ಪುಟ:ಶಾಸನ ಪದ್ಯಮ೦ಜರಿ.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟಿಪ್ಪಣ 265 ಟಿಪ್ಪಣ (ಸಂಖ್ಯೆಗಳು ಪದ್ಯಗಳಿಗೆ ಅನ್ವಯಿಸುತ್ತವೆ) 1-6, ಈ ಪದ್ಯಗಳಲ್ಲಿ ಈಗಿನ ವ್ಯಾಕರಣಗಳಿಂದ ಸಿದ್ದಿಸದ ಕೆಲವು ಪ್ರಯೋ ಗಗಳು ಇವೆ. ಇವು ಪೂರ್ವದ ಹಳಗನ್ನಡಕ್ಕೆ ಸೇರಿದುವು. (1) ಪ್ರಥಮಪುರುಷದ ಆಖ್ಯಾತಪ್ರತ್ಯಯಗಳಿಗೆ ದೀರ್ಘಸ್ವರ: ಏಟಿದಾರ್, ಸಂರ್ಧಾ; (2) ಸಪ್ತಮಿ ವಿಭಕ್ತಿಗೆ ಉಳ್ ಪ್ರತ್ಯಯ: ವೆಟ್ಟದುಳ, ಧರಣಿಯುಳ್; (3) ನಿಷೇಧರೂಪದಲ್ಲಿ ದೀರ್ಘಸ್ವರ: ತಪ್ಪಾದೆ; (4) ನಪುಂಸಕಲಿಂಗದಲ್ಲಿ ಒದು ಪ್ರತ್ಯಯ: ಕೆಟ್ಟೋದು; (5) ಬಿಂದುವಿಗೆ ನಕಾರ: ಇಂಬಿರ್ಸಿ, ನೋ೩, ವಿಪರೀರ್ತ, ಸಿಂಫರ್ಮ; (6) ಸ್ವರ ಪರವಾಗದಿದ್ದರೂ ದ್ವಿತೀಯಾವಿಭಕ್ತಿಗೆ ದೀರ್ಘ: ಪ್ರಾಸಾದಾಂತರರ್ವಾ ವಿಚಿತ್ರ; ಇತ್ಯಾದಿ. 1. ಕಪ್ಪು, ಕಪ್ಪು = ಶ್ರವಣಬೆಳೊಳದಲ್ಲಿರುವ ಚಿಕ್ಕ ಬೆಟ್ಟ. ವೆಟ್ಟ = ಬೆಟ್ಟ, ಸಂಘ೦ಗಳ, ಪ್ರಥಮೆಗೆ ಷಷ್ಠಿ, ಉಯೆ = ಕರೆದುಕೊಂಡು ಹೋಗಲು. 2. ನೋ, ನೋಂಪಿ = ವ್ರತ, ಕತಿ = ದೋಷ, ಕಂತಿ- ಜೈನಸನ್ಯಾಸಿನಿ, ಮುಡಿಪು= ಪ್ರಾಣತ್ಯಾಗಮಾಡು, 3, ಸುರಚಾಪ= ಕಾಮನ ಬಿಲ್ಲು. ತೆರೆ=ರೀತಿ, ಇರರ್ವಾ= ಇರುವಿಕೆಯನ್ನು ಸನ್ಮಾಸನ, ಸಮಾಧಿ, ಸಲ್ಲೇಖನ= ಉಪವಾಸವ್ರತ. 4. ಸುಮಾರು 700 ರಲ್ಲಿದೆ. ಕನ್ನಡದಲ್ಲಿ ತ್ರಿಪದಿ ಇದ್ದಿತು. 7. ಪರೋಕ್ಷ = ಮರಣಾನಂತರ, ದತ್ತಿ=ದಾನ, ರಘುಕುಳ = ರಾವು. ಅಕ್ಕಿ = ನಿಶೇಷವಾಗು. ಪೆನು - ಮಹಿಮೆ, ದೀವಟ್ಟೆ ಕಟ್ಟಿಸಿದ ಕೆರೆ ಸಮುದ್ರವನ್ನು ಹೀಯಾಳಿಸುವಂತಿದ್ದಿತು. 8. ಈ ಕೆರೆ ಗಂಗೆಯೇ ದಕ್ಷಿಣಕ್ಕೆ ಬಂದಂತೆ ಇದ್ದಿತು. ಅಮರನದಿ = ಗಂಗೆ, ಸಯ್ತು = ಪುಣ್ಯ. 9. ಅಳುಂಬ=ಅಧಿಕ. ಒಳ್ಳು = ಒಳ್ಳೆಯ ಗುಣ, ಶಿಖಿ= ಬೆಂಕಿ. 10. ನೆಗಟ್ಟಿ = ಪ್ರಸಿದ್ಧಿ ಹೊಂದಿದ ವೇಳೆವಡಿಚರ್= ಕೊಟ್ಟ ಭಾಷೆಯನ್ನು ನಡೆಸಿದವರು. ನಿನ್ನ ಸ್ವರೆ == ನಿನಗೆ ಸಮಾನರೇ ? ದೊರೆಯಯ್ = ಸಮಾನ. 11. ಉಲಿದೆ = ಹೆದರದೆ. ಇಳಿವ = ಸಂಹರಿಸುವ, ಅಂಬೆವು = ಯುದ್ಧ ಮಾಡುವೆವು. ಪೊಚುಸು = ಗೋಚರಿಸು, ಸಕ್ಕಿ=ಸಾಕ್ಷಿ. 12. ಸೆರಗುವಾರ್‌= ಅಪಾಯವನ್ನು ನಿರೀಕ್ಷಿಸು. ನೆರವು=ಸಹಾಯ. ಸಿಂಧುರ = ಅನೆ. 13, ಆಮ್ಯಾ ಯ= ವಂಶ, ಕಲಿ = ಶೂರ, ನೆಗಡಿ = ಕೀರ್ತಿ 14. ಆದಗುಂತಿ = ರಾಶಿ. ಅವನಿಜೆ = ಸೀತೆ. 15. ಶ್ರಾವಕ=ಜೈನಗೃಹಸ್ಥ, ಸಜ್ಜನಿಕೆ=ಪತಿಭಕ್ತಿ. 16. ಪೇನಿ=? ಹೀನ. ಕಳ = ಗಣಿ, ವಸುಮತಿ = ಭೂಮಿ, ಊನ = ಕೊರತೆ, ಮೋನಿ = ಮೌನಿ. 34