ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉ ಸುರಸ ಗ್ರಂಥಮಾಲಾ . www ರಾಜಕುವರಳು ಆತನ ಕಣ್ಣು ಮರೆಯಾಗಿ ಹೋಗಬೇಕೆಂದು ಯತ್ನಿಸಿದಳು; ಆದ ಆ ಆ ರಾವುತನೂ ರಾಜಕುವರಳನ್ನು ಕಾಣುವದಕ್ಕಾಗಿ ಭರದಿಂದ ಸಾಗಿಬರಹ ದನು. ಅವರಿಬ್ಬರು ಎದುರುಬದುರಾಗಿ ನಿಂತುಕೊಳ್ಳಲು, ಇಬ್ಬರು ಸುಮ್ಮನೆ ಒ ಬ್ಬರನ್ನೊಬ್ಬರು ನೋಡುತ್ತ ನಿಂತುಕೊಂಡರು, ಆಗ ಆ ತರುಣ ರಾವುತನು ಮ ಮತೆಯಿಂದ ರಾಜಕುವರಳನ್ನು ಕುರಿತು ರಾಜಕುವರ, ಎಂಥ ನಿನ್ನ ಸಾಹಸ - ವಿದು? ಅಗೋ, ಹಿಂದ ಏಳುವ ಆ ಪ್ರಚಂಡವಾದ ದೂಳಿಯನ್ನು ನೋಡಿದೆಯಾ? ಯಾತರದು ಅದು? ನೀಗದ ಕೆಲಸಕ್ಕೆ ಕೈಹಾಕಿ ಹೆಣಗುವದು ಮೂರ್ಖತನವಲ್ಲ ವೆ? ದುರ್ಗವನ್ನು ರಕ್ಷಿಸುವ ಸಾಹಸವು ಇನ್ನು ನಿಮಗೆ ಯಾತಕ್ಕೆ? ಬಾ ನನ್ನನ್ನು ಹಿಂಬಾಲಿಸಿನಡೆ; ಅನ್ನಲು, ರಾಜಕುವರಳು ಸಂತಾಪದಿಂದ-. * ಪ್ರಾಣಪ್ರಿಯಾ, ಮಹಾರಾಷ್ಟ್ರ ಭೂಮಿಯಲ್ಲಿ ಹುಟ್ಟಿ, ರಾಷ್ಟ್ರ ವಿಘಾತಕ' ವಾದ ಇಂಥಮಾತುಗಳನ್ನು ತಾವು ಆಡಬಹುದೇ? ನೀವು ಶಿರ್ಕೆಯ : ಕುಲಭಾಷಣ ರಾದ ಗಣೋಜಿರಾಯರೆಂಬದನ್ನೂ , ಭೋಸಲೆಮನೆತನದ ಮೇಲಿನ ಸಿಟ್ಟಿನಿಂದ ದೇಶದ್ರೋಹಿಗಳಾಗಿ ಬಾದಶಹನನ್ನು ಕೂಡಿ ಸದ್ಯಕ್ಕೆ ಕಾಳಪುರುಷರಂತೆ ನನ್ನ ಮುಂದೆ ನಿಂತಿರುವಿರೆಂಬದನ್ನೂ, ನಿಮ್ಮ ಹಿಂದೆ ಕಾಣುವ ಪ್ರಚಂಡ ಧೂಳಿಯುವ ನಿಮ್ಮ ಮೊಗಲ ಸೈನ್ಯದ ತುಳತದಿಂದ ಎದ್ದಿರುವದೆಂಬದನ್ನೂ ನಾನು ಬಲ್ಲೆನು... ಪ್ರಾಣೇಶಾ, ನಿಮ್ಮ ಅಪ್ಪಣೆಯಂತೆ ನಿಮ್ಮ ಬಳಿಗೆ ನಾನು ಬರತಕ್ಕದ್ದೇ ಸರಿ. ಆದರೆ ಸ್ನಾಭ ಮಾನದ ಮೂಲಕ ಬರಲಿಕ್ಕೆ ಮನಸ್ಸಾಗಲೊಲ್ಲದು, ಎಂದು ಉತ್ತರಕೊಟ್ಟಳು. ಇದನ್ನು ಕೇಳಿ ಗಣೋಜಿರಾಯನು ಸಿಟ್ಟಾದನು. ತನ್ನ ಪ್ರತ್ಯಕ್ಷ ಆರ್ಧಾ೦ ಗಿಯು ತನ್ನ ವಿರುದ್ಧ ನಡೆಯುವದನ್ನು ನೋಡಿ ಆತನು ಸಂತಾಪಗೊಂಡನು. ಸಂತಾಪದ ಭರದಲ್ಲಿ ವಿವೇಕ ಹೀನನಾದ ಆತನು ತನ್ನ ಹೆಂಡತಿಯನ್ನು ಕುರಿತು ಗಣೋಜಿರಾವ-ರಾಜಕುವರ, ಪ ತಿ ಗೆ ವಿರುದ್ಧವಾಗಿ ನಡೆಯುವದು ಆರ್ಯ ಸ್ತ್ರೀಯು ಶೀಲವಲ್ಲ. ಪಾಂಡವಪತ್ನಿಯಾದ ದೌಪತಿಯು ತನ್ನ ಪತಿಗಳನ್ನು ಆಶ್ರಯಿಸಿ, ಅವರನ್ನು ಉತ್ತೇಜನಗೊಳಿಸಿ ಅವರಿಂದ ಕೌರವರ ವಂಶಕಯ ಮಾಡಿ ಸಲಿಲ್ಲವೆ? ಆ ಪತಿವ್ರತೆಯ ಧರ್ಮವನ್ನು ನೀನು ಈಗ ಸ್ಮರಿಸಿ, ಆಕೆಯಂತೆ ನಿನು ನನಗೆ ಸಹಾಯ ಮಾಡಿ ಭೋಸಲೆ ಕುಲದ ನಾಶವನ್ನು ನನ್ನಿಂದ ಮಾಡಿಸು ವದು ನಿನ್ನ ಪಾತಿವ್ರತ್ಯದ ದ್ಯೋತತವಾಗಿದೆ. ರಾಜಕುವರ-ಪ್ರಾಣಪ್ರಿಯಾ, ನಿಮ್ಮ ವಿಚಾರವು ದೋಷಯುಕ್ತವಾಗಿ ರುತ್ತದೆ. ಪಾಂಡವರು ತಮ್ಮ ಹೆಂಡತಿಯ ಪಾತಿವ್ರತ್ಯದ ಗೌರವವನ್ನರಿತು ದುಷ್ಯ