ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೨ ಸುರಸ ಗ್ರಂಥಮಾಲಾ, ಪ್ರಾಣಪ್ರತಿಷ್ಠಾಪನೆಯನ್ನು ಮಾಡಿದವನಿಗೆ ಅದರ ಯೋಗಕ್ಷೇಮದ ಚಿಂತೆಯು ಇದ್ದೇ ಇರುತ್ತದೆ. ಸ ಮ ಧ ಕ ರು ತಾವು ಕೈ ಮುಟ್ಟಿ ಆಸ್ತಿವಾರ ಹಾಕಿಸಿದ ರಾಜ್ಯ ರೂಪವಾದ ಮಂದಿರವನ್ನು ಪೂರ್ಣ ಮಾಡಿ ಸ ದ ಅರ್ಧಕ್ಕೆ ಬಿಟ್ಟು ಹೋಗಬಹು ದೆ? ನನ್ನ ಗುರುಬಂಧುವಾದ ಶಿವ ಬಾ ನು ತ ನ ಅವತಾರಸಮಾಪ್ತಿಯ ಚಿಹ್ನಗ ಇನ್ನು ಪ್ರಕಟಮಾಡಿದಾಗ, ನಿನ್ನ ಹಾಗೆ ನಾನೂ ಚಿಂತೆಗೊಳಗಾಗಿ ಶ್ರೀ ಗುರುವ ನ್ನು ಕೇಳಿಕೊಂಡೆನು. ಅ ದ ಕೈ ಸದುರುನಾಥನು ಶಾಂತವಾದ ಗಂಭೀರ ದಿಂದ “ಉದ್ಭವ, ಧ ನ ೯ ಸ್ನಾ ಪ ನೆ ಯ ಕಾರ್ಯವು ನಿಲ್ಲುವದೆಂದು ತಿಳಿಯ ಬೇಡ. ವ್ಯಕ್ತಿಯ ಸಲುವಾಗಿ ಯಾವ ಕಾರ್ಯಗಳೂ ತಡೆದು ನಿಲ್ಲುವದಿಲ್ಲ. ಶಿವಾಜಿಯಾದರೂ ಈಗಲೇ ತನ್ನ ಪೂರ್ವ ಸ್ಥಳಕ್ಕೆ ಹೋಗುವದಿಲ್ಲ. ಪುನ: ಆತನು ಇದೇ ಭಾಸಲೆಕುಲದಲ್ಲಿ ಹುಟ್ಟಿ , ಮೈಂಛರ ಉಪದ್ರವದ ನಿವಾರಣಮಾಡುವನು. ಬಳಿಕ ನಿಷ್ಕಂಟಕ ರಾಜ್ಯವನ್ನು ಕೆಲವು ದಿವಸ ಅಳಿ, ಐಶ್ವರ್ಯವನ್ನು ಭೋಗಿಸಿ ತಿರುಗಿ ಬ್ರಾಹ್ಮಣಜನ್ಮವನ್ನು ಸ್ವೀಕರಿಸುವನು. ಆ ಮೇಲೆ ಆತನು ಬದರೀಗೇ ದಾರಾಶ್ರಮಕ್ಕೆ ಹೋಗಿ ಯೋಗಸಾಧನವನ್ನು ಮಾಡಿದ ನಂತರ ತನ್ನ ಪೂರ್ವ ಸ್ಥಳಕ್ಕೆ ಹೋಗುವನು' ಎಂದು ಹೇಳಿದರು. ಅದರಂತೆ ರಾಜಾರಾಮ, ಶ್ರೀ ಗಳವರು ತಾವು ಸ್ವತಃ ನಾರಿಕದಿಂದ ಕರವೀರಕ್ಷೇತ್ರದ ವರೆಗಿನ ಪ್ರದೇಶದಲ್ಲಿ ಇರು ತೇವೆಂದು ಹೇಳಿರುತ್ತಾರೆ. ಅದರಿಂದಲೇ ಆ ಪ್ರದೇಶಕ್ಕೆ 'ಆನಂದಭುವನ' ಎಂಬ ಹೆಸರನ್ನು ಕೊಟ್ಟಿರುತ್ತದೆಸದ್ಯಕ್ಕೆ ಶ್ರೀ ಗಳು ಪಂಚವಟಿಯಲ್ಲಿ ವಾಸವಾ ಗಿರುವರು' ಆದ್ದರಿಂದ ಛತ್ರಪತಿಯೇ, ನೀನು ಧೈರ್ಯಗೆಡಬೇಡ, ಧನಾಜಿ, ಸಂತಾಜಿಯಯಂಥ ಶಕ್ತಿಯು, ಹಾಗು ಪ್ರಹ್ಲಾದಪಂತ-ರಾಮಚಂದ್ರಪಂತರಂಥ ಯಕ್ತಿಯ ಜೋಡು ನಿನ್ನ ಬಳಿಯಲ್ಲಿರುತ್ತಿರಲಿಕ್ಕೆ ನೀನು ಇಷ್ಟು ನಿರಾಶೆ ಪ ಡುವದೇಕೆ? ರಾಜಾರಾಮಾ, ಪ್ರಸಂಗದಲ್ಲಿ ಕೈ ಕಾಲು ಗೆಡುವವನನ್ನು ಆತ್ಮ ಘಾತಿಕಿಯೆಂದು ತಿಳಿಯತಕ್ಕದ್ದು. “ ನೀವು ಜಗತ್ತನ್ನು ಉದ್ಧರಿಸುವ ಕಾರ್ಯ ವನ್ನು ಮಾಡುತ್ತೀರಿ. ನಿಮ್ಮ ಶರೀರಗಳು ನಮ್ಮ ಶರೀರಗಳಾಗಿರುವವು. ” ಎಂದು ಸಮರ್ಥರು ಆಡಿದ ಮಾತಿನ ರಹಸ್ಯವನ್ನು ತಿಳಿದು ಈಗ ಲೋಕಸಂಗ್ರಹಮಾಡು ವದು ನಿನಗೆ ಅವಶ್ಯವಾಗಿರುತ್ತದೆ. ಅವರವರ ಗುಣಪರೀಕ್ಷೆಯನ್ನು ಮಾಡಿ, ಹತ್ತರ ಇಟ್ಟು ಕೊಳ್ಳುವವರನ್ನು ಹತ್ತರಇಟ್ಟಕೊ, ದೂರ ಇಡುವವರನ್ನು ದೂರ ಇಡು, ಇಂಥ ಕಠಿಣಪ್ರಸಂಗದಲ್ಲಿ ಲೋಕಾರಾಧನೆಯನ್ನು ಮಾಡುವಾಗ ನೀನು