ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ ಶಿವಪ್ರಭುವಿನಪುಣ್ಯ - ನೀನು ಶಾಹಿಸ್ತೇಖಾನನನ್ನು ಹೊಡೆದೋಡಿಸುವಾಗ ನಿನ್ನ ಬಾಹುಗಳಲ್ಲಿ ಸಂಚರಿಸು' ಆಗ ಬ ಲ ವ ನ್ನು ಈಗ ನೀನು ನನ್ನ ಬಾ ಹು ಗಳಲ್ಲಿ ತು೦ಬು ; ಅ ದ ರ೦ತೆ ಅಫಜಲಖಾನನನ್ನು ಕೊಲ್ಲುವಾಗ ನೀನು ವಹಿಸಿದ ಪ್ರಸಾಂಗಾವಧಾನವನ್ನು ಈ ನಿನ್ನ ಪ್ರೀತಿಯ ಸೊಸೆಗೆ ಈಗ ಕೈಗಡವಾಗಿ ಕೊಡು ; ಹಾಗೆಯೇ ದಿಲೇರಖಾನ ಜಯ ಸಿಂಗ ಇವರು ಬಲೆಯೊಳಗಿಂದ ಪಾರಾಗುವಾಗ ನೀನು ಪ್ರಕಟಿಸಿದ ಯುಕ್ತಿ ಕೌಶಲ್ಯ ವನ್ನಷ್ಟು ಅನಕಾ ನನಗೆ ಕೊಡು ; ಹಾಗೆಯೇ, ತಾನಾಜಿ, ಬಾಜೀದೇಶಪಾಂಡೆಯಂಥ ನಂಬಿಗೆಯ ಜನರನ್ನು ಸ೦ಗ್ರ ಹಿ ಸು ವಾಗ ತೋರಿಬಂದ ನಿನ್ನ ಲೋಕಸಂಗ್ರಹ ಚಾತುರ್ಯವನ್ನು ದಯಮಾಡಿ ಸದ್ಯಕ್ಕೆ ನನಗೆ ಕೊಡು. ದೀವರಕ್ಷಕಾ, ನಾನು ಎಷ್ಟು ಹೇಳಿಕೊಂಡರೂ ಅಷ್ಟೆ. ನನ್ನ ಮೇಲೆ ನಿನ್ನ ಪೂರ್ಣ ಆ ಶೀ ರ್ವಾದ ವಿರಲೆಂದರಾಯಿತು ಈ ಮೇರೆಗೆ ಏಸಬಾಯಿಯು ಭಕ್ತಿಪರವಶಳಾಗಿ ಅತ್ಯಂತವಾದ ಸಥಿಯಿಂದ ತನ್ನ ಮಾವನನ್ನು ಪ್ರಾರ್ಥಿಸಿದ ಬಳಿಕ, ಸಮರ್ಥ ರಾಮದಾಸ ಸ್ವಾಮಿಗಳನ್ನು ಕುರಿತು “ಶ್ರೀ ಸಮರ್ಥಾ, ಗುರುದೇವಾ, ನೀನು ನಮ್ಮ ಕುಲಸ್ವಾಮಿಯಲ್ಲವೇ? ಪರಂಪರೆಯಿಂದ ನಮ್ಮ ಭೋಸಲೆ ಮನೆತನದವರು ನಿನ್ನ ಶಿಷ್ಯರಲ್ಲವೇ? ಆದಿಶಿಷ್ಯ ನಾದ ಶಿವಪ್ರಭುವಿನಿಂದ ನಿನು ಸ್ಥಾಪಿಸಿರುವ ಸಾಮ್ರಾಜ್ಯವನ್ನು ರಕ್ಷಿಸುವ ಕಠಿಣ ಪ್ರಸಂಗವು ನನ್ನಂಥ ಅಬಲೆಗೆ ಒದಗಿರಲು, ಕರುಣಾಳುವಾದ ನೀನು ನನಗೆ ಸಹಾಯ ಮಡಬಾರದೇನು ? ದಯಾವಂತಾ, ಮಾವಂದಿರು-ನಮ್ಮ ಪೂಜ ಅಬಾಸಾಹೇಬರು ಪುರುಷರಿದ್ದರು; ಅವರ ಪೌರುಷಕ್ಕೆ ಮೆಚ್ಚಿ ನೀನು ಅವರಿಗೆ ಸಹಾಯ ಮಾಡಿದ್ದರೂ ಮಾಡಿರಬಹುದು; ಅಂದ ಬಳಿಕ ಅದರಿಂದ ನಿನ್ನ ಪರಮ ಕಾರುಣಕತೆಯು ಹಾಗೆ ಪ್ರಕಟವಾಗುವದು ? ಆದ್ದರಿಂದ ಕರುಣಾನಿಧೇ, ಈಗ ಅನಾಥಳಾದ ನನ್ನಂಥ ಅಬಲೆಗೆ ಸಹಾಯ ಮಾಡಿ, ರಾಜ್ಯರಕ್ಷಣದ ಮಹಾಕಾರ್ಯವನ್ನು ನನ್ನಿಂದ ಮಾಡಿಸಿದರೆ, ಪತಿತೋದ್ಧಾರಕನೆಂಬ ನಿನ್ನ ಬಿರುದು ಸಾರ್ಥಕವಾಗುವದು .” ಎಂದು ಪ್ರಾರ್ಥಿಸಿ, ತನ್ನ ಪೂಜ್ಯ ಅಜ್ಞೆಯಾದ ಜಿಜಾಬಾಯಿಯವರನ್ನು ಕುರಿತು-ಮಾತೃಶ್ರೀ, ಅಜ್ಜಿ ಯವರೇ, ಈ ಹತಭಾಗ್ಯಳಾದ ನಿಮ್ಮ ಮೊಮ್ಮಗಳನ್ನು ಮರೆತರೇನು ? ನೀವು ನನ್ನ ಲಕ್ಷ್ಮಿಯನ್ನು ಕಾಯಲೇ ಬೇಕು, ಎಂದು ಬೇಡಿಕೊಂಡಳು. - ಹೀಗೆ ಅತ್ಯಂತ ಉಚ್ಚವಾದ ಭಾವನೆಯ ತರಂಗಗಳಲ್ಲಿ ತೇಲಾಡುತ್ತಿರುವಾಗ ಶ್ರೀ ಏಸೂಬಾಯಿಯವರ ಮುಖಯ ಮೇಲೆ ಪ್ರೇಮಯುಕ್ತ ಸ್ವಾಭಿಮಾನದ ದಿವ ದೀಪ್ತಿಯು ಶೋಭಿಸಹತ್ತಿತು, ಅವರು ತಮ್ಮ ಶಿರ:ಕಮಲವನ್ನು ಮಹಾರಾಜರ