ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ - ೧೦ ಸುಲಿಯಲು, ಅವರು ಅಳುತ್ತ ತಮ್ಮ ಖಾನನ ಬಳಿಗೆ ಬಂದು-ಹುಜೂರ, ಆ ಗುಡ್ಡದ ಒಟ್ಟೆಯಲ್ಲಿ ಕಾಫರರು ನನ್ನನ್ನು ಪೂರ್ಣವಾಗಿ ಸುಲಿದರು. ಮೈಮೇಲಿನ ಒಂದೊಂ ದು ಅರಿವೆಯನ್ನು ಮಾತ್ರ ಬಿಟ್ಟು ನನ್ನನ್ನು ದೂಡಿಹಾಕಿದರು, ಎಂದು ದೂರಿಕೊ ಳ್ಳುತ್ತಿರಲು, “ನಮ್ಮ ಸೈನ್ಯದೊಂದು ಗುಂಪು ಎಲ್ಲಿಯೋ ಮಾಯವಾಯಿತೆಂದು ಒಬ್ಬರು ಬಂದು ಹೇಳಿದರು. ಈ ಸುದ್ದಿಗಳನ್ನು ಕೇಳಿ ಖಾನನ ಸೈನಿಕರು ಗಾಬರಿಯಾದರು. ಅಷ್ಟರಲ್ಲಿ “ಅಗೋ ನೋಡಿರಿ, ಅತ್ತ ನೋಡಿರಿ, ಕಾಫರರು ಆ ಗುಡ್ಡದಿಂದ ಇಳಿದು ಬರು ತಾರೆ' ಎಂದು ಖಾನನ ಬಲಗಡೆಯ ಮಗ್ಗಲಿನ ಜನರು ಒಂದೇ ಸವನೆ ಕೂಗಹತ್ತಿದರು. ಅದನ್ನು ನೋಡಿಯಂತು ಖಾನನ ದಂಡಾಳುಗಳ ಎದೆಯೊಡೆದು ನೀರಾಯಿತು, ಕಾಫ ರರ ಆ ಗುಂಪು ನೋಡನೋಡುತ್ತಿರುವಷ್ಟರಲ್ಲಿ ಮತ್ತೆ ಅದೃಶ್ಯವಾಯಿತು, ಆಗ ಖಾನ ನ ಸೈನಿಕರು, ತಮ್ಮನ್ನು ಪುಂಡ ಮರಾಟರು ಹೊಂಚುಹಾಕಿ ಯಾವಾಗ ಹಣಿಯು ವರೋ ಎಂದು ದಂಗುಬಡಿದು ಆಲೋಚಿಸಹತ್ತಿದರು . ಸೈನಿಕರು ಇಷ್ಟು ಗಾಬರಿಯಾದರೂ, ಧೈರ್ಯಶಾಲಿಯಾದ ಖಾನನು ಬೆದ ರಲಿಲ್ಲ. ಆತನು ಹಲವು ಸಂಗ್ರಾಮಗಳ ಅನುಭವವನ್ನು ಪಡೆದಿದ್ದ ಗಂಡುಗಲಿಯಾಗಿ ದ್ದನು. ಆತನು ತನ್ನ ಸೈನ್ಯದಲ್ಲಿ ಎರಡು ಭಾಗಗಳನ್ನು ಮಾಡಿ, ಅವುಗಳ ನಡುವೆ ಸಾಮಾನುಗಳ ಎತ್ತುಗಳನ್ನು ಹಾಕಿ, ತಾನು ಸೈನ್ಯದ ಮುಂಭಾಗದಿಂದ ಹಿಂಭಾಗಕ್ಕೆ - ಹಿಂಭಾಗದಿಂದ' ಮುಂಭಾಗಕ್ಕೆ ಹೋಗುತ್ಯ, ಜಾಗರೂಕತೆಯಿಂದ ರಕ್ಷಿಸುತ್ತ, ಸೈನ್ಯ ವನ್ನು ಸಾಗಿಸಿಕೊಂಡು ನಡೆದನು, ಅಷ್ಟರಲ್ಲಿ ಒಂದು ಚಮತ್ಕಾರದ ಪ್ರಸಂಗವ ಒದಗಿತು; ಖಾನನ ಮುಂಭಾಗದ ಸೈನಿಕರು ಒಂದು ಗುಡ್ಡವನ್ನು ಇಳಿದು ಬೈಲುಪ್ರದೇಶಕ್ಕೆ ಹೋದರು , ಹಿಂಭಾಗದ ಸೈನಿಕರು ಗುಡ್ಡವನ್ನು ಹತ್ತಕೊಡ ಗಿದ್ದರು ; ಸಾಮಾನುಗಳ ಎತ್ತುಗಳು ಮಾತ್ರ ಗುಡ್ಡದ ತಲೆಯ ಮೇಲೆ ಉಳಿದವು . ಇದೇ ಸಂಧಿಯನ್ನು ಕಾದುಕೊಂಡು ಕುಳಿತಿದ್ದ ಮರಾಟರು ಆ ಗುಡ್ಡದ ಎರಡೂ ಮಗ್ಗಲಿನ ಇಳಕಲುಗಳಿಂದ ಸರಸರ ಏರಿ ಬಂದು ಲಮಾಣಿಗಳಿಗೆ ಗಂಟು ಬಿದ್ದರು. ಮರಾಟರನ್ನು ನೋಡಿದ ಕೂಡಲೆ ಅರ್ಧ ಸತ್ತು ಹೋಗಿದ್ದ ಲಮಾಣಿಗಳು ಯುದ್ಧ ವೇನು ಮಾಡ ವರು? ಆಗ ಧೀರರಾದ ಸ್ವಲ್ಪ ಜನ ಮರಾಟರು ಅತ್ಯಂತ ಚಾಪಲ್ಯ ದಿಂದ ಖಾನನ ಸಾಮಾನುಗಳನ್ನೆಲ್ಲ ಹೊರಡಿಸಿಕೊಂಡು ಹೋಗಿ ಎಲ್ಲಿಯೋ ಕಂದರ ದಲ್ಲಿ ಗುಪ್ತವಾಗಿಬಿಟ್ಟರು. ಈ ಕಾಲದಲ್ಲಿ ಖಾನನು ಗುಡ್ಡದ ಕೆಳಗಿದನು. ಮರಾಟರ: ಹೀಗೆ ತನ್ನ ಅನ್ನ ಸಾಮಗ್ರಿಯನ್ನು ಸುಲಿಯುವದನ್ನು ನೋಡಿ, ಅತ್ಯಂತ ರೋಷದಿಂದ ಗುಡವನ್ನು ಏರಹತ್ತಿದನು . ಆತನು ಗುಡ್ಡದ ತಲೆಯ ಮೇಲೆ ಬಂದು