ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ಸುರಸಗ್ರಂಥಮಾಲಾ . ನೋಡುತ್ತಾನೆ, ಬೈಲಲ್ಲಿ ಹೋಗಿರುವ ತನ್ನ ಸೈನ್ಯದ ಮೇಲೆ ಮರಾಟರ ಬೇರೊಂದು ಗುಂಪು ಬಿದ್ದು, ಅದನ್ನು ತುಂಡರಿಸುತ್ತಲಿತ್ತು. ಗುಡ್ಡದ ತಲೆಯ ಮೇಲಿನ ಮರಾ ಟರಂತು ಯಾವಾಗೋ ಸಾಮಾನುಗಳನ್ನು ಸಾಗಿಸಿಕೊಂಡು ವಾನರರಂತ ಗುಡ್ಡವನ್ನಿ ಳಿದು ಹೋಗಿಬಿಟ್ಟಿದ್ದರು ! ಈ ಅನರ್ಥವನ್ನು ನೋಡಿ ಖಾನನು ತನ್ನ ಹಿಮ್ಮಗಲಿನ ಸೈನ್ಯವನ್ನು ಕೂಡಿ ಕೊಂಡು ಆ ಬೈಲೊಳಗಿನ ಸೈನಿಕರಿಗೆ ಸಹಾಯಮಾಡುವದಕ್ಕಾಗಿ ವೇಗದಿಂದ ಹೊರ ಟನು . ಆದರೆ ಅವನು ಮಾಡುತ್ತಾನೇನು ? ಈರ್ಷೆಯಿಂದ ಗುಡ್ಡವನ್ನು ಹತ್ತಿ ಇಳಿಯುವದರೊಳಗೆ ಅವನ ಸೈನಿಕರು ಜರ್ಜರರಾಗಿಹೋಗಿದ್ದರು. ಮೊಗಲ ಸೈನಿ ಕರು ಸುಖಕ್ಕೆ ಮೆಚ್ಚಿದವರಾದ್ದರಿಂದ, ಕಾಟಕತನದ ಮರಾಟರಿಗೆ ಅವರು ಈಡಾಗು ತಿದ್ದಿಲ್ಲ. ಖಾನನು ಬೈಲಲ್ಲಿ ಇಳಿದು ಹೋಗಿ ಎಲ್ಲಿಯಾದರೂ ಊರು ಕೇರಿಗಳಿದ್ದರೆ ಜನರನ್ನು ಸುಲಿದು, ಅಥವಾ ಹೊಲವನ್ನು ಹಾಳು ಮಾಡಿ ಹೊಟ್ಟೆಯ ತಾಪವನ್ನು ಶಾಂತ ಮಾಡಿಕೊಳ್ಳ ಬೇಕೆಂದು ತನ್ನ ಸೈನ್ಯದೊಡನೆ ಮೈ ಮೇಲೆ ಅರಿವಿಲ್ಲದವನಂತೆ ತಿರುಗಹತ್ತಿದನು ; ಆದರೆ ಮರಾಟರು ಊರು ಹೊಲಗಳನ್ನು ಸುಟ್ಟು ಬಿಟ್ಟಿದ್ದರಿಂದ ಖಾನನ ಸೈನಿಕರಿಗೆ ತುತ್ತು ಅನ್ನ ಸಿಗಲೊಲ್ಲದು, ಗುಟುಕು ನೀರುಸಿಗಲೊಲ್ಲದು! ಮೊಗಲ ಸೈನಿಕರು ಬಲಿಷ್ಟರಿದ್ದರು ; ಅವರ ಶಸ್ತ್ರಾಸ್ತ್ರಗಳು ಶ್ರೇಷ್ಟವಾದವುಗಳಿದ್ದವು; ಆದರೆ ಹಸಿವಿನಿಂದ ಕಂಗಾಲಾಗಿ ಅವರ ಶಸ್ತ್ರಗಳೇ ಅವರಿಗೆ ಭಾರವಾಗಿರುವಾಗ ಅವ ರೇನು ಮಾಡಬೇಕು ? ಈ ಸ್ಥಿತಿಯಲ್ಲಿ ಸಂತಾಜಿಯು ತನ್ನ ಆರಿಸಿದ ನೂರಿನ್ನೂರು ಸೈನಿಕರೊಡನೆ ಖಾನನ ಸೈನ್ಯದ ಮೇಲೆ ಅಕಸ್ಮಾತ್ ಹದ್ದಿ ನಂತೆ ಎರಗಿದನು. ಖಾನ ನಾದರೂ ತನ್ನ ಸೈನ್ಯವನ್ನು ಹುರಿದುಂಬಿಸಿ ಪರಮಾವಧಿಯಾದ ಶೌರ್ಯದಿಂದ ಕಾದಿ ದನು, ಆದರೆ ಹಸಿವೆಯಿಂದ ಕಂಗಾಲಾದ ಖಾನನ ಸೈನಿಕರು ಮರಾಟರ ಉಪಟಲಕ್ಕೆ ಈಡಾಗಲಿಲ್ಲ. ಸಂತಾಜಿಯ ಕೈ ಕತ್ತಿಯು ಅಳ್ಳು ಹುರಿದಂತೆ ಮುಸಲ್ಮಾನರ ರುಂಡ ಗಳನ್ನು ಹಾರಿಸುತ್ತಲಿತ್ತು. ಆತನ ಪರಾಕ್ರಮವನ್ನು ನೋಡಿ, ಖಾನನೂ ಆತನ ಸೈನಿಕರೂ ಒಟ್ಟಕಚ್ಚಿ , ಈತನು ಸೈತಾನನೇ ಸರಿಯೆಂದು ಅಂದುಕೊಂಡರು. ತನ್ನ ಸೈನಿಕರು ಹತವೀರ್ಯರಾಗಿ ಸುಮ್ಮನೆ ಪಟಪಟ ಸಾಯುವದನ್ನು ನೋಡಿ, ಹಾಗು ತನಗೆ ಬಲವಾದ ಗಾಯವಾದದ್ದನ್ನು ಮನಸ್ಸಿನಲ್ಲಿ ತಂದು, ಖಾನನು ಸಂತಾಜಿಗೆ ಶರಣು ಹೋದನು , ಕೂಡಲೆ ಸಂತಾಜಿಯು ತನ್ನ ಸೈನಿಕರು ಮಾಡುತ್ತಿ ದ್ದ ಸಂಹಾರದ ಕಾರ್ಯವನ್ನು ನಿಲ್ಲಿಸಿದನು. ನಿಷಾರಣ ರಕ್ತಪಾತವಾಗುವದು ಸಂತಾಜಿಯು ಮನ ಸ್ಸಿಗೆ ಎಷ್ಟು ಮಾತ್ರವೂ ಬರುತ್ತಿದ್ದಿಲ್ಲ. ಖಾನನು ಗಾಯಹೊಂದಿ ನೆಲಕ್ಕುರುಳಿದ್ದನು.