ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ್ಯ , ೧n, ಬಹುತರ ಖಾನನ ಸೈನಿಕರ ಗತಿಯೂ ಹೀಗೆಯೇ ಆಗಿತ್ತು. ಸಂತಾಜಿ ಯ ಜನರ ಸೈನಿಕರನ್ನು ಸುಲಿದು ರುಳರುಳಮಾಡಿದ್ದರು , ಸ೦ತಾಜಿಯು ಸಾಲಖನ ನನ್ನೂ, ಬೇರೆ ಮುಖ್ಯ ಮುಖ್ಯ ಜನರನ್ನೂ ಸೆರೆಹಿಡಿದು, ಅವರನ್ನು ಸಾಗಿಸಿಕೊ . ಡು ಅರಣ್ಯವನ್ನು ಹೊಕ್ಕನು. ಈ ಮೇರೆಗೆ ಸಂತಾಜಿಯು ಪರಾಕ್ರಮದಿಂದ ತನ್ನ ಸಂಕೇತವನ್ನು ಪೂ* ಮಾಡಿಕೊಂಡು ಅಶ್ವಾರೂಢನಾಗಿ ವೈಭವದೊಡನೆ ಎಲ್ಲರೂ ಮುಂದೆ ಸಾಗಿದ. ನೆ; ರಕದಿಂದ ಕೆಂಪಾದ ಆತನ ಖಡ್ಗವು ಟೊಂಕದಲ್ಲಿ ಹಾಗೇ ಅಲುಗಾಡುತ್ತ ಲಿದೆ; ಆತನ ಬಲಗೈಯಲ್ಲಿ ಭಯಂಕರವಾದದ್ದೆಂದು ಬರ್ಚಿಯು ಇರುತ್ತದೆ, ಆತನ ಎಡಗೈಯಲ್ಲಿ ಕುದುರೆಯ ಲಗಾಮವಿರುತ್ತದೆ; ಆತನ ಹಿಂದೆ ಯುದ್ದದಲ್ಲಿ ಪರಾಜಿತ ರಾಗಿ ತಲೆಕೆಳಗೆ ಮಾಡಿಕೊಂಡಿದ್ದ ಖಾನನೇ ಮೊದಲಾದ ಸೆರೆಯಾಳುಗಳು ಕುದುರೆ ಯನ್ನು ಹತ್ತಿ ಸಾಗಿಬರುತ್ತಲಿದ್ದಾರೆ; ಅವರ ಹಿಂದೆ ಸಂತಾಜಿಯ ಸೈನ್ಯವು ಸಾಗಿ. ಬರುತ್ತಲಿದೆ. ಈ ಚ೦ದದಿಂದ ಮಹರಾಷ್ಟ್ರ ವೀರನು ಸಾಗಿರುವಾಗ ಆತನ ಮನಸಿನಲ್ಲಿ ನಾನು ಈಗ ಪಲ್ಲಾಳಗಕ್ಕೆ ಮಹಾರಾಜರ ಬಳಿಗೆ ಹೋಗಬೇಕೆ. ಅಥವಾ ಶಂಭುಮಹಾದೇವನಗುಡ್ಡದಲ್ಲಿ ಸದ್ಯ ದವಗೆ ಸ್ಥಾಪಿಸಿರುವ ನಮ್ಮ ಆ. ಶ್ರಮಕ್ಕೆ ಹೋಗಬೇಕೇ?” ಎಂಬ ವಿಚಾರವ ಉತ್ಪನ್ನವಾಗಿ, ಆತನು ಸ್ವಲ್ಪ ಹೊ. ತ್ತು ಎತ್ತಕಡೆಯಿಂದ ಎತ್ತ ಕಡೆಗೋ ಅಲೆದಾಡುತ್ತಲಿದ್ದನು - ಇಷ್ಟರಲ್ಲಿ ಆತನ ಲಕ್ಷವು ತನ್ನ ಬೆನ್ನ ಹಿಂದಿನ ಸೆರೆಯಾಳುಗಳ ಕಡೆಗೆ ಹೋಯಿತು. ಹಸಿವೆಯಿ: ದಲೂ, ಆಯಾಸದಿಂದಲೂ ಖಾನನೇ ಮೊದಲಾದವರು ತೀರ ಹಣಾದದ್ದನ್ನು ನೋಡಿ, ಸಂತಾಜಿಯ ಮನಸ್ಸು ಕರಗಿತು . ಆತನು ತನ್ನ ಜನರಿಗೆ ಕಟ್ಟಡಮಿ ಯಲ್ಲಿ ನೀರಿನ ಆಸರ ನೋಡಿ ತಳವೂರಲು ಆಜ್ಞಾಪಿಸಿದನು. ಸಂತಾಜಿಯ ಈ ಅಪ್ಪಣೆಯನ್ನು ಕೇಳಿ ಖಾನನೇ ಮೊದಲಾದ ಸೆರೆಯಾಳು: ಗಳ ಎದೆಗಳು ದಸಕ್ಕಂದವು ! ಅವರು ಧರಥರ ನಡುಗಹತ್ತಿದರು . ಇನ್ನು ಈ ಕಾಫರನು ತಮ್ಮ ತಲೆಗಳನ್ನು ಹಾರಿಸುವನೆಂಬ ಅಂಜಿಕೆಯು ಅವರಲ್ಲಿ ಉತ್ಪನ್ನ ವಾಯಿತು. ಸಂತಾಜಿಯು ಅದನ್ನು ಗಾಂಭೀರ್ಯದಿಂದ ನೋಡುತ್ತಲಿದ್ದನು , ಆ ತನು ತನ್ನ ಜನರನ್ನು ಕುರಿತು-ಖಾನನ, ಹಾಗು ಆತನ ಸಂಗಡಿಗರ ಊಟ ಗೆಯ ವ್ಯವಸ್ಥೆಯು ಇದೇ ಮುಕ್ಕಾಮಿನಲ್ಲಿ ಆಗಬೇಕು, ಊಟವಾದ ಬಳಿಕ ಮಧ್ಯಾ ಹೃದಲ್ಲಿ ತಳಕಿತ್ತೋಣ;-ಎಂದು ಹೇಳಿದನು , ಅದನ್ನು ಕೇಳಿ ಸಂತಾಜಿಯ ಸೈನಿಕರು ಖಾನನ ಪರಿವಾರದ ಯೋಗಕ್ಷೇಮದಲ್ಲಿ ತೊಡಗಿದರು. ತಾವೂ ಸರ'