ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ ಸುರಸ ಗ್ರಂಥಮಾಲಾ .

ಶಿವಪ್ರಭುವಿನ ಮಗಳಾದ ನನಗೆಶ್ರೇಯಸ್ಕರವಾಗಿ ತೋರುತ್ತದೆ ; ಇದರಿಂದ ರಾಷ್ಟ್ರದ ಕಾರ್ಯದಲ್ಲಿ ನನ್ನ ದೇಹಸಾತವಾದಂತಾಗುವದಲ್ಲದೆ, ಸ್ತ್ರೀ ಹ ತ್ಯೆ ಯ ದೋಷಕ್ಕೆ ನಿಮ್ಮನ್ನು ಗುರಿಮಾಡದೆ, ನಿಮ್ಮ ಕೋರಿಕೆಯನ್ನು ಪೂರ್ಣಮಾಡಿಸಿ ದಂತಾಗುತ್ತದೆ. ಪತಿದೇವಾ, ಇದೇ ನನ್ನ ನಿಶ್ಚಯವು; ನೋಡಿರಿ, ಗಣೋಜಿರಾ ವ್, ವೀರಪುತ್ರಿಯ, ವೀರಪತ್ನಿಯ ಆದ ಈ ರಾಜಕುವರಳು ನಿಮ್ಮನ್ನು ಲೆಕ್ಕಿ ಸದೆ ಇಲ್ಲಿಂದ ಉಡಾಣಮಾಡಿ ಹೋಗುತ್ತಾಳೆ, ಸಾಧಿಸಿದರೆ ಅಡ್ಡಗಟ್ಟಿರಿ, ” ಎಂದು ನುಡಿದು, ರಾಜಕುವರಳು ಕಣದಲ್ಲಿ ಅ ದ ಶ್ಯ ೪ಾ ದ ಳು ! ಇದನ್ನು ನೋಡಿ.. ರಾಷ್ಟ್ರವಿಘಾತ ವಿಚಾರದಿಂದ ತೇಜೋಹೀನನಾದ ಗಣೋಜಿರಾಯನು ದಂಗು ಬಡಿದು ನಿಂತುಕೊಂಡನು ! ಇದರ ತರುವಾಯ ಎಂಟುದಿನಗಳಾದವು . ಒಂದು ದಿನ ಏಸಬಾಯಿಯ ಸುದರ್ಶನಚಕ್ರದಂತೆ ಕೋಟೆಯ ಸುತ್ತ ಮುತ್ತ ತಿರುಗಿ ಎಲ್ಲವನ್ನು ಕಣ್ಣ ಮುಟ್ಟ ನೋಡುತ್ತಿದ್ದಳು . ತನ್ನ ಮನಸ್ಸಿನಂತೆ ಎಲ್ಲವನಸ್ಪಿಯಾದಬಳಿಕ, ಆಕೆಯು ಸಂಜೆ ಯ ಮುಂದೆ ತನ್ನ ಮಗನಾದ ಬಾಲಶಿವರಾಯನನ್ನು ಕರಕೊಂಡು ಶಿವಪ್ರಭುವಿನ ಸಮಾಧಿಯ ಬಳಿಗೆ ಬಂದಳು , ಆ ಅಭಿಮಾನದ ಶೂರ ಸ್ತ್ರೀಯು ಮೂಕವೃತ್ತಿಯಿಂದ ಮಾವನಸಮಾಧಿಗೆ ನಮಸ್ಕಾರಮಾಡಿ, ತನ್ನ ಮಗನಕೈಯಿಂದ ನಮಸ್ಕಾರಮಾಡಿಸಿ ದಳು. ಆ ಕೂಸು ನಮಸ್ಕರಿಸುವಾಗ ಅದಕ್ಕೆ ಮುಂದೆ ಒದಗಬಹುದಾದ ಹಲವು ಸಂಕಟಗಳ ಸ್ಮರಣವಾಗಿ ಆ ವೀರಪತ್ರಿಯ ಕುತ್ತಿಗೆಯಶಿರಗಳು ಬಿಗಿದವು . ' ಆಕೆ ಯು ಪ್ರೇಮಭರದಿಂದ ಬಾಲಶಿವರಾಯನನ್ನು ಎತ್ತಿಕೊಂಡು ಬಿಗಿಯಾಗಿ ಅಪ್ಪಿಕೊಂಡು ವಾತ್ಸಲ್ಯದಿಂದ ಹಲವುಸಾರೆ ಚುಂಬಿಸಿದಳು , ಅಷ್ಟರಲ್ಲಿ ದುರ್ಗದಕೆಳಗಿನಿಂದ ಒಂದು ಸಾಂಕೇತಿಕಬಾಣವು ಸರೂನೇ ಮೇಲಕ್ಕೆ ಬಂದು ಬಡೆದು, ಅದರೊಳಗಿಂದ ಹಲವು ಚಿತ್ರವಿಚಿತ್ರವಾದ ಬಣ್ಣದ ಗುಂಡುಗಳು ಆಕಾಶದಲ್ಲಿ ಹರಡಿದವು. ಇದನ್ನು ನೋಡಿ ಶಿವರಾಯನು ಅವಾ, ಅತ್ತನೋಡು ಬಾಣವನ್ನು! ನಾನೂ ಹಾರಿಸುತ್ತೇನೆ, ನನ ಗೊಂದು ಬಾಣವನ್ನು ಕೊಡಬಾರದೆ? ಅವ್ಯಾ ಮೊಗಲರು ನಮ್ಮ ಈ ದುರ್ಗವನ್ನು ಮುತ್ತಿರುವರಲ್ಲ, ಅವರಮೇಲೆ ಅದನ್ನು ಬಿಟ್ಟು ಅವರನ್ನು ಓಡಿಸಿಬಿಡುವೆನು! ಕೂಸಿನ ಈ ಮಾತುಗಳನ್ನು ಕೇಳಿ ಏಸೂಬಾಯಿಗೆ ತಟ್ಟನೆ ನಗೆಬಂದಿತು ಎಂಥ ದುಃಖಸಂತಾಪಗಳಲ್ಲಿಯೇ ಇರಲಿ, ಕೂಸಿನ ತಾಯಂದಿರು ತಮ್ಮ ಕೂಸಿನ ಬಾಲಲೀಲೆಯಿಂದ ಕಣದಲ್ಲಿ ಅವನ್ನು ಮರೆತು ನಗುವರೆಂಬುದು ಸುಳ್ಳಲ್ಲ! ಅಪ ತ ವಾತ್ಸಲ್ಯವೇ ಅತಹದು! ಇರಲಿ , ಕೂಸಿನ ಮಾತಿನಿಂದ ಏಸಬಾಯಿಯು.