ವಿಷಯಕ್ಕೆ ಹೋಗು

ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ, ೧೦೬ ಕಾಣದಹಾಗಾಗುತ್ತಿದ್ದನು. ಈ ಸ್ಥಳದಲ್ಲಿ ಸಂತಾಜಿಯ ಸೈನಿಕರು ಅಲ್ಲಲ್ಲಿ ಗುಂಪು ಗುಂಪಾಗಿ ಅಡಗಿಕೊಂಡು ಕುಳಿತಿದ್ದರು. ಅವರ ಸಂಸಾರವೆಲ್ಲ ಅವರ ಬೆನ್ನ ಮೇಲೆಯೇ ಇರುತ್ತಿತ್ತು. ರೊಟ್ಟಿ , ಹಿಂಡಿ , ಉರುಳಗಡೆ ಇವೇ ಮೊದಲಾದವು ಗಳನ್ನು ತಿಂದು ಅವರು ಸಂತುಷ್ಟರಾಗುತ್ತಿದ್ದರು. ಕಂಬಳಿಯ ಮೇಲೆ ಅವರಿಗೆ ಸುಖದಿಂದ ನಿದ್ರೆ ಬರುತ್ತಿತ್ತು. ಅವರ ಉಡಿಗೆತೊಡಿಗೆಗಳು ತೀರ ಬಡತನ ಸ್ಥಿತಿ ಯವಿದ್ದು, ಬರ್ಚಿ, ಕತ್ತಿ, ಢಾಲು ಇವು ಅವರ ಮುಖ್ಯ ಆಯುಧಗಳಾಗಿದ್ದವು. ಚಪಲತನದಲ್ಲಿಯ, ಕಷ್ಟಸಹಿಸುವದರಲ್ಲಿಯೂ , ಉಪವಾಸ ವನವಾಸ ಬಿದ್ದು ಯುದ್ಧ ಮಾಡುವದರಲ್ಲಿಯೂ ಅವರನ್ನು ಯಾರೂ ಸರಿಗಟ್ಟುವಹಾಗಿದ್ದಿಲ್ಲ ಇಂಥ ತನ್ನ ಸೈನಿಕರು ಅಲ್ಲಲ್ಲಿ ಅಡಗಿರುವಾಗ ಸಂತಾಜಿಯು ಮೇಲೆ ಹೇಳಿದಂತೆ ಕುದುರೆಯನ್ನು ಹತ್ತಿಕೊಂಡು ಬಂದು, ಒಂದು ಶಿಳ್ಳು ಹೊಡೆದನು. ಕೂಡಲೆ ಅಲ್ಲಲ್ಲಿ ಪಸರಿಸಿದ್ದ ಆತನ ಜನರೆಲ್ಲ ತಮ್ಮ ಒಡೆಯನ ಬಳಿಯಲ್ಲಿ ಒಟ್ಟುಗೂಡುವದ ಕ್ಯಾಗಿ ಲಗಬಗೆಯಿಂದ ಓಡಾಡಹತ್ತಿದರು. ನೂರಿನ್ನೂರು ಜನ ರಾವುತರು ಗಿಡ ಗಂಟೆಗಳೊಳಗಿಂದಲೂ, ದರಿ-ಕಂದರಗಳೊಳಗಿಂದಲೂ ಕತ್ತಿಯನ್ನು ಹಿರಿದು ಕೊಂಡು ಹೊರಬಿದ್ದು ಬಂದರು ! ಈ ಮೇರೆಗೆ ಬಂದು ಒಟ್ಟಗೂಡಿದ ತನ್ನ ಜನರನ್ನು ಕುರಿತು ಸಂತಾಜಿಯ ಗರ್ಜಿಸಿ ನುಡಿದನೇನಂದರೆ-ನನ್ನ ಶೂರ ರಾವುತರೇ, ಈ ವರೆಗೆ ನಾವು ಶ್ರೀ ಅಂಬಾಭವಾನಿಯನ್ನು ಪ್ರಾರ್ಥಿಸಿದ್ದರ ಫಲವು ಇಂದು ನಮಗೆ ಸಿಗುವಹಾಗೆ ತೋ ರುತ್ತದೆ. ವೈರಿಯು ನಮ್ಮ ಗವಿಯಲ್ಲಿ ಸೇರಲಿಕ್ಕೆ ಬರುತ್ತಲಿದ್ದಾನೆ. ನಡೆಯಿರಿ, ನಮ್ಮ ಶಿವಪ್ರಭುವಿನ ಕಾಯಕವನ್ನು ಮಾಡೋಣ, ನಡೆಯಿರಿ, ಶಿವಪ್ರಭುವು ದಾವು ದಖಾನನ ದೂಳವನ್ನು ಹ್ಯಾಗೆ ಹಾರಿಸಿದನು? ಎಕಲಾಸಖಾನ, ಬಾಕೇಖಾನ, ರಾಯಮುಕುಂದ, ಭವಾನ ಪುರೋಹಿತ ಇವರನ್ನು ಹ್ಯಾಗೆ ಗೊತ್ತಿಗೆ ಹಚ್ಚಿದ ನು ! ಸುರತ ಪಟ್ಟಣವನ್ನು ಸುಲಿದು ಐದುಕೋಟ ಹೊನ್ನನ್ನೂ, ಐದುಸಾವಿರ 'ಕುದುರೆಗಳ ಪಾಗೆಯನ್ನೂ ರಾಯಗಡಕ್ಕೆ ತಂದುಹಾಕಿ, ಮರಾಟರ ಬರ್ಚಿಯ ಪ್ರಭಾವವನ್ನು ಹಾಗೆ ತೋರಿಸಿದನು? ನಡೆಯಿರಿ, ಆತನು ತೋರಿಸಿರುವ ಹಾದಿಯನ್ನೇ ನಾವು ಹಿಡಿಯೋಣ! ನಮ್ಮ ಮಹಾರಾಜರು ಸದ್ಯಕ್ಕೆ ಪಲ್ಲಾಳಗಡದಲ್ಲಿರುವರು. ದುಡ್ಡಿ. ನ, ಹಾಗು ಜನರ, ಅದರಂತ ಧಾನ್ಯಾದಿಗಳ ಕೊರತೆಯು ಅವರಿಗೆ ವಿಶೇಷವಾಗಿ ಇರುತ್ತದೆ. ನಡೆಯಿರಿ, “ ಹರಹರ ಮಹಾದೇವ ” ಎಂದು ಗರ್ಜಿಸಿ, ಸ್ವರಾಜ್ಯ ಪ್ರಾಪ್ತಿಗಾಗಿ ನೂರಾರು ಒಂಟೆಗಳ ಮೇಲೆ ದತ್ತನ್ನು ಹೇರಿ ಮಹಾರಾಜರ ಕಡೆಗೆ