ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨ -ಕರ್ಣಾಟಕ ಕಾವ್ಯಕಲಾನಿಧಿಇನ್ನೋರ್ವ ಋಷಿಕುಮಾರನು ಎಲೌ ಪೂಜ್ಯಳಾದ ಗೌತಮಿಯೇ, ಈ ಆಭರಣಂಗಳು ಬಂದ ಸಂಗತಿಯಂ ಪೇಳುವೆನು ಕೇಳು. ನಮ್ಮ ಋಷಿಯು ನಮ್ಮ ಬೃರಂ ಕುಯ ತು_“ಎಲೈ ಬಾಲಕರುಗಳಿರಾ ! ನಮ್ಮ ಶಕುಂತಲೆಯು ತನ್ನ ಪತಿ ಗೃಹವಂ ಕುತು ಪೋಗುವಳು, ಅವಳಿಗೆ ಅಲಂಕಾರವಂ ಗೆಯ್ಯುವುದಕ್ಕೋಸುಗ ನಮ್ಯಾಶ್ರಮದಲ್ಲಿರುವ ಸಮಸ್ತ ವೃಕ್ಷಂಗಳ ದೆಸೆಯಿಂದ ಪುಷ್ಪಗಳಂ ಕೊಯ್ದು ಕೊ೦ ಡು ಬರುವುದು, ಎಂದು ಅಪ್ಪಣೆಯನ್ನೀಯಲಾಬಳಿಕ ನಾವೀರ್ವರು ಪುಪ್ಪಗಳಂ ಕೊಯ್ಯುವುದಕ್ಕೋಸುಗ ಆ ವೃಕ್ಷಗಳ ಸವಿಾಪಕ್ಕೆ ಪೋಗಲು-ಆ ವೃಕ್ಷಗಳಲ್ಲಿ ಒಂದು ವೃಕ್ಷವು ಚಂದ್ರನೋಪಾದಿಯಲ್ಲಿ ಶುಭ್ರವಾದ ಸೀರೆಯನ್ನಿತ್ತುದು; ಇನ್ನೊ೦ ದು ಸೌಭಾಗ್ಯವೃದ್ಧಿಕರವಾದ ಭೂಷಣವಂ ಕೊಟ್ಟಿತು; ಪಾದಂಗಳಿಗೆ ಲೇಪ ನವಂ ಗೆಯ್ಯುವುದಕ್ಕೆ ಯೋಗ್ಯವಾದ ಅಲತಿಗೆಯ ರಸವಂ ಮತ್ತೊಂದು ವೃಕ್ಷ ವಿತ್ತುದು. ಇದಲ್ಲದೆ ವನದೇವತೆಯು ಮತ್ತೆ ಕೆಲವು ವೃಕ್ಷಗಳ ಸಂದಿಗಳಲ್ಲಿ ಹುಟ್ಟಿದ ಹಸ್ತಂಗಳಿಂದ ಅನೇಕ ಪ್ರಕಾರವಾದ ರತ್ನಾಭರಣಗಳ ಆಯಾಯ ವೃಕ್ಷಗಳಿ೦ ತೆಗೆದು ಕೊಟ್ಟಿರುವಳಾದ್ದ ಆಿಂದೀಯಾಭರಣಗಳಂ ತೆಗೆದುಕೊಂಡು ಬಂದೆವು ಎನಲು; ಆ ಪ್ರಿಯಂವದೆಯು ಶಕುಂತಲೆಯ ಮುಖವಂ ನೋಡಿ._* ಎಲೆ ಶಕುಂ ತಲೆಯೇ, ವೃಕ್ಷಂಗಳೆಲ್ಲವೂ ಅಪ್ರಾರ್ಥಿತವಾಗಿ ಸಮಸ್ವಾಭರಣವಂ ಕೊಟ್ಟು ವು. ನೀನು ನಿನ್ನ ಪತಿಯಾದ ದುಷ್ಯಂತರಾಯನ ಗೃಹದಲ್ಲಿ ಸಮಸ್ತವಾದ ರಾಜ ಲಕ್ಷ್ಮಿಯನ್ನನುಭವಿಸುವುದಕ್ಕೆ ಇದೇ ಶುಭಶಕುನವು ಎಂದು ನುಡಿಯಲು; ಆ ಶಕುಂತಲೆಯು ಲಜ್ಜೆಯಿಂದೊಡಗೂಡಿರಲು ; . ಅಷ್ಟರಲ್ಲೇ ಆಭರಣವಂ ತಂದ ಋಷಿಕುಮಾರನಾದ ನಾರದನು ಸಂಗಡ ಬಂದಿರುವ ಗೌತಮನಂ ಕುತು- ಎಲೆ ಮಿತ್ರನಾದ ಗೌತಮನೇ ಈಗ ಸ್ನಾನಕ್ಕೆ ಇಳಿದಿರುವ ಕಮಹಾಋಷಿಗೆ ಹೀಗೆ ವೃಕ್ಷಗಳು ಸಮಸ್ತಾಭರಣಂಗಳನ್ನಿತ್ತು ಧಂ ಆ ಆಭರಣಗಳಂ ಗೌತಮಿಯ ಹಸ್ತಕ್ಕೆ ಶಕುಂತಲೆಗೆ ಅಲಂಕಾರವಂಗೆಯ್ಯು ವುದಕ್ಕೆ ಕೊಟ್ಟಿರುವ ಈ ಸಂಗತಿಯಂ ವಿನ್ನ ಪಂ ಗೆಯ್ಯುವ, ನಡೆ ” ಎಂದು ಅವನಂ ಕರೆದುಕೊಂಡು ಪೋಗಲು ; .: ಅನಸೂಯೆಯು ಎಲೆ ಪ್ರಿಯಂವದೆಯೇ, ನಮ್ಮ ಶಕುಂತಳೆಯು ಯೋಗ್ಯ ವಾದ ಆಭರಣವುಳ್ಳವಳಾದಳು. ಇವಳಿಗೆ ಅಲಂಕಾರವಂ ಮಾಡಬೇಕಾದಲ್ಲಿ