್ಸೇ ದ್ರವ್ಯವಾಗುಳ್ಳ ನಮ್ಮಂ ತಿಳಿಯದೆ, ಏಕಾಗ್ರಚಿತ್ತಳಾಗಿ ಯಾವ ಪುರುಷನಂ ಮನದಲ್ಲಿ ಚಿಂತಿಸುತ್ತಿರುವೆಯೋ, ಮದ್ಯಪಾನದಿಂದ ಮತ್ತನಾದ ಪುರು ಷನು ಪೂರ್ವದಲ್ಲಿ ನಡೆದ ವೃತ್ತಾಂತವಂ ಹೇಗೆ ಮರೆಯುವನೋ, ಹಾಗೆ ಆ ಪುರು ಷನು ಎಷ್ಟು ಪ್ರಕಾರವಾಗಿ ಮೊದಲು ನಡೆದ ಗುತಿನ ವಾಕ್ಯವಂ ನೀನು ಹೇಳಿ ದಾದ್ರೂ ನಿನ್ನ ಮರೆಯಲಿ!” ಎಂದು ಶಾಪವು ಈಯಲು; ಆ ಕರ್ಣಶೂಲದಂತಿರುವ ವಾಕ್ಯವಂ ಕೇಳ ಅನಸೂಯೆಯು ಹಾಹಾ ಕಾರವಂ ಗೆಯ್ಯು, ( ಅತಿ ಕಷ್ಟ ಕಾರ್ಯವು ಬಂದುದು! ನಾನು ಯೋಚಿಸುತಿರ್ದಂ ತಾದುದು! ಪೂಜಾಯೋಗ್ಯನಾದ ಯಾವ ಮಹಾಪುರುಷನು, ಸತ್ಕಾರವಂ ಮಾ ಡದೆ ಅಪರಾಧವಂ ಗೆಯ್ಯುದಂದ, ಈ ರೀತಿಯ ಶಪಿಸಿದನೋ? ಎಂದು ನುಡಿ ಯುತ್ತಾ ಬಂದು, ಮುಂಗಡೆಯಲ್ಲಿ ಅತಿಕೋಪಾಕ್ರಾಂತನಾಗಿ ಪೋಗುತ್ತಿರುವ ದುರ್ವಾಸಋಷಿಯಂ ನೋಡಿ, ಯಾವ ಪುರುಷನಲ್ಲಿ ಅಪರಾಧವಂ ಗೆಯ್ದಳೋ ಎನುತಿರ್ದೆನು. ಇವನು ಶೀಘ್ರಕೋಪಿಯಾದ ದುರಾಸಖುಷಿಯಾಗಿರುವನು. ಸಮಸ್ತರಿಗೂ ಭಯಂಕರವಾಗುವ ಶಾಪವನ್ನಿತ್ತು ಅತಿವೇಗದಿಂ ತಡೆಯುವುದಕ್ಕಾ ಗದ ಗತಿಯಿಂ ಪೋಗುತ್ತಿರುವನು. ಯಾವ ಪುರುಷನಾಗಲಿ ಬೆಂಕಿಯ ದೆಸೆಯಿಂ ತನ್ನ ದೇಹವಂ ದಹಿಸಿಕೊಳ್ಳುವುದಕ್ಕೆ ಹೇಗೆ ಯೋಗ್ಯನಾಗಲಾಏನೋ ಆರೀ ತಿಯಿ೦ ಅಗ್ನಿ ಯಂತಿರುವ ದುರ್ವಾಸನು ಸೇರುವುದಕ್ಕೆ ಯಾವನೂ ಸಮರ್ಥನಾಗ ಲಾಅನು” ಎಂದು ನುಡಿಯಲು: ಪ್ರಿಯಂವದೆಯು_ಎಲೆ ಅನಸೂಯೇ, ಈ ಸಮಯದಲ್ಲಿ ನಾವು ಭಯಾ ತುರರಾಗಿ ಹಿಂದೆಗೆದೆವಾದರೆ ನಮ್ಮ ಶಕುಂತಲೆಯು ಅಧಿಕ ದುಃಖಕ್ಕೆ ಪಾತ್ರಳಾ ಗುವುದಿ೦ ನೀನು ಪೋಗಿ ಚಂಡಕೋಪಿಯಾದ ಆ ಋಷಿಯ ಚರಣಕ್ಕೆ ದಂಡವತ್ನ ಣಾಮವಂ ಗೆಯ್ದು ಉಪಚಾರೋಕ್ತಿಗಳು ನುಡಿದು ಹಿಂದಿರುಗಿಸಿ ಈ ಶಾಪ ವನೀಯದಂತೆ ಮಾಡು. ನಾನು ಈ ಋಷಿಗಳಿಗೆ ಅರ್ಭ್ಯಪಾದ್ಯಂಗಳನ್ನೀಯುವು ದಕ್ಕೆ ಜಲ ಮೊದಲಾದ ಪೂಜಾದ್ರವ್ಯವು ತೆಗೆದುಕೊಂಡು ಬರುವೆನು ಎಂದು ನುಡಿದು, ತ್ವರೆಯಿಂದ ಕಂದ ಮಲ ಪುಷ್ಟ ಮೊದಲಾದ ಪೂಜಾದ್ರವ್ಯಂಗಳಂ