ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ F ದೇನೆಂಬದನ್ನೂ , ಅವುಗಳ ಮೇವ-ದಾಣಿಗಳ ವ್ಯವಸ್ಥೆಯು ಸರಿಯಾಗಿರುತ್ತೇನೆಂಬ ದನ್ನೂ ವಿಚಾರಿಸಿ ಮನಗಂಡಳು. ಈ ಧೀರಳು ಅಶ್ವಶಾಲೆಯನ್ನು ಹೊಕ್ಕಕೂಡಲೆ ಕುದುರೆಗಳ ಹಲವು ಸಾಲುಗಳೊಳಗೆ ಕಟ್ಟಿದ್ದ ಆಕೆಯ ಪ್ರೀತಿಯ ಕುದುರೆಯು ತನ್ನ ಬಾಯೊಳಗಿನ ಹುಲ್ಲನ್ನು ಬಾಯಲ್ಲಿಯೇ ಹಿಡಿದು ಮಂಜುಲ ಶಬ್ದದಿಂದ ಹೇಕ್ ರಿಸಹತ್ತಿತು. ಆ ಮೇಲೆ ಆ ದೇವತೆಯು ಎಷ್ಟೋ ಕುದುರೆಗಳನ್ನು ಚಪ್ಪರಿಸಿದಳು. ಕೆಲವುಗಳ ಮೈ ಮೇಲೆ ಕೈಯಾಡಿಸಿದಳು , ಕೆಲವುಗಳ ಆಯಾಲದ ಕೂದಲುಗಳ ತೂಡಕು ಬಿಡಿಸಿದಳು , ತರುವಾಯ ಆಕೆಯು ಕುದುರೆಗಳ ಸಾಮಾನುಗಳನ್ನು ಪರೀಕ್ಷಿಸಿ, ಆ ಅಶಶಾಲೆಯ ಅಧ್ಯಕನಿಗೆ ಹೇಳತಕ್ಕದ್ದನ್ನು ಹೇಳಿ, ಮುಂದಕ್ಕೆ ಸಾಗಿ ದಳು. ಆಕೆಯು ಅಲ್ಲಿಂದ ತೋಫಖಾನೆಯನ್ನು ನೋಡಿಕೊಂಡು ಕಾಲಕುಂಡಕ್ಕೆ ಬಂದು ಅಲ್ಲಿ ಪಾದಪ್ರಕ್ಷಾಲನ ಮಾಡಿಕೊಂಡು ಜಗದೀಶ್ವರನ ದರ್ಶನಮಾಡಿ ಕೊಂಡಳು. ಇದರಂತೆಯೇ ಏಸೂಬಾಯಿಯು ಧಾನ್ಯದ ಕಣಜಗಳನ್ನೂ, ಜಲಾಶಯ ಗಳನ್ನೂ, ಔಷಧ ಶಾಲೆಗಳನ್ನೂ ನೋಡಿಕೊಂಡು, ಮಹಾದ್ವಾರಕ್ಕೆ ಬಂದು ಅಲ್ಲಿಯ ಎಲ್ಲ ಚೌಕಿಗಳನ್ನೂ ನೋಡಿದಳು , ತರುವಾಯ ಆಕೆಯು ಮಹಾರಾಜರ ದಿವ್ಯ ವಾದ ಉಪವನಕ್ಕೆ ಬಂದು, ಅಲ್ಲಿ ಸ್ವಲ್ಪ ವಿಶ್ರಮಿಸಿ, ಹಾಗೇ ಪರ್ವತ: ನ್ನು ಇಳಿ ಯುತ್ತ, ಅಲ್ಲಲ್ಲಿಯ ಕಾವಲುಗಾರರನ್ನು ಜಾಗರೂಕರಾಗಿರುವಂತೆ ಪ್ರೋತ್ಸಾಹಿಸುತ್ತ ಗುಡ್ಡದ ಬುಡಕ್ಕೆ ಬಂದಳು , ಅಷ್ಟರಲ್ಲಿ ಮತ್ತೊಬ್ಬ ವೀರಾಂಗನೆಯು ಮಹಾ ಡದ ಮಾರ್ಗದಿಂದ ತನ್ನ ಕುದುರೆಯನ್ನು ಓಡಿಸುತ್ತ ಆಕೆಯ ಎದುರಿಗೆ ಬರುತ್ತ ಲಿದ್ದಳು. ಆಕೆಯನ್ನು ನೋಡಿ ಏಸೂಬಾಯಿಯು ತನ್ನೊಳಗೆ-ಈ ರಾಜಕುವೆ ರಳು ಇಂಥ ಕಠಿಣ ಕಾಲದಲ್ಲಿ ಎಷ್ಟು ಉತ್ಸಾಹದಿಂದ ರಣರಕ್ಕಸಿಯಂತ ಆಚರಿಸು ತಿರುವಳಲ್ಲ? ಈಕೆಯು ಎಷ್ಟು ತೇಜಸ್ವಿನಿಯಾಗಿ ತೋರುವಳು ! ಪತಿಯ ಸಹವಾಸ ದಲ್ಲಿರುವಾಗ ಈಕೆಗೆ ಆಗುತ್ತಿದ್ದ ಆನಂದವು, ಈಗ ಯುದ್ಧವು ಸವಿಾಪಿಸಿದಂತೆ ಈಕೆಗೆ ಆಗುತ್ತಿರುವದಲ್ಲ ! ನಿನ್ನ ಅಣ್ಣನ ಸಂಗಡ ಹೋಗುಹೋಗೆಂದು ನಾನು ಎಷ್ಟು ಆಗ್ರಹ ಮಾಡಿದರೂ, ನಮ್ಮ ಈ ಕಂದಮ್ಮನು ಹೋಗಲಿಲ್ಲ , ನನ್ನ ಬಳಿ ಯಲ್ಲಿಯೇ ಉಳಿದುಕೊಂಡಳು. ಈಕೆಯನ್ನು ಜಾಗ್ರತೆಯಿಂದ ರಕ್ಷಿಸಬೇಕುಇಲ್ಲದಿದ್ದರೆ ಈಕೆಯ ಸೌಂದರ್ಯವೇ ಈಕೆಗೆ ಮುಳುವು ಆದೀತು , ಎಂದು ಅಂದು ಕೊಳ್ಳುತ್ತ, ಆ ವೀರಸ್ಸುಪೆಯು ರಾಜಕುವರಳ ಬಳಿಗೆ ಹೋದಳು . ಆಗ ರಾಜಕು ನರಳು-ಅತ್ತಿಗೆಯವರೇ , ದುರ್ಗಕ್ಕೆ ಬರುವ ಎಲ್ಲ ಮಾರ್ಗಗಳ ಬಂದೋಬಸ್ಸು