ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೦ ಕರ್ಣಾಟಕ ಕಾವ್ಯಕಲಾನಿಧಿಆ ವಾಕ್ಯವಂ ಕೇಳಿದ ಪ್ರಿಯಂವದೆಯ ಪೋಗುತ್ತಿರ್ದ ಅನಸೂಯೆಯಂ ಕುಲ ತು- ಎಲೆ ಅನಸೂಯೆಯೇ, ನೀನು ಜಾಗ್ರತೆಯಾಗಿ ಬರುವುದು. ನಮ್ಮ ಋಷಿಶಿಷ್ಯರುಗಳು ಪ್ರತಿಷ್ಟಾನಪುರಕ್ಕೆ ಪೋಗುವುದಕ್ಕೆ ಧ್ವನಿಗೈಯ್ಯುತ್ತಿರುವರು.” ಎಂದು ನುಡಿಯಲು; ಅನಸೂಯೆಯು ಅತಿ ತ್ವರೆಯಿಂ ಭೋಗಿ ಅಲಂಕಾರಸಾಮಗ್ರಿಯಂ ತೆಗೆದು ಕೊಂಡು ಬಂದು-ಎಲೆ ಪ್ರಿಯಂವದೆಯೇ, ನಮ್ಮ ಶಕುಂತಳೆಯ ಸಮೀಪಕ್ಕೆ ಫೋಗುವ, ನಡೆ ” ಎಂದು ನುಡಿದು ಅವಳಿಂದೊಡಗೂಡಿ ಬರುತ್ತಿರಲು; ಅಷ್ಟ ಅಲ್ಲಿ ಮುಂಬಾಗದಲ್ಲಿ ಋಷಿಪತ್ನಿಯರಿಂ ಸುತ್ತುವರಿಯಲ್ಪಟ್ಟ ಶಕುಂ ತಲೆಯಂ ಕಂಡು ಪ್ರಿಯಂವದೆಯು ಎಲೆ ಸಖಿಯೇ, ನಮ್ಮ ಶಕುಂತಲೆಯಂ ತೃಣಧಾನ್ಯಗಳ ಶುಭ್ರವಾದ ಅಕ್ಷತೆಗಳಂ ಹಸ್ತಗಳಲ್ಲಿ ಪಿಡಿದು ಸ್ವಸ್ತಿ ವಾಚನೆಯಂ ಹೇಳುತ್ತಿರುವ ಖುಷಿಪತ್ನಿ ಗಳಿ೦ ಮಂತ್ರ ಜಲದಿಂ ಶಿರದಲ್ಲಿ ಪ್ರೋಕ್ಷಣೆಯಂ ಗೆಯಿಸಿ ಕೊಳ್ಳುತ್ತ ಸಂತುಷ್ಟಳಾಗಿ ಮುಂಬಾಗದಲ್ಲಿ ಕುಳಿತಿರುವಳು. ಈ ಶಕುಂತಲೆಯ ಸಮೀಪಕ್ಕೆ ಪೋಗುವ ” ಎಂದು ಹೇಳುತ್ತ ಬರುತ್ತಿರಲು; - ಇತ್ತಲು ಶಕುಂತಳೆಯ ಸುತ್ತಲೂ ಇರುವ ಋಷಿಪತ್ನಿ ಯರಲ್ಲೊಬ್ಬಳು ಶಕುಂತಳೆಯಂ ಕು ತು- ಎಲೆ ಮಂಗಳಾಂಗಿಯೇ, ನಿನ್ನ ಪತಿಯಾದ ದುಷ್ಯಂತ ರಾಯನಿಗೆ ಬಹುಮಾನ ಸೂಚಕವಾದ ಮಹಾದೇವಿಯೆಂಬ ನಾಮಧೇಯವಂ ಪಡೆ?? ಎಂದು ನುಡಿಯಲು ಮತ್ತೋರ್ವಳು- ಎಲೆ ಶಕುಂತಳೆಯೇ, ನೀನು ಶೂರಾಗ್ರೇಸರ ನಾದ ಪುತ್ರನಂ ಪಡೆ ಎಂದು ಹೇಳಲು, ಇನ್ನೊರ್ವಳು. ಎಲೈ ಕೋಮಲಾಂಗಿ ಯಾದ ಶಕುಂತಲೆಯೇ, ನಿನ್ನ ಪತಿಯಾದ ದುಷ್ಯಂತರಾಯಂಗೆ ಸಮ್ಮತಳಾಗು ಎನ್ನಲು. ಈ ಪ್ರಕಾರವಾಗೆಲ್ಲ ರೂ ಆಶಕುಂತಳೆಗೆ ಆಶೀರ್ವಾದವಂ ಗೆಯ್ಯು ಗೌಡ ಮಿಯನ್ನವಳ ಸಮಾಜದಲ್ಲಿ ಬಿಟ್ಟು ತಮ್ಮತಮ್ಮ ಪರ್ಣಶಾಲೆಯಂ ಕು ತು ಫೋಗಲು; ಆ ಅನಸೂಯೆ ಪ್ರಿಯಂವದೆಯರೀರ್ವರು ಆಶಕುಂತಲೆಯ ಸಮಾಜವಂ ಸಾರ್ದು_* ಎಲೈ ಪ್ರಾಣಪ್ರಿಯಳೇ, ನಿನಗೆ ಮಂಗಳಸ್ನಾನವಾದುದೆ? ಎಂದು ನುಡಿಯಲು; ಆಶಕುಂತಳೆಯು ಸಂತುಷ್ಟ ಚಿತ್ತಳಾಗಿ-ಎಲ್‌ ಸಖಿಯರುಗಳಿರಾ, ನಿಮಗೆ ಕ್ಷೇಮವೆ? ಬನ್ನಿ ಕುಳ್ಳಿರಿ ಎಂದು ತನ್ನ ಸಮೀಪಕ್ಕೆ ಕರೆಯಲು; ಅವರೀರ್ವರು ತಾವುತಗೆದುಕೊಂಡು ಬಂದಿರ್ದ ಮಂಗಳದ್ರವ್ಯದಿಂ ತುಂಬಿ