ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಕರ್ಣಾಟಕ ಕಾವ್ಯ ಕಲಾನಿಧಿತೆಗೆದುಕೊಂಡು, ಆ ದುರ್ವಾಸಋಷಿಯ ಸಾನ್ನಿಧ್ಯಕ್ಕೆ ವೋಗಲು; ಅನಸೂಯೆಯು, ಜಾಗ್ರತೆಯಿಂ ಪೋಗುವೆನೆಂದು ಎಡಹಿ ಹಸ್ತದಲ್ಲಿದ್ದ ಪುಷ್ಪಪಾತ್ರೆಯು ಬಿದ್ದುದಂ ನೋಡಿ, ದೇವತಾಪೂಜೆಗೋಸುಗ ಕೊಯ್ಲಿದ್ದ ಪಪ್ಪ ಗಳೆಲ್ಲಾ ಪೋದುವಲ್ಲಾ ಎಂದು ವ್ಯಸನಾತುರಳಾಗಿ, ಆ ಕುಸುಮಗಳಂ ನೊ ಡುತ್ತ ನಿಂದಿರಲು, ಪ್ರಿಯಂವದೆಯು ಆ ದುರ್ವಾಸಋಷಿಯ ಪಾದಪೂಜೆಯಂ ಗೆಯು ಹಿಂದಿ ರುಗಿ ಬಂದು ಅನಸೂಯೆಯಂ ಕು ತು_ಎಲೆ ಅನಸೂಯೆ, ಆ ದುರ್ವಾಸ ಋಷಿಯು ಸ್ವಭಾವಮಾಗಿ ವಕ್ರನಾಗಿ ನಾನೆಷ್ಟು ಪ್ರಕಾರವಾಗಿ ಉಚಿತೋಪಚಾರ ವಾಕ್ಯವಂ ಪೇಳಿದಾಗ ಆ ವಾಕ್ಯವಂ ಕೇಳದೆ ಹೋದನು. ಆದರೂ ನಾನು ಚಮತ್ಕಾರವಾಕ್ಯಗಳಂ ನುಡಿದು ಆ ಖಷಿಯು ದಯಾಶಾಲಿಯಾಗುವಂತೆ ಮಾಡಿ ದೆನು” ಎನ್ನಲು; ಆ ಅನಸೂಯೆಯು ಅಧಿಕಾಶ್ಚರ್ಯದಿಂ ಯುಕ್ತಳಾಗಿ-ಎಲೆ ಪ್ರಿಯಂ ವದೆಯೇ, ಒಂದು ಕ್ಷಣದಲ್ಲಿ ಆ ಖುಷಿಯು ದಯಾಶಾಲಿಯಾದನೆಂಬುವುದು ಆಶ್ಚರ್ಯವಾಗಿ ತೋ೬ವುದು. ಆದರೂ ಆ ಋಷಿಯು ಅಪ್ಪಣೆಯೇನಿರುವನು? ಅದನ್ನು ಹೇಳು ಎಂದು ನುಡಿಯಲು; ಪ್ರಿಯಂವದೆಯು_* ಎಲೆ ಸಖಿಯೇ, ಕೇಳು, ಅದುರ್ವಾಸಋಷಿಯು ಎಷ್ಟು ದೀನೋಕ್ತಿಗಳಂ ಪೇಳಿದರೂ ಹಿಂದಿರುಗಿ ಬರುವುದಕ್ಕೆ ಇಚ್ಛಿಸದೆ ಪೋದನು. ಆಗ ನಾನು ಅಧಿಕವಾಗಿ ವಿಜ್ಞಾಪನೆಯಂ ಗೆಯ್ದನು: ಹೇಗೆಂದರೆ- ಎಲೈ ಷಡ್ಡು ನೈಶ್ವರ ಸಂಪನ್ನನಾದ ಮಹಾಋಷಿಯೇ, ಆ ಶಕುತಂಲೆಯು ವಿವಾಹಕ್ಕೆ ಮೊದಲು ನಿನ್ನಲ್ಲಿ ಮಾಡಿದ ಭಕ್ತಿಯನ್ನು ನೋಡಿಯಾದರೂ ನಿನ್ನ ತಪೋಮಾಹಾತ್ಮವನ್ನ ಯದೆ ಇರುವ ಎನ್ನ ತಂಗಿಯ ಇದೊಂದು ಅಪರಾಧವಂ ಕ್ಷಮಿಸಿ, ಅವಳು ಸಲಹಬೇಕೆಂದು ಬಹಳವಾಗಿ ಭಯಭಕ್ತಿಯಿಂ ಪ್ರಾರ್ಥನೆಯಂ ಗೆಯ್ಯಲು, ಅನಂತರದಲ್ಲಿ ಆ ಮಹಾಋಷಿಯು ದಯಾನ್ವಿತನಾಗಿ-ಎಲೆ ಬಾಲೇ, ನಾನು ಪೇಳಿದ ವಾಕ್ಯವು ಒಂದು ಕಾಲಕ್ಕೂ ವ್ಯರ್ಥವಾಗಲಾದು. ಆದರೂ ನೀನು ಅಧಿಕವಾಗಿ ಬೇಡಿಕೊಂಡಿದ್ದ ಕ೦ ಪೇಳುವೆನು, ಕೇಳು. ನಿಮ್ಮ ಈ ಶಕುಂ ತಲೆಯು ಆ ದಷ್ಯಂತರಾಯನು ಕೊಟ್ಟಿರ್ದುದೇನಾದರೂ ಒಂದು ಗುತಿನ ಆಭ ಕರಣವಿದ್ದಲ್ಲಿ ಅದು ಆ ರಾಯಂಗೆ ತೋರಿಸಲಾಕ್ಷಣದಲ್ಲಿ ಎನ್ನ ಶಾಪವು ಪರಿ ಹರವಾಗಿ, ಆ ರಾಯನು ನಿಮ್ಮ ಶಕುಂತಲೆಯಂ ಸ್ಮರಿಸವನು' ಎಂದು ನುಡಿದು