ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭.೭ -ಶಾಕುಂತಲನಾಟಕ ನವೀನಟೀಕೆ ಕೈ ಕಾಲುಗಳು ಚಲಿಸುವುದಕ್ಕೆ ಆಗದೆ ಇರುವುವು. ಯಾವ ಮನ್ಮಥನಿಂದ ನಮ್ಮ ಸಖಿಯಾದ ಶಕುಂತಲೆಯು ಸತ್ಯವಂತನಲ್ಲದ ಪೂರ್ವ ಸಂಬಂಧವು ಸ್ವಲ್ಪವೂ ಇಲ್ಲದೆ ಇದ್ದ ದುಷ್ಯಂತರಾಯನಲ್ಲಿ ಅನುರಾಗಯುಕ್ತಳಾಗಿ ಶೂನ್ಯ ಹೃದಯಳಾಗಿ ಮಹಾ ದುಃಖಾನುಭವಕ್ಕೆ ಯೋಗ್ಯಳಾದಳೆ, ಆ ಮನ್ಮಥನು ಸಂಪೂರ್ಣವಾದ ಮನೆ ರಥವುಳ್ಳವನಾಗಲಿ! ” ಎಂದು ನಿಂದಿಸಿ ನುಡಿದು, ಒಂದು ಕ್ಷಣ ಯೋಜನೆಯಂ ಗೆಯು, ಆ ದುಷ್ಯಂತರಾಯನು ತನ್ನ ಅಂತಃಪರಸ್ತ್ರೀಯರ ಮೇಲಣ ಪ್ರೀತಿ ಯಿಂದ ಈ ಶಕುಂತಲೆಯಂ ವದಿರುವನೋ? ಹಾಗಲ್ಲದಿರೆ ದುರ್ವಾಸಮಹಾಮುನಿ ಮಿತ್ತ ಶಾಪದಿಂ ವಿಸ್ಕೃತಿಯಂ ಪಡೆದಿರುವನೋ? ಇನ್ನು ಎರಡು ಕಾರಣವಿಲ್ಲ ದಿರ್ದರೆ, ಇಷ್ಟು ಜನ ಸ್ತ್ರೀಯರೆನಗಾಗಿರ್ದರೂ ಈ ಶಕುಂತಲೆಯೇ ಪ್ರಾಣಪ್ರಿಯ ಳೆಂತಲೂ ಇವಳ ಗರ್ಭದಲ್ಲಿ ಹುಟ್ಟಿದ ಪುತ್ರನಿಗೆ ಸಮಸ್ವರಾಜ್ಯದ ದೊರೆತನವನ್ನೇ ಯುವೆನೆಂತಲೂ ಇನ್ನೂ ನಾನಾಪ್ರಕಾರವಾದ ಪ್ರತಿಜ್ಞಾ ವಾಕ್ಯಗಳಂ ನುಡಿದು ಪುರವಂ ಕು ತು ಪೋದ ಆ ದುಷ್ಯಂತರಾಯನು ಯೋಗಕ್ಷೇಮಕ್ಕಾದರೂ ಒಂದು ಪತ್ರಿಕೆಯನ್ನಾದರೂ ಕಳುಹಿಸಗೆ ಇರನು. ಈಗ ಆ ರಾಯನು ನಮ್ಮ ಶಕುಂತಲೆಯಂ ಮತಿತಾಗ ಅವನಿಗೆ ಸ್ಮರಣೆ ಬಗಲೆಂದು ಅವನಿತ್ತು ಪೋಗಿರುವ ಉಂಗರವಂ ಕಳುಹಿಸಿದಲ್ಲಿ ಆ ಉಂಗುರವು ತೆಗೆದು ಕೊಳ್ಳುವನೋ ಇಲ್ಲದಿದ್ದರೆ ಅರಣ್ಯದಲ್ಲಿ ಸ್ವಭಾವಿಕವಾಗಿಯೇ ದುಃಖವಂ ವೊಂದುವ ಖುಷಿ ಪುತ್ರಿಯರು ಕಳು ಹಿಸಿದ್ದು ಎಂದು ಉಪೇಕ್ಷೆಯಂ ಗೆಯ್ಯುವನೋ ತಿಳಿಯದು. ಅದಂತಿರಲಿ. ಸ್ವಾನಾರ್ಥವಾಗಿ ಪೋಗಿರುವ ತಂದೆಯಾದ ಕಣ್ಯ ಮುನಿಗೆ ನಮ್ಮ ಶಕುಂತಲೆಯು ಗಾಂಧರ್ವ ವಿವಾಹದಿಂ ವಿವಾಹಿತಳಾಗಿ, ಆ ದುಷ್ಯಂತರಾಯನೊಡನೆ ಸಂಭೋಗಾ ದಿಗಳಂ ಗೆಯ್ತು ಈಗ ಗರ್ಭಿಣಿಯಾಗಿರುವ ಸಂಗತಿಯಂ ನಾನು ಹೇಳಿದವಳಾದರೆ ನೀನೂ ಪ್ರಿಯಂವದೆಯರೀರ್ವರೂ ಸೇರಿ ನಮ್ಮ ಶಕುಂತಲೆಗೆ ದುರ್ವ್ಯಾಪಾರವಂ ಕಲಿಸಿದರೆಂದು ನಾರ್ವರಂ ಶಿಕ್ಷಿಸದೆ ಇರದು. ಮತ್ತು ನಮ್ಮ ಶಕುಂತಲೆಯು ನಮ್ಮ ದುಷ್ಯಂತರಾಯನ ಸಂಗದಿಂ ಗರ್ಭವಂ ತಾಳಿದಳು, ದುರ್ವಾಸಋಷಿಯು ಕ್ರೂರವಾದ ಶಾಪವನ್ನಿತ್ತಿರುವನು. ಈ ಪ್ರಕಾರವಾಗಿ ಕಾರ್ಯಂಗಳೆಲ್ಲಾ ಮುಂಚಿ ಹೋಗಿರುವುವು. ಇನ್ನು ಮೇಲೆ ನಾನುತಾನೇ ಮಾಡತಕ್ಕದ್ದೇನು? ಮುಂದೆ ಎಂ ತಾಗುವುದೆ? ತಿಳಿಯದು' ಎಂದು ಅಧಿಕವ್ಯಸನಾತುರಳಾಗಿ, ಬಂದು ವೃಕ್ಷ ಚ್ಛಾಯೆಯಲ್ಲಿ ತನ್ನೊಳುತಾನೇ ಅಲೋಚನೆಯಂ ಗೆಯ್ಯುತ್ತಾ ಕುಳಿತಿರಲು; ಅಷ್ಟರಲ್ಲೇ ಪ್ರಿಯಂವದೆಯು ಅತ್ಯಂತ ಸಂತುಷ್ಟಳಾಗಿ - ಮುಗಳಗೆಯಿದೆ