ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೮ ಸುರಸಗ್ರಂಥಮಾಲಾ, ಕಳಿಸೋಣ ನಡೆಯಿರಿ ! ಇನ್ನು ಮೇಲೆ ನಮ್ಮ ಹೊಟ್ಟೆಯ ಭಾರವನ್ನು ಮಹಾ ರಾಜರ ಮೇಲೆ ಹಾಕುವದು ಸರಿಯಲ್ಲ. ಪರಮ ದಯಾಳುವಾದ ಬಾದಶಹನು, ಕೋಟಿಗಟ್ಟಲೆ ದ್ರವ್ಯವನ್ನೂ, ಲಕ್ಷಗಟ್ಟಲೆ ಕಾಲಾಳುಗಳನ್ನೂ, ಸಾವಿರಗಟ್ಟಲೆ ಆನೆ-ಒಂಟಿ-ಕುದುರೆಗಳನ್ನೂ, ನೆಲೆಯಿಲ್ಲದಷ್ಟು ಮುತ್ತು ರತ್ನ -ಬಂಗಾರ ವನ್ನೂ ತನ್ನ ವೈಭವವನ್ನು ಹೆಚ್ಚಿ ಸುವದಕ್ಕಾಗಿ ನಿಮ್ಮ ಬಳಿಗೆ ತಕ್ಕೊಂಡು ಬಂದಿ ದ್ದಾನೆ. ಬಾದಶಹನನ್ನು ಹೇರು ಹೊರುವ ಎತ್ತನ್ನು ಮಾಡಿ, ನಾವು ಆತನ ಐಶ್ನ ರ್ಯವನ್ನು ಭೋಗಿಸಿದರೆ ಮಾತ್ರ, 'ನಾವು ಶಿವಪ್ರಭುವಿನ ಹೆಸರು ಹೇಳುವದರ ಸಾರ್ಥಕವಾಗುವದು ! ಬಾದಶಹನು ನಮ್ಮ ಕುದುರೆಗಳ ದಾಣಿಯನು ತನ್ನ ಕುದು: ರೆಗಳ ಹೆಗಲ ಮೇಲೆ ಹೇರಿಕೊಂಡು ಬಂದಿದ್ದಾನೆ. ಆದ್ದರಿಂದ ನಾವು ಆ * ಘಾಸುದಣಿ ” ಯನ್ನು ಇಳಿಸಿಕೊಳ್ಳೋಣ ನಡೆಯಿರಿ, ನಮ್ಮ ಶೂರರಾವುತರೇ, ದಿಮಾಕಿನಿಂದ ಬರುವ ಮೊಗಲ ಸೈನ್ಯವನ್ನು ಇಕ್ಕಟ್ಟಿನ ಸ್ಥಳದಲ್ಲಿ ಗಂಟುಬಿದ್ದು ನಾಶಮಾಡೋಣ ನಡೆಯಿರಿ ! ಈ ಮೇರೆಗೆ ಸಂತಾಜಿಯು ಗರ್ಜಿಸಲು, ಯಾವತ್ತು ಮಹಾರಾಷ್ಟ್ರ ವೀರರು “ ಹರ ಹರ ಮಹಾದೇವ” ಎಂದು ಗರ್ಜಿಸಿದರು. ಅವರ ಗಂಭೀರಧ್ವನಿಯು ಸುತ್ತು ಮುತ್ತಲಿನ ಪರ್ವತಶ್ರೇಣಿಗಳಲ್ಲಿ ಪ್ರತಿಧ್ವನಿತವಾಗಿ, ಆಗು ಮೇಘಗರ್ಜನೆಯನ್ನು ಅತಿ ಕ್ರಮಿಸಲು, ವನಪಶುಗಳು ದಿಕಗೆಟ್ಟು ಓಡಹತ್ತಿದವ. ಸಂತ?ು ತನ್ನ ಒಟ್ಟು ಗೂಡಿದ ಸೈನ್ಯದಲ್ಲಿ ಬೇರೆ ಬೇರೆ ಭಾಗಗಳನ್ನು ಮಾಡಿದನು. ಅವರು ಬೇರೆಬೇರೆ ಒಳ ದಾರಿಗಳಿಂದ ಹೊಳೆಹಳ್ಳಿ ಗಳ ಆಸರ ಹಿಡಿದುಹೋಗಿ ನನ ಸೈನ್ಯದ ಹಿಂಭಾಗ ನನ್ನೂ, ಮುಂಭಗವನ ಹೊಡೆಯಲಿಕ್ಕೆ ಹೊಂಚುಹಕಿಕೆ ಒಡು ಸಗಿ ಬರಬೇ ಕಂದು ಗೊತ್ತಾಗಿತ್ತು, ಮತ್ತು ಮೊದಲು ಧಾನ್ಯಸಾಮಗ್ರಿಗಳನ್ನು, ಆನೆಕುದುರೆಒಂಟೆಗಳನ್ನು ಅಪಹರಿಸಿ, ತಕ್ಕ ಸಮಯವು ಒದಗಿದಕೂಡಲೆ ಖಾನನ ಸೈನ್ಯದ ಮೇಲೆ ಬಿದ್ದು ಅದನ್ನು ತುಂಡರಿಸಬೇಕೆಂತಲೂ ಸಂಕೇತವಾಗಿತ್ತು. ಅವರ ಈ ಸಂಕೇತವ ಕೊನೆಗಂಡರೆ ಮಾತ್ರ ಅವರ ಸಣಕಲವು ವ್ಯಕ್ತವಾಗುತ್ತಿತ್ತು. ಈ ಮೊದಲನೆಯ ತುತ್ತು ದಕ್ಕಿ, ಶುಭಶಕುನವಾಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಸಂತಾಜಿಯು ತಾಳಿ ದ್ದನು. ಅದರಂತೆ, ಆರಂಭಕ್ಕೆ ತನ್ನ ಕೈಯಲ್ಲಿ ಸಿಕ್ಕಿದ್ದ ಪರಾಕ್ರಮಿಯಾದ ಮೊಗಲ ಸರದಾರನ ತಲೆಯ ಮುಂಡಾಸವನ್ನು ತನ್ನ ಪ್ರಭುವಿನ ಚರಣದ ಮೇಲೆ ಇಡುವ ಸುಯೋಗವು ಒದಗಬೇಕೆಂದು ಆತನು ಮನಮ೬ ಬಯಸುತ್ತಿದ್ದನು. ಇಂಥ ಸ್ಥಿತಿ ಯಲ್ಲಿ ಸಂತಾಜಿಯು ಖಾನನ ಸಾಮಾನು ಒಯ್ಯುವ ಲಮಾಣಿಗಳ ತಾಂಡೆಂ