ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೮ - ಕರ್ಣಾಟಕ ಕಾವ್ಯಕಲಾನಿಧಿ ದೊಡಗೂಡಿ ಅನಸೂಯೆಯು ಇರುವ ಸ್ಥಳಕ್ಕೆ ಬಂದು- ಎಲೆ ಅನಸೂಯೆ, ನಮ್ಮ ಶಕುಂತಲೆಯು ದುಷ್ಯಂತರಾಯನ ಪ್ರತಿಷ್ಟಾನಪುರವಂ ಕುರಿತು ಪೋಗುವ ಳಾದ್ದ೦ದವಳ ಸಂಗಡ ಕೆಲವುದೂರ ಪೋಗಿ ಬರುವೆವು, ನೀನು ಜಾಗ್ರತೆಯಿಂದ ನಡೆ ನಡೆ ಎಂದು ತ್ವರೆಪಡಿಸಲು; ಆ ಪ್ರಿಯಂವದೆಯಂ ಕು * ತು ಅನಸೂಯೆಯು- ಎಲೆ ಸಖಿಯೇ, ನಮ್ಮ ಶಕುಂತಲೆಯು ಹೇಗೆ ಹೋಗುವಳು? ಅವಳಂ ಎಂತು ಕಳುಹಿಸುವರು? ಅದು ಸಂಗ ತಿಯಂ ವಿಸ್ತಾರವಾಗಿ ವಿವರಿಸು ಎನಲು; ಆ ಪ್ರಿಯಂವದೆಯು_• ಎಲೆ ಸಖಿಯೇ ಕೇಳು ಆ ಶಕುಂತಲೆಯ ಯೋಗ ಕ್ಷೇಮವ ಕೇಳಲಿಕ್ಕೆ ಯುಳ್ಳ ನಾನು ಅವಳ ಸಮೀಪವಂ ಕು? ತು ಪೋದೆನು ಎನಲು; ಆ ಅನಸೂಯೆಯು ಆಮೇಲೆ ಏನುನಡೆದುದು ??” ಎನಲು: ಪ್ರಿಯಂವದೆಯು_* ಎಲೆ ಸಖಿಯೇ, ಕೇಳು, ನಮ್ಮ ಶಕುಂತಲೆಯು ಲಜ್ಜೆಯಿಂದ, ಕಣ್ಯ ಮಹಾಮುನಿಯು, ಈವಾರ್ತೆಯಂ ಕೇಳಿ ಏನೆಂದು ನುಡಿ ಯುವನೋ ಎಂಬ ಭಯದಿಂದಲೂ ಯುಕ್ತಳಾಗಿ ತಲೆಯಂ ಬಗ್ಗಿಸಿ ಕುಳಿತಿರಲು; ಆ ಕಣ್ವಮುನೀಶ್ವರನು ಬಂದು ಅತಿ ಸಂತೋಷದಿಂದಾಶಕುಂತಲೆಯಂ ಮುದ್ದು ಗೆದ್ದು ಸಂತುಷ್ಟ ಹೃದಯನಾಗಿ ಒಂದಾನೊಂದು ವಾಕ್ಯವಂ ಪೇಳಿದನು. ಅದೆಂತನೆ:- ಎಲೆ ಪುತ್ರಿಯಾದ ಶಕುಂತಲೆಯೇ, ಕೇಳು. ಯಜ್ಞವಂ ಗೆಯ್ಯುವ ಯಜಮಾನನು ಹೊಗೆಯಿಂ ಕಣ್ಣು ಕಾಣದೆ ಆಹುತಿಯಂ ಮಾಡಿದರೂ ಆ ಆರು ತಿಯು ದೈವಯೋಗದಿಂ ಅಗ್ನಿಯ ಹಸ್ತದಲ್ಲಿ ಬಿದ್ದಂತೆಯ, ಬುದ್ದಿಶಾಲಿಯಾದ ಶಿಷ್ಯನಿಗೆ ಸೇಳಿದ ವಿದ್ಯದಂತೆಯ, ನೀನು ಎನಗೆ ತಿಳಿಸದೆ ಇರ್ದರೂ ಧರ್ಮ ಮಾರ್ಗಕ್ಕೆ ಅನುಕೂಲವಾದ ಗಾಂಧರ್ವ ವಿವಾಹದಿಂ ಮಹಾರಾಜನಾದ ದುಷ್ಯಂತ ರಾಜಂಗೆ ಪತ್ನಿ ಯಾದುದk೦ ಸಂತೋಷಕ್ಕೆ ಕಾರಣಳಾದೆ. ಈಗ ಎನ್ನ ಶಿಷ್ಯರ ಸಹಾಯವಂ ಗೆಯ್ತು ನಿನ್ನ ಪತಿಯಾದ ದುಷ್ಯಂತರಾನ ಸಮಾಸಕ್ಕೆ ಕಳುಹಿಸು ವೆನು' ಎಂದು ನುಡಿದು ಅತಿ ಸಂತೋಷಯುಕ್ತನಾಗಿರುವನು” ಎಂದು ನುಡಿಯಲು; ಅನಸೂಯೆಯು ಈ ವೃತ್ತಾಂತವೆಲ್ಲ ವಂ ಕೇಳಿ, « ಯಾರು ನಮ್ಮ ಕಣ್ಮಯ ಷಿಗೆ ವಿಜ್ಞಾಪನೆಯಂ ಗೆಯ್ಯರೆಂದು ಕೇಳಲಾಪ್ರಿಯಂವದೆಯು- ಎಲೆ ಸಖಿಯೇ, ಆ ಕಣ್ವ ಋಷಿಯು ಔಪಾಸನೆಯ ಗೃಹವಂ ಕುಳತು ಪೋಗಲು ಅಲ್ಲಿ ಅಶರೀರವಾಣಿ ಆಡುದು” ಎನಲು;