ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ ಸಮಾಧಿಯ ಮೇಲೆ ಇಟ್ಟು ಮೇಲಕ್ಕೆದ್ದಕೂಡಲೆ , ಮ ಹಾ ರಾ ಜ ರ ಉಜ್ವಲ ತೇಜಸ್ಸು ಆ ಮಹಾತಳಾದ ಸೊಸೆಯ ಮುಖದಲ್ಲಿ ಪ್ರಕಟವಾದಂತೆ ತೋರಿತು ಇದೇ ಕಾಲದಲ್ಲಿ ದುರ್ಗದ ಅಧಿಕಾರಿಗಳೂ, ಸರದಾರರೂ, ಸೈನಿಕರೂ, ಮುತ್ಸದ್ಧಿ ಗಳೂ ರಾಣಿಗೆ ಮುಜುರೆಮಾಡುವದಕ್ಕಾಗಿ ಬಂದರು. ಅವರ ಮುಜರೆಗಳನ್ನು ಸ್ವೀಕರಿಸುವಾಗ ಏಸಬಾಯಿಯವರ ಕಣ್ಣುಗಳು ಪ್ರೇಮಾಶ್ರುಗಳಿಂದ ಆಗಾಗ್ಯ ತುಂಬುತ್ತಲಿದ್ದವು. ದುರ್ಗದಲ್ಲಿಯ ಚೌಘಡವೆಂಬ ವಾದ್ಯ ವು ಈ ಕಾಲದಲ್ಲಿ 'ಬಾರಿಸುತ್ತಲಿತ್ತು. ಜಗದೀಶ್ವರನ ದೇವಾಲಯದೊಳಗಿಂದ ಪ್ರಾತಃಕಾಲದ ಗಾಯ ಕರ ಮಂಗಲಧ್ವನಿಯು ಕಿವಿಗೆ ಬೀಳುತ್ತಲಿತ್ತು. ಕಾವಲುಗಾರರ ಕಾವಲಿನ ಸರ ತಿಗಳನ್ನು ಬದಲಿಸುವ ಕೊಂಬುಗಳ ಕರ್ಕಶಧ್ವನಿಯು ಎಲ್ಲ ಕಡೆಯಲ್ಲಿ ಪಸರಿಸಿತ್ತು. ಇವೆಲ್ಲವುಗಳ ಯೋಗದಿಂದ ಏನೂಬಾಯಿಯ ಉತ್ಸಾಹವು ಹೆಚ್ಚಿತು , ಆಕೆಯ ಆಶಾಂಕುರವು ಫಲಿಸಿತ್ತು, ಶತ್ರುವಾದ ಔರಂಗಜೇಬನು ಆಕಗೆ ಕಃಪದಾರ್ಥವಾಗಿ ತೋರಿದನು! ಇಂಥ ಪ್ರಸಂಗದಲ್ಲಿ ಅತ್ತಿಗೆಯಸಂಗಡ ಸಮಾಧಿಯ ಪೂಜೆಗೆ ಬಂದಿದ್ದ ರಾಜಕುವರಳ ವೃತ್ತಿಯು ಎಷ್ಟು ಉಜ್ವಲವಾಗಿರಬಹುದೆಂಬದನ್ನು ವಾಚ ಕರೇ ತರ್ಕಿಸತಕ್ಕದ್ದು! ೧೧ ನೆಯ ಪ್ರಕರಣ-ಮಾಸ-ದಾಣ. heap ಮಹಾರಾಷ್ಟ್ರದ ಇತಿಹಾಸದಲ್ಲಿ ರಾಜಾರಾಮನ ಈ ಕಾಲವ ಪರಮಾವಧಿ ಸತ್ತ ಪರೀಕ್ಷೆಯದೆಂದು ಹೇಳಬಹುದು , ಸತ್ವಶಾಲಿಗಳ ಸತ್ವದ ಪರೀಕ್ಷೆಯು ಇಂಥ ಕಠಿಣಕಾಲದಲ್ಲಿಯೇ ಆಗುತ್ತದೆ. ಯಾವದೊಂದು ಕಾರ್ಯವು ಭರದಿಂದ ನಡೆದಿರು ವಾಗ ಅದರಲ್ಲಿ ವ್ಯವಹರಿಸುವ ಪ್ರತಿಯೊಬ್ಬ ಮನುಷ್ಯನು , ಈ ಕಾರ್ಯವು ನನ್ನಿಂದ ಆಗುತ್ತದೆಂದು ಸಾಧಾರಣವಾಗಿ ತಿಳಿದುಕೊಳ್ಳುತ್ತಿರುತ್ತಾನೆ; ಒಂದೊಂದು ಪ್ರಸಂಗದಲ್ಲಿ ಮೂರ್ಖರಾದ ದುರಭಿಮಾನಿಗಳು ತಮ್ಮ ಯೋಗ್ಯತೆಯನ್ನು, ಕಾರ್ಯಕ್ಕಿರುವ ತಮ್ಮ. ಸಂಬಂಧದ ಮಟ್ಟನ್ನು ತಿಳಿದುಕೊಳ್ಳದೆ, ಅಹಂಭಾವದಿಂದಲೂ ಕುತ್ನಿತತನೆ' ದಿಂದಲೂ ನಾನಿಲ್ಲದಿದ್ದರೆ ಈ ಕಾರ್ಯವು ಹಾಗೆ ನಡೆದೀತಂದು ಆಕ್ಷೇಪಿಸಿ, ಕಾರ್ಯ ಹಾನಿಗಾಗಿ ತಮಿಂದಾದಷ್ಟು ಯತ್ನಿಸುತ್ತಾರೆ. ಇಂಥವರು ಕಾರ್ಯದ ಸ್ವರೂಪ ಎದ್ದಂತ ತಮ್ಮ ಪಾಲಿಗೆ ಧರ್ಮದ್ರೋಹವನ್ನಾಗಲಿ, ರಾಜ ದ್ರೋಹ ವ ಾ ಗ ಲಿ ದೇಶದ್ರೋಹವನ್ನಾಗಲಿ, ಆತ್ಮದ್ರೋಹವನ್ನಾಗಲಿ ಕಟ್ಟಿಕೊಳ್ಳುವರು. `ಗಾಳಿಗೆ ಜೊಳ್ಳು ಹಾರಿ ಗಟ್ಟಿಯು ಉಳಿಯುವಂತ, ಕಾರ್ಯಸಾಧನಕ್ಕೆ ಅವಶ್ಯವಾಗಿದ್ದ