ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ೮೬ - ಕರ್ಣಾಟಕ ಕಾವ್ಯಕಲಾನಿಧಿ ಧ್ವನಿಯಂ ಗೆಯ್ಯಲು, ಕಣ್ವಮುನಿಯು ನಮ್ಮ ಶಕುಂತಲೆಯೊಡನೆ ಬೆಳೆದ ಈ ವೃಕ್ಷ ಗಳು ಕೋಗಿಲೆಯ ಧ್ವನಿಗಳೆಂಬ ವ್ಯಾಜದಿಂದ ಇವಳು ತನ್ನ ಪತಿಯ ಗೃಹಕ್ಕೆ ಪೋಗಲಿ ಎಂದು ಸಮ್ಮತಿಸಿರುವುವು' ಎನ್ನು ವಷ್ಟಲ್ಲೇ “ ಕಮಲಲತೆಗಳಿ೦ ಪೂರಿತವಾದ ಕೊಳಂಗಳಿಂ ಈ ಶಕುಂತಲೆಯು ಪೋಗುವ ಮಾರ್ಗವು ಮನೋಹರವಾದ ಪ್ರದೇಶವುಳ್ಳುದಾಗಲಿ ! ನೆರಳುಗಳುಳ್ಳ ವ್ಯಕ೦ಗಳಿ೦ ಶಾಂತಮಾದ ಸರಕಿರಣಗಳ ಸಂತಾಪವುಳ್ಳದ್ದಾಗಲಿ! ಮತ್ತು ಕಮಲಪರಾಗದಂತ ಮೃದುವಾದ ದೂಳುಳ್ಳುದಾಗಲಿ ! ಅಧಿಕ ಮಾಗಿ ಇದಿರೆದ್ದು ಬಾರದೆ ಬೆಂಬಿಡಿದು ಹಿತವಾಗಿ ಬೀಸುವ ಗಾಳಿಯುಳ್ಳುದಾಗಿ ಮಂಗಳಕರವಾಗಲಿ !” ಎಂದು ಆಶೀರಾದರೂಪವಾಗಿ ವನದೇವತೆಗಳು ಮೇಳ ಅಶರೀರವಾಕ್ಯವಂ ಕಣ್ಮಋಷಿ ಮೊದಲಾದ ಸಮಸ್ತರೂ ಕೇಳಿ ಆಶ್ಚರ್ಯಯುಕ್ತ ರಾಗಲು ; ಆ ಗೌತಮಿಯು ಎಲೆ ಶಕುಂತಲೆಯೇ, ಬಂಧುಜನದಂತೆ ಅತಿ ಸ್ನೇಹಿ ತರಾದ ವನದೇವತೆಗಳೆಲ್ಲರೂ ನೀನು ಪತಿಗೃಹಕ್ಕೆ ಪೋಗುವುದಕ್ಕೆ ಅಪ್ಪಣೆಯ ೩ತಿರುವರಾಹಿಂ ಸಮಸ್ತ ವನದೇವತೆಯರಿಗೆ ನಮಸ್ಕಾರವಂ ಗೆಯ್ಯುವುದು', ಎಂದು ಹೇಳಲು, ಆ ವಾಕ್ಯಕ್ಕೆ ಶಕುಂತಲೆಯು ಭಯಭಕ್ತಿಯಿಂ ಯುಕ್ತಳಾಗಿ, ಸಮ ಸ್ತ ವನದೇವತೆಗಳಂ ಕು ತು ನಮಸ್ಕಾರವಂ ಗೆಯ್ಯು, ಹಿಂದಿರುಗಿ ಬರುವ ಪ್ರಿಯಂ ವದೆಯಂ ಏಕಾಂತಕ್ಕೆ ಕರೆದು, “ಎಲೆ ಪ್ರಿಯಂವದೆಯೇ, ಆರ್ ಪುತ್ರನಾದ ಮಹಾ ರಾಜನಂ ನೋಡುವೆನೆಂಬ ಕುತೂಹಲವಿರ್ದರೂ ಬಾಲ್ಯ ಪ್ರಕೃತಿಯಾಗಿ ವಾಸವಂ ಗೆಯ ಈ ತಪೋವನವಂ ಬಿಟ್ಟು ಪೋಗುವೆನೆಂದರೆ, ಅತಿ ದುಃಖದಿಂದೊಂದಡಿ ಯಿಡುವುದಕ್ಕೆ ಕಾಲುಗಳು ಮುಂಬರಿದು ಪೋಗಲಾವು ” ಎಂದು ನುಡಿಯಲು; ಪ್ರಿಯಂವದೆಯು ಎಲೆ ಶಕುಂತಲೆಯೇ, ನೀನು ಹೇಳುವುದು ಯುಕ್ತ ವೇ ಸರಿ. ಆದರೂ ಈ ಆಶ್ರಮವಂ ಬಿಟ್ಟು ಪೋಗುವ ವ್ಯಸನವು ನಿನ್ನೊಬ್ಬಳಿಗೇ ಅಲ್ಲ, ಮನೋಹರಾಂಗಿಯಾದ ನಿನ್ನಗಲಿಕೆಯಿಂ ಈ ತಪೋವನದಲ್ಲಿರುವ ಸಮಸ್ತ ಪ್ರಾಣಿ ಗಳಿಗೂ ನಿನ್ನಂತೆಯೇ ಅತ್ಯಂತ ವ್ಯಸನವುಂಟಾಗಿರುವುದು. ಇದೆ ಸಮಸ್ತ ಹುಲೆ ಗಳು ನಿನ್ನಿಂದ ಪೋಷಿತಗಳಾದ್ದಂ ನೀನು ಪೋಗುವುದಂ ನೋಡಿ ತಾವು ತಿನ್ನು ತಿರ್ದ ಹುಲ್ಲುಗಳು ಬಿಟ್ಟು ಬಾಯೊಳಿರ್ದ ಕಬಳಂಗಳನ್ನು ಗುಳುತ್ತಿರುವುವು.