ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂ೪ ಸುರಸಗ್ರಂಥಮಾಲಾ. M ತಪೋರೂ ಪವಾದ ಬಿರುಗಾಳಿಯು ಬೀಸಿದಕೂಡಲೆ ಸ್ವಾರ್ಥಪರಾಯಣರಾದ ಈ ಪೊಳ್ಳು ಮನಸಿನ ಜನರು ಹಾರಿಹೋಗಿ ತಮ್ಮ ಜೊಳ್ಳು ತನವನ್ನೂ, ಯೋಗ್ಯತೆಯ ಹೀನತ್ವವನ್ನೂ ತೋರಿಸುವರು. ಈ ಸ್ಪಿತಿಯು ಅಕ್ಷರಶಃ ರಾಜಾರಾಮನ ಕಾಲದ ಕಿರ್ದಿಗೆ ಹತ್ತುತ್ತದೆ. ಶಿವಪ್ರಭುವಿನಂಥ ಮಹಾತೇಜಸ್ವಿಯಾದ ಪ್ರಭುವು ದೇಹವಿ ಟ್ನದ್ದರಿಂದ ಮಹಾರಾಷ್ಟ್ರವು ತಾಪಕ್ಕೊಳಗಾಯಿತು; ಆತನ ತರುವಾಯ ಪಟ್ಟವೇ ರಿದ ಸಂಭಾಜಿಯಂಥ ಶೂರನೂ, ದುರ್ವ್ಯಸನಿಯೂ, ವಿವೇಕಭ್ರಷ್ಯನೂ ಆದ ಪ್ರಭು ವಿನ ತಾಪವನ್ನು ಸಹಿಸುವ ಪ್ರಸಂಗವು ಮಹಾರಾಷ್ಟ್ರಕ್ಕೆ ಒದಗಿತು; ಅಷ್ಟರಲ್ಲಿ ಅತ್ಯಂತ ಬಲಾಧ್ಯನಾದ ಔರಂಗಜೇಬ ಬಾದಶಹನು ಮರಾಟರನ್ನು ಹುರಿದು ಅರಳು ಮಾಡಬೇಕೆಂದು ದಗದಗ ಉರಿಯುತ್ತ ಬಂದನು. ಇ೦ಧ ದುಃಸಹವಾದ ತಾಪತ್ರ ಯದಲ್ಲಿ ಕೆಚ್ಚೆದೆಯ ನಿಜವಾದ ಸ್ವಾಮಿ ಭಕ್ತರಲ್ಲದೆ, ಸ್ವಾರ್ಥಪರಾಯಣರಾದ ಅಳ್ಳೆ ದೆಯ ದುದೈವನಿಗಳು ಮಹಾರಾಷ್ಟ್ರ ರಾಜ್ಯ ರಕ್ಷಣದಂಥ ಕಠಿಣ ಕಾರ್ಯಕ್ಕೆ ಹೇಗೆ ಟೊಂಕ ಕಟ್ಟಬೇಕು ? ಹೇಡಿಗಳಿಂದ ಅಧಮರು , ದೇಶಕಾರ್ಯಕ್ಕಾಗಿ ಟೊಂಕ ಕಟ್ಟು ವದಂತು ಇರಲಿ; ಅವರು ದೇಶದ್ರೋಹವನ್ನು ಚಿಂತಿಸಿದರೆಂದ ಬಳಿಕ ಅವರ ಅಧಮ ತನ ವನ್ನು ಯಾರು ವರ್ಣಿಸಬಹುದು? ಶ್ರೀ ಶಿವಪ್ರಭುವು ದೇಹವಿಡುವಾಗ-“ನೀವು ಮೂವರು ಬ್ರಾಹ್ಮಣರು, ಮೂವರು ಮರಾಟರು ಕೂಡಿ ಮಣಗಿ ಹೋಗುವ ರಾಜ್ಯವನ್ನು ಉಳಿಸಿಕೊಳ್ಳು, ವಿರಿ.” ಎಂದು ಭವಿಷ್ಯ ಹೇಳಿದನೆಂದು ಹಿಂದೆ ಹೇಳಿದೆಯಷ್ಟೆ! ಅಸಂಖ್ಯ ಜನ ಮರಾಟರಲ್ಲಿ ಆರೇ ಜನರನ್ನು ನಮ್ಮ ಶಿವಪ್ರಭುವು ಆರಿಸಿ ಹೇಳಿರುವದನ್ನು ನೋಡಿ ದರೆ, ಎಲ್ಲಿಯಾದರೂ, ಯಾವಾಗಲೂ, ನಿಸ್ಪೃಹರಾದ ಕರ್ತವ್ಯನಿಷ್ಠರ ಸಂಖ್ಯೆಯು ಅಲ್ಪವಿರುತ್ತದೆಂಬ ಮಾತಿನ ಅನುಭವಕ್ಕೆ ಬಲವಾದ ಸಕ್ರಿಯ ದೊರೆದಂತಾಗುವದು ! ಇರಲಿ, ಈ ಆರು ಜನರಲ್ಲಿ ಸಂತಾಜೆ ಘೋರಪಡೆಯೆಂಬ ಮ ಹಾ ಪ್ರತಾ ಪಿ ಯಾ ದ ಮರಾಟ ಸರದಾರನು ಒಬ್ಬನಾಗಿದ್ದನು. ಈ ಪುಣ್ಯವಂತನ ಸ್ವಾಮಿನಿಷ್ಟೆಯು ಬಹು ಉಜ್ವಲವಾದದ್ದೆಂಬದನು , ಏಸಬಾಯಿಯವರ ಬಳಿಯಲ್ಲಿ ಆತನು ಮಾಡಿದ ಪ್ರತಿಜ್ಞೆಯಿಂದ ವಾಚಕರಿಗೆ ಗೊತ್ತಾಗಿರಬಹುದು. ಸ್ವಾಮಿ ಕಾರ್ಮಿವೇ ಈ ವೀರನ ಕಾ ಯ ೯ ವಾಗಿ ಹೊ ” ದ ದ್ದ ರಿ ೦ ದ, ತ ನ ದೆ೦ ದು ಅಭಿಮಾನ ಪಡಲಿಕ್ಕೆ ಈತನಿಗೆ ಬೇರೆ ಕಾರ್ಯವೇ ಇದ್ದಿಲ್ಲ! ಈತನು ಉಣ್ಣುವದು ಸಮಕಾರ್ಯಕ್ಕಾಗಿ, ತಿನ್ನುವದು ಸ್ವಾಮಿಕಾರ್ಯಕ್ಕಾಗಿ, ಗಳಿಸುವದು ಸ್ವಾಮಿಕಾರ್ಯಕ್ಕಾಗಿ, ವೆಚ್ಚ ಮಾಡುವದು ಸ್ವಾಮಿ ಕಾರ್ಯಕ್ಕಾಗಿ ಆಗಿದ್ದು, ಸ್ವಾಮಿಕಾರ್ಯವನ್ನು ಮಿತಿಮೀರಿದ