ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ಸುರಸ ಗ್ರಂಥಮಾಲಾ ಹೋಗಲಿಲ್ಲ. ದುರ್ಗಕ್ಕೆ ಮುತ್ತಿಗೆ ಬಿದ್ದಬಳಿಕ ಆಕೆಯು ಹೋಗುವ ಬಗೆಯೇನು? ಬಾಲಕನಾದ ಶಿವಾಜಿಯ ರಕ್ಷಣವು ಹಾಗಾಗುವದೋ? ಆಗಲಿ, ಪ್ರಸಂಗವೇ ಒದಗಿದಬಳಿಕ ಧೈರ್ಯಗೆಟ್ಟು ಮಾಡುವದೇನು? ರಾಯಗಡವನ್ನು ಹೆಂಗಸರು ರಕ್ಷಿಸುತ್ತಿರುವದರಿಂದ, ಅದನ್ನು ಸುಲಭವಾಗಿ ಕೈವಶಮಾಡಿಕೊಳ್ಳಬಹುದೆಂದು ಬಾದಶಹನು ತಿಳಕೊಂಡಿರಬಹುದು; ಆದರೆ ಅದನ್ನು ಶಿವಪ್ರಭುವಿನ ಸೊಸೆಯು ರಕ್ಷಿ ಸುವಳೆಂಬದರ ಗುರುತನ್ನು ಆತನಿಗೆ ತೋರಿಸಲೇ ಬೇಕು . ಆಬಾಸಾಹೇಬರು ದೇಹವಿಟ್ಟು, ಇನ್ನೂ ಒಂದು ಪಟ್ಟವಾಗಿಲ್ಲ . ಸಮರ್ಥರು ದೇಹವಿಟ್ಟು ಇನ್ನೂ ಮೂರು ವರ್ಷವಾಗಿಲ್ಲ , ಇಷ್ಟರಲ್ಲಿ ಆ ಮಹಾತ್ಮರ ಪುಣವು ಕ್ಷೀಣವಾಗಿರುವ ವದೇನು? ಅಂಬಾಬಾಯಿಯ ಕೃಪೆ ಇರುವ ತನಕ ನಮಗೇನುಬಂದದೆ ? ಆಬಾ ಸಾಹೇಬರು ಎಂಥ ಎಂಥ ಗಂಡಾಂತರಗಳಿಂದ ಪಾರಾದನಲ್ಲ ! ಅದಕ್ಕೆ ಅಂಬಾ ಬಾಯಿಯ ಕೃಪೆಯೇ ಕಾರಣವಲ್ಲವೆ ? ಅಂಥ ಕೃಪೆಯು ನಮ್ಮ ಮೇಲೆ ಇರಲಿ ಕಿಲ್ಲವೇನು ? ” ಎಂದು ಆ ಲೋ ಚಿ ಸು ತ್ತಿ ರ ಲು , ರಾಜಕುವರಳು ಅಲ್ಲಿಗೆ ಬಂದ ಭು, ಆಕೆಯನ್ನು ನೋಡಿ ಏಸೂಬಾಯಿಯ ವಾತ್ಸಲ್ಯದಿಂದ - ಸಿಸಬಾಯಿ-ಅನಾ, ರಾಜಕುವರ , ಪ್ರಸಂಗವಂತೂ ಬಹು ಕಠಿಣವು ಒದಗಿತ, ನಿನಗೆ ಅಗ ಅಣನಸಂಗಡ ಪಾಳಗಡಕ್ಕೆ ಹೋಗೆಂದು ನಾನು ಹೇಳಲಿಲ್ಲವೆ ? ಇಂದು ನಾಳೆ ಇಷ್ಟರಲ್ಲಿ ದುರ್ಗಕ್ಕೆ ಮುತ್ತಿಗೆಯು ಬೀಳುವದು - ಈಗ ನೀನು ಸುಮ ನೆ ಸಂಕಟಕ್ಕೆ ಯಾಕೆ ಗುರಿಯಾಗುತ್ತಿ ? ಹೋಗು, ಶತ್ರುಗಳು ಮುತ್ತುವದರೊಳಗೆ ಸಲ್ಲಾಳಗಡಕ್ಕೆ ಹೋಗಿಬಿಡು. ರಾಜಕುವರ-ಸಾಕು, ಅತ್ತಿಗೆಯೇ ನೀನು ಹೆಳವವನ್ನು ಹೇಳಿದೆಯಲ್ಲ; ಇನ್ನು ಇಷ್ಟಕ್ಕೆ ನಿಲ್ಲಿಸು ! ನಾನು ನಿನ್ನ ಆಜ್ಞೆಯಂತೆ ಇಲ್ಲಿಂದ ಹೋಗುವೆನು; ಆದರೆ ಪಲ್ಲಾಳಗಡಕ್ಕೆ ಮೂತ್ರ ಅಲ್ಲ. ರಾಯಗಡವನ್ನು ಏರಿಬರುವ ಮಾಗಲ ಸೈನ್ಯವನ್ನು ತಿಂದ ಆಟ್ಟ ವದಕ್ಕಾಗಿ , ಅದೋ ಆ "ಗುರ್ಹ ಊಾ” ಶಿಖರದ ಮೇಲೆ ಹೋಗುವೆನು. ನಾನು ಅಲ್ಲಿಗೆ ಹೋಗಿ ಗಟ್ಟಿಮುಟ್ಟಿಯಾಗಿ ಕುಳಿತುಕೊಂಡೆನೆಂದರೆ ರಾಯಗಡವನ್ನು ಕಾಲ ಶ್ರಯದಲ್ಲಿಯ ಅಲಮುಗೀರನ ಕೈವಶವಾಗಗೊಡಲಿಕ್ಕಿಲ್ಲ! ನಾನು ಈ ಪ್ರಸಂಗ ದಲ್ಲಿ ನಮ್ಮ ಬಾಲಶಿವರಾಯನಿಗೆ ಯುದ್ದದ ಪಾಠಗಳನ್ನು ಕಲಿಸುವೆನು. ಅತ್ತಿಗೆಯ ನೀನು ಹೀಗೆ ಉದಾಸೀನಳಾಗಬಾರದು. ದುರ್ಗದ ಯಾವತ್ತು ಜನರಿಗೆ ನೀನು ಧೈರ್ಯವನ್ನು ಹೇಳಬೇಕು. ದುರ್ಗದಲ್ಲಿ ಯಾರೂ ಫಿತಾರ ಆಗದಂತೆ ಎಚ್ಚರ ಪಡಬೇಕು. ಫಿತೂರಿಯಾಗದಪಕ್ಷದಲ್ಲಿ ರಾಯಗಡವನ್ನು ಸ್ವಾಧೀನಪಡಿಸಿಕೊಳ್ಳವನು