ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ - ೧೦## - --•• : – ಆಸಕ್ತಿಯಿಂದ ಮಾಡುತ್ತಿದ್ದುದರಿಂದ ಆಗಿನಕಾಲದ ಎಷ್ಟೋ ಜನರು ಈತನನ್ನು ಅಹಳ ಕಾರಿ ಎಂತಲೂ, ದುರಭಿಮಾನಿಯೆಂತಲೂ, ಶೀಘ್ರಕೋಪಿಯೆಂತಲೂ, ಜಾಜ್ವಲ್ಯ. ಸ್ವಭಾವದವನೆಂತಲೂ, ನಿಷ್ಟುರನೆಂತಲೂ ಹಳಿದಿರಬಹುದು; ಕಾರ್ಯ ನಿಷ್ಠರು ಜನರ ಸ್ತುತಿನಿಂದೆಗಳನ್ನೆಲ್ಲಿ ಲೆಕ್ಕಿಸುವರು? ಅದರಂತೆ, ಸಂತಾಜಿಯ. ಸ್ವಾಮಿಕಾರ್ಯದಲ್ಲಿ ದೇಹವು ಉಳಿಯಲಿ-ಅಳಿಯಲಿ, ಶುದ್ಧಾಂತಃಕರಣದಿಂದ ಸ್ವಾಮಿಸೆವೆಯಲ್ಲಿ ದೇಹ.. ವನ್ನು ಸವಿಸಿ, ಕೈಗೆ ಬಾರದ ಹಾಗಾದ ಬಳಿಕ ಅದನ್ನು ಚೆಲ್ಲಿಕೊಡುವದೆಂದೆ ತನ್ನ ಕೆಸವೆಂದು ತಿಳಿದು, ಆತನು ಕಡೆತನಕ ಕ್ರಿಯಾವಂತನಾಗಿ ನಡೆದನು. ಆದ್ದ ರಿಂದಲೇ ಇತಿಹಾಸದಲ್ಲಿ ಈ ವೀರಾಗ್ರಣಿಯ, ಸ್ವಾಮಿಕಾರ್ಯಸಾಧಕ-ವೀರಮಂಡ ಲದಲ್ಲಿ ಪ್ರಮುಖವಾಗಿ ಎಣಿಸಲ್ಪಟ್ಟಿರುತ್ತಾನೆ ! ಸಂತಾಚಿಗೆ ಸ್ವಾಮಿ ಕಾರ್ಯದ ಎಲ್ಲ ಭರವು ತನ್ನ ಮೇಲೆಯೇ ಬಿದ್ದಂತೆ ಆಗಿ, ತು, ತನ್ನಿಂದ ಸ್ವಾಮಿಗೆ ಯಾವಾಗಲೂ ಸಹಾಯವಾಗುತ್ತ ಹೋಗಬೇಕಲ್ಲದೆ, ತನ್ನ ಸಲುವಾಗಿ ತನ್ನ ಸ್ವಾಮಿಯು ಪೇಚಾಡಬಾರದೆಂದು ಆತನು ಹೆಣ ಗುಳ್ಳಲಿದ್ದನು ತನ್ನ ಸ್ವಾಮಿಗೆ ಈಗ ದ್ರವ್ಯದ ಕೊರತೆ ಯಿ ರು ವ ದ ೬೦ ದ , ತನ್ನ-ಸಾಗು ತನ್ನ ದಂಡಿನ ವೆಚ್ಚಕ್ಕಾಗಿ ಸ್ವಾಮಿಯ ಮೇಲೆ ದ್ರವ್ಯದ ಭಾರ ಹಾಕದೆ , ತಿರುಗಿ ತಾನೇ ಸ್ವಾಮಿಗೆ ದ್ರವ್ಯದ ಸಹಾಯ ಮಾಡಿ ಆತನನ್ನು ಸಂತೋಷಗೊಳಿಸಬೇಕೆಂದು ಆತನ ಯೋಚಿಸಿ, ಅದಕ್ಕಾಗಿ ಉಪಾಯವನ್ನು ಚಿಂತಿಸತೊಡಗಿದನು. ತನ್ನ ಸ್ವಾಮಿ ಯಾದ ಸಂಭಾಜಿಯನ್ನು ಬಾದಶಹನು ಕರತನದಿಂದ ಕೊಲ್ಲಿಸಿದ್ದೆಂದು ರೋಚ್ಚು. ಆತನ ಹೊಟ್ಟೆಯಲ್ಲಿ ಇದ್ದೇ ಇತ್ತು. ತನಗೆ ದ್ರವ್ಯಪ್ರಾಪ್ತಿಯಾಗಿ, ಔರಂಗಜೇಬನ ಸೇಡು ತೀರಿಸಿದ ಸಮಾಧಾನವೂ ತನಗೆ ಆಗಬೇಕಾದರೆ, ತಾನು ಅಲ್ಲಲ್ಲಿ ಹೊಂಚು. ಹಾಕಿ, ಮುಸಲ್ಮಾನ ಸರದಾರರನ್ನು ಹಣಿದು, ಅವರ ಒಳಿaಯಲ್ಲಿದ್ದ ಧನ-ಧಾನ: ಗಳನ್ನು ಸುಲಿದುಕೊಳ್ಳುವದೊಂದೇ ಉಪಾಯವು ಇರುವದೆಂದು ಆತನು ತಿಳಿದು ಕೊಂಡನು. ಆಗ ಶೂರ ಸಂತ: ಜಿತನ್ನ ವ ನಸ್ಸಿನಲ್ಲಿ_ಮಹಾರಾಜರನ್ನು ಕೊಲ್ಲಿಸಿದ್ದರಿಂದ ಬಾದಶಹನಿಗೆ ಆಕಾಶವು ಮೂರೇ ಗೇಣು ಉಳಿದಂತಾಗಿರುತ್ತದೆ. ಅತ್ಯಂತವಾಗಿ ಕೋಜಿಸಿರುವ ಆತನ ಸೈನ್ಯ ರೂಪವಾದ ಮ ಹಾ ಸಾ ಗ ರ ದಲ್ಲಿ ; ಮರಾಟರ ರಾಜ್ಯ ನಾಕೆಗೆ ಎಷ್ಟು ಮಾತ್ರವೂ ಆಧಾರವಿಲ್ಲ. ಇಂಥ ಪ್ರಸಂಗದಲ್ಲಿ: ಬಾದಶಹನ “ಕರ್ತು ಮನ ಥಾಕರ್ತುo ” ಶಕ್ತಿಯ ಮುಂದೆ ಮರಾಟರ ಕೈಯನ್ನು ಚೆನ್ನಾಗಿ ತೋರಿಸಬೇಕು , ಹೀಗೆ ಅಭಿಮಾನದಿಂದ ಪ್ರದೀಪ್ತನಾದ ಸಂತಾಜಿಯು ಶಂಭುಮಹಾದೇವನ: