ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪ ಕರ್ಣಾಟಕ ಕಾವ್ಯಕಲಾನಿಧಿಆ ಶಕುಂತಳೆಯು ಮನ್ಮಥನ ಜಯಲಕ್ಷ್ಮಿಯು ಬೆಳದಿಂಗಳೆಂಬ ವಸ್ತ್ರವನ್ನು ಡುವಂತೆ ಅತಿ ಶುಭ್ರವಾದ ಸೀರೆ ಕುಪ್ಪಸಗಳಿಂದಲಂಕೃತಳಾಗಲು ; ಗೌತಮಿಯು ಎಲೆ ಮಗಳೇ, ನಿನ್ನ ತಂದೆಯಾದ ಕಣ್ವಮುನೀಶ್ವರನು ಆನಂದವೆಂಬ ನದಿಯಂ ಹೊಜದೋಡಿಸುವವೋ ಎಂಬಂತಿರುವ ನೇತ್ರಗಳಿ೦, ನಿನ್ನಾಲಿಂಗನವಂ ಮಾಡುವನೋ ಎಂಬಂತೆ ದಯಾದೃಷ್ಟಿಯಿಂ ನೋಡುತ್ತಿರುವನು. ಸಮೀಪವಂ ಸೇರಿ ಅವನ ಪಾದಂಗಳಿಗೆ ವಂದನೆಯಂ ವಿರಚಿಸು' ಎಂದು ಹೇಳಲು; ಶಕುಂತಲೆಯು ಲಜ್ಜೆಯಿಂ- ಎಲೈ ತಂದೆಯಾದ ಮಹಾಮುನಿಯೇ, ನಿನ್ನ ಚರಣಾರವಿಂದಗಳಿಗೆ ನಮಸ್ಕಾರವಂ ಗೆಯ್ಯುವೆನು ” ಎಂದು ನುಡಿದು ನಮ ಸ್ಮರಿಸಲು ; ಕಣ್ಯ ಮುನಿಯು ಶಕುಂತಲೆಯಂ ಕುತು_* ಎಲೆ ಪುತ್ರಿ, ಯಯಾ ತಿರಾಯನಿಗೆ ವೃಷಪರ್ವರಾಯನ ಮಗಳಾದ ಶರ್ಮಿಷ್ಠೆಯು ಹೇಗೆ ಪ್ರೇಮ ಪಾತ್ರಳಾಗಿರ್ದು ರಾಜ್ಯಾಧಿಪತ್ಯಕ್ಕೆ ಯೋಗ್ಯನಾದ ಪುರುವೆಂಬ ಪುತ್ರನಂ ಪಡೆದಳೋ, ಹಾಗೆ ನಿನ್ನ ಪತಿಯಾದ ದುಷ್ಯಂತರಾಯನ ವಿಶ್ವಾಸಕ್ಕೆ ಪಾತ್ರಳಾಗಿ ಯುವರಾಜಪದವಿಗೆ ಭೋಗ್ಯನಾದ ಪುತ್ರನಂ ಪಡೆ " ಎಂದು ಆಶೀರ್ವಾದವಂ ಗೆಯ್ಯಲು ; ಗೌತಮಿಯು-'ಎಲೈ ಷಡ್ಡು ಜೈಶ್ವರ್ಯಸಂಪನ್ನನಾದ ಮಹಾಮುನಿಯೇ, ಈ ನಮ್ಮ ಶಕುಂತಳೆಯಂ ತನ್ನ ಪತಿಗೆ ಪ್ರೀತಿಪಾತ್ರಳಾಗುವಂತೆಯ ಸಮಸ್ತ ಭೂಮಂಡಲಕ್ಕೆ ದೊರೆಯಾಗುವ ಪುತ್ರನಂ ಪಡೆಯುವಂತೆಯ-ಈ ಎರಡು ಪ್ರಕಾ ರವಾಗಿ ಅಪ್ಪಣೆಯನ್ನಿತ್ತಿರುವ ವರವು ಒಂದು ಕಾಲಕ್ಕೂ ವ್ಯರ್ಥವಾಗಲಾದು ? ಎಂದು ನುಡಿಯಲು ; ಆ ಕಣ್ವಮುನೀಶ್ವರನು ಶಕುಂತಳೆಯಂ ಕುತು_* ಎಲೆ ಪ್ರತಿ, ಇತ್ತಲು ಯಜ್ಞಶಾಲೆಯಲ್ಲಿರುವ ಸದ್ಯೋಹುತವಾದ ಆಗ್ನಿಯ ಪ್ರದಕ್ಷಿಣೆಯಂ ಗೆಯ್ಯುವುದು' ಎಂದು ಅವಳ ಕರೆದುಕೊಂಡು ಸರ್ವರಿಂದೊಡಗೂಡಿ ಬಂದು, ಆ ಶಕುಂತಲೆಯಂ ಅಗ್ನಿ ಪ್ರದಕ್ಷಿಣೆಮಾಡುವಂತೆ ಮಾಡಿ, ಆ ಔಪಾಸನಾಗ್ರಿಗಳಂಕು¥'ತು (“ಎಲೈ ಆಹವನೀಯಗಾರ್ಹಸ್ಪತ್ಯದಕ್ಷಿಣಗಳೆಂದು ಪ್ರಸಿದ್ದ೦ಗಳಾಗಿ ಸಮಿತ್ತು ದರ್ಭೆ ಗಳಿಂದಲಂಕೃತವಾಗಿ, ವೇದಿಕೆಗಳಿಂ ಯುಕ್ತವಾದ ಅಗ್ನಿಗಳೇ, ನಿಮ್ಮ ಪ್ರದಕ್ಷಿಣ ವಂ ಗೆಯ್ಯುತ್ತಿರುವ ಈ ಶಕುಂತಲೆಗುಂಟಾಗುವ ಸಮಸ್ತ ವಿಘ್ನ ಗಳಂ ಪರಿಹರಿಸಿರಿ,

  • 7 27 : ?