ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F ಸುರಸ ಗ್ರಂಥಮಾಲಾ, ಎಲ್ಲ ರಾಜಪರಿವಾರದ ಉತ್ಸಾಹವು ಹೆಚ್ಚಿತು. ರಾಜಾರಾಮ ಮಹಾರಾಜರಂತು: ಆನಂದಾಶ್ರುಗಳನ್ನು ಧರಿಸುತ್ತ ಎದ್ದು ನಿಂತು ಸಮರ್ಥರನ್ನು ಪ್ರಾರ್ಥಿಸಿದರು. ಆಗ ಸಮರ್ಥರ ಪಾದುಕದ ಮೇಲಿದ್ದ ಹೂವಿನ ಪ್ರಸಾದವು ಕೆಳಗೆ ಬಿದ್ದಿತು, ಅಕ್ಕನ (ಒಬ್ಬ ಸಂತಳು) ಕೂಡಲೆ ಅದನ್ನು ತಕ್ಕೊಂಡು ಫಲ-ಮಂತ್ರಾಕ್ಷತೆಯೊಡನೆ ಅದ ನ್ನು ರಾಜಾರಾಮ ಮಹಾರಾಜರ ಉಡಿಯಲ್ಲಿ ಹಾಕಿದಳು. ಅದನ್ನು ಮಹಾರಾಜ ರು ಭಕ್ತಿಯಿಂದ ಸ್ವೀಕರಿಸಿ, ಭೋಜನಾನಂತರ ಎಲ್ಲ ಸಂತಮಂಡಳಿಯ ಅಜ್ಞೆಯ ನ್ನು ಪಡೆದು ಪಲ್ಲಾಳಗಡದ ಕಡೆಗೆ ಸಾಗಿದರು. s ೧೦ನೇಯ ಪ್ರಕರಣ-ವೀರಸ್ಸುಪೆಯು,

  • - ಈಮೇರಗ ರಾಜಾರಾಮ ಮಹಾರಾಜರು ತಮ್ಮ ಪರಿವಾರದೊಡನೆ ಪಲ್ಲಾಳ ಗಡಕ್ಕೆ ಸಾಗಿರಲು, ಇತ್ತ ರಾಯಗಡದಲ್ಲಿ ನೀರನ್ನು ಷೆಯೂದ ಏಸೂಬಾಯಿಯ ತನ್ನ ದುರ್ಗದ ಸಂರಕ್ಷಣದ ವಿಷಯವಾಗಿ ಅತ್ಯಂತ ಜಾಗರೂಕಳಾಗಿ, ತನ್ನ ದುರ್ಗ ದ ಎಲ್ಲ ವ್ಯವಸ ಯನ್ನು ತಾನು ಮೊದಲು ಒಮ್ಮೆ ಕಣ್ಣು ಮುಟ್ಟಿ ನೋಡಬೇಕೆಂದು ಮಾಡಿದರು. ಸಂಭಾಜಿಯ ಯೋಗದಿಂದ ಮಹಾರಾಷ್ಮೆ ರಾಜ್ಯಕ್ಕೆ ಒದಗಿದ ಮ ಹಾವಿಪತ್ತಿನಲ್ಲಿ, ಅದನ್ನು ರಕ್ಷಿಸುವದಕ್ಕಾಗಿ ದೇವರ ಕೃಪೆಯಿಂದ ಧನಾಜಿಜಾಧವ, ಸe* ಘೋರಪಡೆಯಂಥ ಮಹಾವಿರರೂ, ಪ್ರಹ್ಲಾದನಂತ-ರಾಮಚಂದ್ರಪಂತ ರುದ್ಧ ಶ್ರೇಷ್ಟ ಮುತ್ಸದಿ ಗಳೂ ಉದಯಹೊಂದಿರುವಂತೆ, ಏಸಬಾಯಿಯಂಥ ಕೆಚ್ಚೆದೆಯ ರತ್ನಗಳು ಮಹಾರಾಷ್ಟ್ರ ರಾಜ್ಯ ರಕ್ಷಣಕಾಗಿ ಟೊಂಕಕಟ್ಟಿದ್ದು ಒಹು ಮಹತ್ವದ ಸಂಗತಿಯಾಗಿದೆ. ಏಸಬಾಯಿಯ ಮಹಾಧೈರ್ಯಶಾಲಿಯೂ, ವಿ ವೇಕಿ, ಜಾಣಳೂ ಇದ್ದರು. ಸ್ವಾಜ್ಯ ಸಂರಕ್ಷಣದ ಚಿಂತೆಯಲ್ಲಿ ಆಕೆಯು ಸ್ಯ ಸುಖವನ್ನೂ, ಪತಿಯಮಗಣ ದುಃಖವನ್ನೂ ಮರೆತಳೆಂದು ಹೇಳಬಹುದು. ಮೈದುನ ನೂ ವಹಾಮಹಾವೀರರೂ ನ ತ ಗ ತನ್ನನ್ನು ಬಿಟ್ಟು ಹೋದದ್ದರಿಂದ ಆಕೆ ಯು ಕೈ ಕಾಲುಗೆಡಲಿಲ್ಲ. ತನ್ನ ಪಾಲಿಗೆ ಬಂದಿರುವ ರಾಯಗಡದ ಸಂರಕ್ಷಣದ ಕಾ ರ್ಯವನ್ನು ತಾನು ಅತ್ಯುತ್ತಮರೀತಿಯಿಂದ ಮಾಡಿದರೆ, ರಾಜ್ಯ ಸಂರಕ್ಷಣದ ದೃಷ್ಟಿ ಯಿಂದ ತಾನು ದೊಡ್ಡ ಕೆಲಸಮಾಡಿದ ಹಾಗಾಗುವದೆಂದು ಆಕೆಯು ತಿಳಿದಿದ್ದಳು, ಒಂದುದಿನ ಮಧ್ಯರಾತ್ರಿಯಲ್ಲಿ ಆಕೆಯು ದುರ್ಗಪವ್ಯವಸ್ಥೆಯು ಹ್ಯಾಗಿರುತ್ತದೆಂಬದನ್ನು ನೋಡುವದಕ್ಕಾಗಿಯೂ, ಆಯಾಜನರಲ್ಲಿ ಕರ್ತವ್ಯತತ್ಪರಿತೆಯು ಎಷ್ಟರಮಟ್ಟಿಗೆ ಇರುತ್ತದೆಂಬದನ್ನು ಪರೀಕ್ಷಿಸುವದಕ್ಕಾಗಿಯೂ ಒಬ್ಬಳೇಹೊರಟಳು! ಆಗ ಆಕೆಯ