ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನವ. . ಆದಕಾರ್ಯ ಕರ್ತೃಗಳಿರುವರು, ಇವರ ವೇಷವು ಅತ್ಯಂತ ಹೀನವಾಗಿದ್ದರೂ, ಇವರಲ್ಲಿ ಘನತರವಾದ ಅನಂತ ಗುಣಗಳು ವಾಸಿಸುವವು. ಹಸಿವೆಯ ಮಟ್ಟಿಗೆ ಇವರು ಮನೆಮನೆಗೆ ಹೋಗುವರು. ಭಿಕ್ಷೆ ಸಿಗದಿದ್ದರೂ ಇವರಿಗೆ ಅದರ ಲಕ್ಷವಿ ಇ- ಇಂದು ಇವರು ಇಲ್ಲಿ ಕಂಡರೆ ನಾಳೆ ಇವರು ದೂರದಲ್ಲಿರವ ಅನುಪಸ್ಥಿತ ಸ್ಥಳದಲ್ಲಿ ಕಣ್ಣಿಗೆ ಬೀಳಬಹುದು; ಆದರೂ ಇವರು ಜಗದ ದ್ವಾರದ, ಹಾಗೆ ಸ್ವ ಧರ್ಮರಕ್ಷಣದ, ಅದರಂತೆ ಸ್ವರಾಜ್ಯ ಪ್ರತಿಷ್ಠಾನ ನೆಯ ಕಾರ್ಯದ ಸ೦ಧದಿಂದ ಜನರ ಮನಸ್ಸನ್ನು ಪರಿಶುದ್ಧ ಗೊಳಿಸುವ ಕಾರ್ಯದಲ್ಲಿ ಯಾವಾಗಲೂ ತತ್ಪರರಾಗಿ ರುವರು. ರಾಜಾರಾಮಾ, ನಿನ್ನ ರಾಜ್ಯವನ್ನು ವಿಸ್ತರಿಸುವದಕ್ಕಾಗಿಯೂ, ಸವ ರ್ಥರ ಅವತಾರ ಕೃತ್ಯವನ್ನು ಪೂರ್ತಿಗೊಳಿ ಸುವದಕ್ಕಾಗಿಯ, ಗೋ-ಬ್ರಾಹ್ಮಣ ರ ರಕ್ಷಣಕ್ಕಾಗಿಯ ಸಮರ್ಥ-ಸಾಂಪ್ರದಾಯವು ದೇಶದಲ್ಲಿ ಹಬ್ಬಿರುತ್ತದೆ; ಆದ್ದ ರಿಂದ ಛತ್ರಪತೀ, ನೀನು ಹೋದಲ್ಲಿ ನಿನಗೆ ಜನಸಹಾಯವು ದೊರೆಯುವದು, ಚಿಂತೆಮಾಡಬೇಡ, ನಿನ್ನ ವೈರಿಯಾದ ಔರಂಗಜೇಬನ ಬೆನ್ನಿಗೆ ಅಖಂಡ ಸಾಮ್ರಾ ಜ್ಯದ ವೈಭವವಿದ್ದರೆ, ರಾಜಾರಾಮಾ, ನಿನಗೆ ಬೆಂಬಲವಾಗಿ ಬಡಬಗ್ಗರವೇ ಆಗ ಲೊಲ್ಲದೇಕೆ, ಜನಸಮೂಹದ ನಿಜವಾದ ಅಂತಃಕರಣವಿರುತ್ತದೆ! ಇನ್ನು, ಸಂತಾಜೀ, ಧನಾಜೀ, ನೀವು ಹೋದಲ್ಲಿ ಊರೂರಿಗೆ ಶೋಧ ಮಾಡಿರಿ. ನೀರ ಕುಗ್ರಾಮಕೊಂಪೆಯನ್ನೂ, ದೊಡ್ಡ ಪಟ್ಟಣವನ್ನೂ, ಸರಿಯಾಗಿ ಯೇಶೋಧಿಸಿರಿ, ಅಲ್ಲಿಯ ಜನರ ಸಂಗಡ ಪ್ರೇಮಪೂರ್ವಕವಾಗಿ ಸಂಭಾಷಣ ಮಾಡಿ ಸಹಾಯವನ್ನು ಬೇಡಿಕೊಂಡು ಲೋಕಸಂಗ್ರಹಮಾಡಿರಿ. ಪ್ರಹ್ಲಾದನಂತ, ನೀವು ಮುತ್ಸದ್ದಿಗಳಿರುತ್ತೀರಿ, ರಾಮಚಂದ್ರ ಪಂತ, ನೀವಂತು ಸಮರ್ಥರ ಶಿ ಪ್ಯರೇ ಇರುವಿರಿ ನೀವು ದೇಶ ದೇಶಗಳನ್ನು ಸಂಚರಿಸುವಾಗ ನಿಮ್ಮ ಚಾತುರ್ಯ ದಿಂದ ಆದಷ್ಟು ಲೋಕಸಂಗ್ರಹಮಾಡಿರಿ; ಅಂದರೆ ಪ್ರಯತ್ನಾಂತ್ಯದಲ್ಲಿ ನಿಮಗೆ ಯಶಸ್ಸು ದೊರೆಯುವದು. ಪರಮೇಶ್ವರನ ಕೃಪೆಯು ನಿಮ್ಮ ಪಾಲಿಗೆ ಇರುವದು, ಸಮರ್ಥರ ಲೋಕಸಂಗ್ರಹದ ಯಶಸ್ಸು ಕ್ಷತ್ರಿಯರಾದ ನಿಮ್ಮ ಕೈಯೊಳಗಿರುತ್ತದೆ. ಸಮರ್ಥರು ಮುಂದಾಗುವದನ್ನು ನನ್ನ ಮುಂದೆ ಹೇಳಿರುತ್ತಾರೆ ಅದನ್ನು ನಾನು ಕಡೆಯ ಯಶಃಪ್ರಾಪ್ತಿಯ ದಿವಸ ನಿಮ್ಮೆಲ್ಲರ ಮುಂದೆ ಹೇಳಿ ನಿಮ್ಮನ್ನು ಪವಿತ್ರರನ್ನಾ ಗಿಮಾಡುವೆನು, ಏಳು, ರಾಜಾರಾಮ ಸ್ವರಾಜ್ಯ ಸಂರಕ್ಷಣದ ಕಾರ್ಯವನ್ನು ಸ ಮರ್ಥರ ಸನ್ನಿಧಿಯಲ್ಲಿ ಕೈಕೊಳ್ಳು ಏಳು! ಉದ್ಧವಸ್ವಾಮಿಯ ಈ ಶ್ರುತತುಲ್ಯವಾದ ಅಮೃತವಾಣಿಯನ್ನು ಕೇಳಿ, .