ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ C೫ ಶುಭವನ್ನುಂಟುಮಾಡಿರಿ ಎಂದು ಯಜ್ಞಗೃಹದಲ್ಲಿ ಇರುವ ಅಗ್ನಿಗಳಂ ಕು” ತು ಪೇಳಿ, ಇವಳ ಸಂಗಡ ಪೋಗುವುದಕ್ಕೆ ಶಾಬ್ದ೯ರವಮಿಶ್ರ ಮೊದಲಾದ ಶಿಷ್ಯರುಗಳು ಎಲ್ಲಿ?” ಎಂದು ಕೇಳಲು ; ಅಷ್ಟ ಅಲ್ಲೇ ಆ ಶಿಷ್ಯರೆಲ್ಲರೂ ಸನ್ನದ್ದರಾಗಲಾಗಿ ಅವರಲ್ಲೊಬ್ಬ ಶಿಷ್ಯನಂ ಕುತ ತು- ಎಲೈ ಶಾ೯ಗವನೇ, ಈ ನಿನ್ನ ತಂಗಿಯಾದ ಶಕುಂತಲೆಗೆ ಒಳ್ಳೆಯ ಮಾರ್ಗವಂ ತೋಜಿಸುತ ಪ್ರತಿಷ್ಠಾನಪುರಕ್ಕೆ ಕರೆದುಕೊಂಡು ಪೋಗುವುದು ? ಎಂದು ಹೇಳಲು: ಆ ಶಿಷ್ಯನು ಆದೇರೀತಿಯಿಂ ಮಾಡುವೆನೆಂದು ಮಾರ್ಗವಂ ತೋಜಿಸುವು ದಲ್ಲಿ ಸನ್ನಾಹವುಳ್ಳವನಾದನು? ಇಲ್ಲಿದೆ ఎంజల్లికి ಕೃಷ್ಣರಾಜವಾಣೀವಿಲಾಸ ರತ್ನಾ ಕರವೆಂಟಕ್ಕುಂತಲನಾಟಕ ನವೀನಟೀಕಿನಲ್ಲಿ ಶಕುಂತಲೆಯು ಸರ್ವಾಲಂಕಾರಯುಕ್ತಳಾಗಿ, ಪತಿಯಾದ ದುಷ್ಯಂತರಾಯನ ಪುರವಂ ಕುತು ಪೋಗುವುದಕ್ಕೆ ಸನ್ನದ್ಧಳಾಗಿರ್ದಳೆಂಬ ತೃತೀಯ ಕಲ್ಲೋಲದಲ್ಲಿ ಪ್ರಥಮ ತರಂಗಂ ಸಂಪೂರ್ಣ೦. ತೃತೀಯಕಿಲದ ದ್ವಿತೀಯತರಂಗಂ ಅನಂತರದಲ್ಲಿ ಆ ಕಮಹಾಮುನಿಯು ಶಕುಂತಲೆಯು ದುಷ್ಯಂತರಾ ಯನ ಪುರಕ್ಕೆ ಪೋಗುವಳೆಂದು ಬಿನ್ನ ಹೃದಯನಾಗಿ, ಆ ತಪೋವನದಲ್ಲಿರುವ ಸಮಸ್ತ ವೃಕ್ಷಲತೆಗಳಂ ಕುತು: ಎಲೈ ವನದೇವತೆಗೆ ವಾಸಯೋಗ್ಯಂಗ ೪ಾದ ವೃಕ್ಷಲತಾಗುಲ್ಕಗಳಿರಾ ! ಯಾವ ಶಕುಂತಲೆಯು ನಿಮ್ಮ ನಿಮ್ಮ ಪಾತೆಗೆ ಳಿಗೆ ನೀರೆರೆಯುವುದಕ್ಕೆ ಮೊದಲು ತಾನು ಜಲಪಾನವಂ ಗೆಯ್ಯುವುದಕ್ಕೂ ಇಚ್ಛಿಸದೆ ಇದ್ದಳೊ, ಯಾವಳು ತನ್ನ ಅಲಂಕಾರಕ್ಕೋಸುಗ ನಿಮ್ಮಲ್ಲಿ ಪುಟ್ಟಿದೆ ಒಂದು ಚಿಗುರನ್ನಾ ದರೂ ವಿಶ್ವಾಸದಿಂ ಮುರಿಯದೆ ಇರ್ದಳೋ, ಯಾವ ಶಕುಂತ ಳೆಗೆ ನಿಮ್ಮಗಳಲ್ಲಿ ಮೊದಲು ಪಪ್ಪಂಗಳಾಗಲು ಮಹತ್ತಾದ ಸಂತೋಷವುಂಟಾಗು ತಿರ್ದುದೋ, ಆ ಶಕುಂತಲೆಯು ತನ್ನ ಪತಿಯ ಗೃಹಕ್ಕೆ ಪೋಗುತ್ತಿರುವಳು, ನೀವೆ ಲ್ಲರೂ ಅಪ್ಪಣೆಯನ್ನೀಯಬೇಕು ಎಂದು ಕಂಬನಿಯಂ ತುಂಬಿ, ಅತಿ ಚಿಂತಾಕ್ರಾಂ ತನಾಗಿ ಬೇಡಿಕೊಳ್ಳಲು, ಅಷ್ಟೇ ಅಲ್ಲೇ ಆ ಗಿಡುಮರಗಳಲ್ಲಿರ್ದ ಕೋಗಿಲೆಗಳು