ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೩ -ಶಾಕುಂತಲನಾಟಕ ನವೀನಟೀಕೆಚಿತ್ರವಂ ಒರೆಯುವುದ«ಲ್ಲಿ ಪರಿಚಯವಿದ್ದರೆ ಈ ಕಾರ್ಯವಂ ಮಾಡಬಹುದು, ಎಂದು ನುಡಿಯಲು; ಶಕುಂತಲೆಯು ಎ ಸಟಿಯರುಗಳಿರಾ, ನಿಮ್ಮ ಕುಶಲತೆಯಂ ನಾನೂ ತಿಳಿದಿರುವೆನು. ಆದ್ದಯ೦ ಚಿತ್ರ ಕಾರ್ಯದಿಂ ಪ್ರಯೋಜನವೇನು? ಎಂದು ಹೇಳು; ಆ ವಾಕ್ಯಕ್ಕೆ ಆ ಸಖಿಯರೀರ್ವರು ಮನ್ಮಥನ ಜಯಲಕ್ಷ್ಮಿಯನ್ನ ಲಂಕರಿ ಸುವರೋ ಎಂಬಂತೆ ಸರ್ವಾಂಗ ಸುಂದರಿಯಾದ ಆ ಶಕುಂತಲೆಯನ್ನ ನೇಕ ಭೂಷಣಂ ಗಳಿಂದಲಂಕರಿಸುತ್ತಿರಲು;

  • ಅಷ್ಟಲ್ಲೇ ಕಣ್ಣಮುನಿಯು ಸರಸ್ಸಿನಲ್ಲಿ ಸ್ನಾ ನವಂಗೆಯು ಬಂದು, ಸಮಸ್ವಾಭರಣಂಗಳಿಂ ಭೂಷಿತಳಅಗಿರುವ ಶಕುಂತಲೆಯಂ ನೋಡಿ, ಮನದ ದುಃಖ ದಿಂದೊಂದು ವಾರ್ತೆಯಂ ನುಡಿಯುತಿರ್ದನು:-

ಅದೆಂತೆನೆ:-ನಮ್ಮ ಶಕುಂತಲೆಯು ಇದುವರೆಗೂ ಎನ್ನಿ೦ ಪೋಷಿತಳಾಗಿ ಈಗ ತನ್ನ ಪತಿಯಾದ ದುಷ್ಯಂತರಾಯನ ಗೃಹವಂ ಕುತು ಪೋಗುವಳೆಂದು ಎನ್ನ ಮನವು ಅತಿ ದುಃಖದಿಂ ಯುಕ್ತವಾದುದು. ಹೊಸೂಸದಂತೆ' ರೆಪ್ಪೆಗೆ ಇಲ್ಲೇ ತಡೆದಿರುವ ಕಣ್ಣೀರುಗಳಿಂ ಕಲುಷವಾಗಿರುವ ಎನ್ನಿ ದೃಷ್ಟಿ ಗಳು ರಾಜಗೃ ಹವಂ ಪೊಂದಿದ ಮೇಲೆ ಮರಳಿ ಈ ಶಕುಂತಳೆಯಂ ನೋಡುವುದಕ್ಕಿಲ್ಲವೆಂಬ ಚಿಂತೆ ಯಿಂ ಅಲಸವಾಗಿ ಇನ್ನೊಂದು ಕಡೆಗೆ ಚಲಿಸದೆ ಇರುವುವು. ಮತ್ತು ಅರಣ್ಯ ದಲ್ಲಿ ವಾಸವಂ ಮಾಡಿಕೊಂಡು ಸಂಸಾರಸುಖವಂ ಬಿಟ್ಟ ಧರ್ಮಜ್ಞಾನಿಯಾದ ಎನಗೂ ಈ ಶಕುಂತಲೆಯಂ ಸಾಕಿದ ಪ್ರೇಮಮಾತ್ರದಿಂದಲೇ ವ್ಯಾಕುಲತ್ವವು ಪ್ರಾಪ್ತವಾಗಿರುವುದು. ಇಂತಲ್ಲದೆ ಪಪುತ್ರರುಗಳಿಂದೊಡಗೊಂಡು ಸಂಸಾರ ಸುಖಾಸಕ್ತರಾಗಿರುವ ಜನರುಗಳು ತಮ್ಮ ತಮ್ಮ ಪತ್ನಿ ಯರಲ್ಲಿ ಪುಟ್ಟಿದ ಹೆಣ್ಣು ಮಕ್ಕಳುಗಳು ಅವರವರ ಪತಿಗೃಹವಂ ಕುಳತು ಪೋಗುವುದಿಂದುಂಟಾಗುವ ಹೊಸಪರಿಯಾದ ದುಃಖಗಳಿ೦ ಪೀಡಿತರಾಗಿ ಹೇಗೆ ಜೀವಿಸುವರೋ ತಿಳಿಯದು!) ಎಂದು ನುಡಿಯುತ್ತ ಬರುತ್ತಿರಲು , ಸಖಿಯರುಗಳೀರ್ವರ ಹಿಂದಿರುಗಿ ಆ ಕಣ್ವಮುನೀಶ್ವರನಂ ನೋಡಿ ಶಕುಂ ತಳೆಯಂ ಕು೫ ತು_* ಎಲೆ ಶಕುಂತಳೆ, ನೀನು ಸಮಸ್ವಾಭರಣದಿಂದಲಂಕೃತ ಳಾದೆ. ಇನ್ನು ಮೇಲೆ ಜಾಗ್ರತೆಯಿಂ ಸೀರೆ ಕುಪ್ಪಸವಂ ತೊಟ್ಟು ಕೋ” ಎಂದು ಪೇಳಲು;