ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೮ ಸುರಸಗ್ರಂಥಮಾಲಾ, • •••

  • ಶಂಭೋ, ಕರುಣಾನಿಧೇ, ನನ್ನ ಮೈದುನನ ಪ್ರವಾಸವು ಸುಖಕರವಾಗುವಂತೆ ಅನುಗ್ರಹಿಸು, ” ಎಂದು ಬೇಡಿಕೊಂಡಳು.

ಬಳಿಕ ಏಸೂಬಾಯಿಯು ಅವಪ್ರಧಾನರ ಮಂದಿರಗಳ ಕಡೆಗೆ ನಡೆದಳು, ಇಲ್ಲಿ ಆಕೆಯು ಕಾವಲುಗಾರರ ಜಾಗರೂಕತೆಯನ್ನು ಬಡಬಡ ಪರೀಕ್ಷಿಸಿ, ಆ ಮೇ ಲೆ ಪೇಟೆಯೊಳಗೆ ಹಾದು ಗಜಶಾಲೆಯ ಕಡೆಗೆ ತಿರುಗಿದಳು. ಗಜಶಾಲೆಯೊಳಗಿನ ಪ್ರತಿಯೊಂದು ರಣಮತ್ತಗಜವನ್ನು ಆಕೆಯು ಪರೀಕ್ಷಿಸುತ್ತ, ಅವುಗಳ ಯೋಗ ಕ್ಷೇಮವನ್ನು ವಿಚಾರಿಸಿದಳು , ತನ್ನ ಒಡೆಯಳು ಹತ್ತರ ಬರಲು, ಪ್ರತಿಯೊಂದು ಆನೆಯ ಸೊಂಡಿಲಿನಿಂದ ಹುಲ್ಲನ್ನು ತಕೊಂಡು, ಮೆಲ್ಲನೆ ತನ್ನ ಒಡೆಯಳ ಮೇಲೆ ಎರಚುತ್ತಿತ್ತು. ಮೇಲೆ ಮೇಲೆ ಅವು ಬೃಂಹಿತ ಧ್ವನಿಯಿಂದ ತಮ್ಮ ಒಡೆಯಳನು ಅಭಿನಂದಿಸಿ, ಪೂತ್ಕಾರದಿಂದುಂಟಾದ ತುಂತುರ ಹನಿಗಳಿಂದ ತನ್ನ ಒಡೆಯ ಳಿಗೆ ನೀರ್ಮಂಜಿನ ಅಭಿಷೇಕಮಾಡುತ್ತಿದ್ದವು . ಹೀಗೆ ಆ ಬುದ್ದಿ ಸಂಪನ್ನ ಪ್ರಾಣಿ ಗಳು ತನ್ನನ್ನು ಈ ಬಗೆಯಾಗಿ ಪ್ರೀತಿಸಿದ್ದನ್ನು ನೋಡಿ ನಮ್ಮ ನೀರನ್ನು ಪ್ರೆಯು ಸಂತೋಷಪಟ್ಟು , ಅಲ್ಲಿಂದ ಉಷ ಶಾಲೆಗೆ (ಒಂಟಿಗಳ ಮನೆಗೆ ಹೋದಳು. ಅಲ್ಲಿ ಯ ಸರಂಜಾಮದಲ್ಲಿ ಏನಾದರೂ ಎಚ್ಚರಗೇಡಿತನವು ಇರುವದೇನಂಒದನ್ನು ಪರೀಕ್ಷಿಸಿ, ಭವಾನೀ ಶಿಖರದ ಮುಗ್ಗಲಿನಿಂದ ಆಕೆಯು ಶಿಬ್ಬಂದಿಯ ಜನರಿರುವ ಕೋಣೆಗಳ ಕಡೆಗೆ ತಿರುಗಿದಳು, ಈ ಕೋಣೆಗಳ ಆಚೆಯಲ್ಲಿಯೇ ಸರನೌಬತ, ಹವಾಲದಾರ, ತಟಸರನೌಬತ, ಸದರಸರನೌಬತ, ಬಾರಗೀರ, ರಜಪೂತ ಮೊಡಲಾದ ಮರ್ದಾನ ಕವಿಲೇದಾರರ ಮನೆಗಳಿದ್ದವು. ಅಲ್ಲಿಯ ರಕ್ಷಕರು , ತ ಮನ್ನು ರಾಣೀಸಾಹೇಬರು ಅಕಸ್ಮಾತ್ತಾಗಿ ಪರೀಕ್ಷಿಸುವರೆಂಬದನ್ನು ಅರಿತದ್ದರಿಂ ದ ಅವರು ಯಾವಾಗಲೂ ಜಾಗರೂಕರಾಗಿರುತ್ತಿದ್ದರು , ಅದರಲ್ಲಿ ಈಗಂತೂ ಯುದ್ಧದ ಕಾಲವಿದ್ದದ್ದರಿಂದ, ರಾಣೀಸಾಹೇಬರು ಆಗಾಗ್ಗೆ ಬರಬಹುದೆಂದು ತಿಳಿದು ಅವರು ತಮ್ಮ ಕೆಲಸದಲ್ಲಿ ಸರ್ವಥಾ ದುರ್ಲಕ್ಷ ಮಾಡುತ್ತಿದ್ದಿಲ್ಲ ; ಆದ್ದರಿಂದ ರಾಣೆಯವರು ಬಂದಾಗೆಲ್ಲ ಸ್ವಾಮಿನಿಷ್ಠ ಸೇವಕರು ಉಲ್ಲಾಸದಿಂದ ಅವರನ್ನು ಕಾಣುತ್ತಿದ್ದರು. ಇಂದು ಯಾವತ್ತು ಮೂವಳೆ ಸಿಪಾಯಿಗಳ ಸಾಲನ್ನು ಪರೀಕ್ಷಿಸಿ ನೋಡಿ, ಯಾವಾಗಲೂ ಹೀಗೆಯೇ ಜಾಗರೂಕರಾಗಿರುವಂತೆ ಆ ರಣದೇವತೆಯು ಆಜ್ಞಾಪಿಸಿದಳು. ಮತ್ತು ಶಸ್ತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳುವಂತೆ ನಿರ್ಧಾರದಿಂದ ಅವರಿಗೆ ಹೇಳಿದಳು, ಆಮೇಲೆ ಆಕೆಯು ಅಶ್ವಶಾಲೆಯ ಕಡೆಗೆ ಹೊರಳಿದಳು. ಅಲ್ಲಿಗೆ ಹೋದಕೂಡಲೇ ಆಕೆಯು, : ಕುದುರೆಗಳ ಚಾಕರಿಯ ಹೊತ್ತು ಹೊತ್ತಿಗೆ ಆಗುತ್ತ