ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುಸಿನ ಪುಣ್ಯ. ಗಳಗೆ vvvvvvvv ರದಾರರೂ ಮನಮುಟ್ಟಿ ಯತ್ನಿಸುತ್ತಲಿದ್ದರು. ಒಬ್ಬರಿಗಾದರೂ ಒಂದು ಕ್ಷಣ ಸಹ ವಿಶ್ರಾಂತಿ ಇದ್ದಿಲ್ಲ. ರಾಜಾರಾಮ ಮಹಾರಾಜರು ತಮ್ಮ ಸಂರಕ್ಷಣಕ್ಕಿಂತ ರಾಯ ಗಡದಲ್ಲಿದ್ದ ತಮ್ಮ ಅತ್ತಿಗೆಯವರಾದ ಏಸೂಬಾಯಿಯವರ, ಹಾಗು ಮಹಾರಾಷ್ಟ್ರ ಪ್ರಭುವಾದ ಬಾಲ ಶಿವರಾಯನ ಸಂರಕ್ಷಣದ ಚಿಂತೆಯನ್ನು ವಿಶೇಷವಾಗಿ ವಹಿಸಿದ್ದ ರು ; ಆದರೆ ಅವರ ಹಿರಿಯ ಹೆಂಡತಿಯದ ತಾರಾಬಾಯಿಗೆ, ತನ್ನ ಗಂಡನ ಈ ರೀತಿ ಯು ಸೇರುತ್ತಿದ್ದಿಲ್ಲ. ತನ್ನ ಗಂಡನು ಸಂಭಾಟಿಯ ಮಗನಾದ ಬಾಲಶಿವಾಜಿಯ ನ್ನು ದೂಡಿ ತಾನೇ ಸಿಂಹಾಸನವೇರಬೇಕೆಂತಲೂ, ತಾನು ತನ್ನ ಪತಿಯ ಬದಿಯಲ್ಲಿ ಕುಳಿತು ರಾಜವೈಭವವನ್ನು ಅನುಭೋಗಿಸಬೇಕೆಂತಲೂ ಆ ಮಹತ್ವಾಕಾಂಕ್ಷಿಯದ ಸ್ತ್ರೀಯು ಆಸೆಪಡುತ್ತಿದ್ದಳು; ಆದರೆ ಸದ್ಯುಣ ಸಂಪನ್ನರಾದ ರಾಜಾರಾಮ ಮಹಾ ರಾಜರಿಂದ ಈ ಭ್ರಾತೃದ್ರೋಹ ಕಾರ್ಯವು ಆಗುವಹಾಗಿದ್ದಿಲ್ಲ. ಪತಿಯಿಂದ ಈ ಕಾ ರ್ಯವಾಗದ ಪಕ್ಷದಲ್ಲಿ ತಾನು ಪ್ರಯತ್ನ ಪಟ್ಟು ಏಸಬಾಯಿಯನ್ನೂ, ಬಾಲಶಿವಾಜಿ ಯನೂ ಗೊತ್ತಿಗೆಹಚ್ಚಿ, ಪತಿಗೆ ಸಿಂಹಾಸನವು ಪ್ರಾಪ್ತವಾಗುವಂತೆ ಮಡಬೇಕೆಂದು ಆ ನಾಹಸಿಯದ ತಾರಾಬಾಯಿಯು ಆತುರಪಡುತ್ತಿದ್ದಳು. ಆಕೆಯ ಈ ದುಷ್ಟ ಯತ್ಯಕ್ಕೆ ದೇಶದ್ರೋಹಿಗಳಾದ ಸೂರ್ಯೋಜಿಯೇ ಮೊದಲಾದವರು ಅಂತರಂಗದಿಂ ದ ಸಹಾಯಕರಾಗಿದ್ದರು. ಮರಾಟರ ಈ ಗೃಹಕಲಹದ ಕಿಚ್ಚು, ನಿಜವಾದ ಸ್ವಾ ಮಿಭಕ್ತರ'ದೇಶಕಾರ್ಯ ಸಾಧನದಲ್ಲಿ ಬಹಳತಾಪವನ್ನುಂಟುಮೂಡುತ್ತಿತ್ತು. ಈ fಸ ಕಠಿಣ ಕಾಲದಲ್ಲಿ ಕೂಡ ಮರಾಟರಲ್ಲಿ ತಾರಾಬಾಯಿಯ ಪಕ್ಷವೆಂತಲೂ, ಏನೂ ಬಾಯಿಯ ನಕ್ಷವೆಂತಲೂ ಎರಡು ಪಕ್ಷಗಳಿದ್ದವು. ಏಸೂಬಾಯಿಯ ಘನವಾದ ಯೋಗ್ಯತೆಯನ್ನು ವಾಚಕರುಬಲ್ಲರು. ಆಕೆಯು ಕೇವಲ ಮರಾಟರ ಸ್ವಾತಂತ್ರ ವನ್ನು ಕಾಯ್ದುಕೊಳ್ಳುವದೊಂದೇ ವ್ರತವನ್ನು ಕೈಕೊಂಡು, ಕೇವಲ ನಿಸ್ವಾರ್ಥ ಬು ದ್ವಿಯಿಂದ ಅದನ್ನು ಆಚರಿಸುತ್ತಿದ್ದಳು. ಹೀಗಿರುವಾಗ ಸೂರ್ಯಾಜೀಪಿಸಾಳನು ತಾರಾಬಾಯಿಯೊಡನೆ ಗುನ್ಯರೀತಿಯಿಂದ ಆಲೋಚಿಸುವದಕ್ಕಾಗಿ ಪಲಾಳಗಡಕ್ಕೆ ಬಂದಿದ್ದನು. ತಾರಾಬಾಯಿಯ ಮನಸ್ಸನ್ನು ಕೆಡಸಿ ಏಸೂಬಾಯಿಯ ಮೇಲಿನ ಆ ಕೆಯದ್ವೇಷವನ್ನು ಹೆಚ್ಚಿಸುವದು ಸೂರ್ಯೋಜಿಯ ಮುಖ್ಯ ಕೆಲಸವಾಗಿತ್ತು. ಆತನು ತಾರಾಬಾಯಿಯನ್ನು ನಮಸ್ಕರಿಸಿ ಕುಳಿತು ಕೊಳ್ಳಲು, ಆಕೆಯು ಸೂರ್ಯಾಜಿ ಯನ್ನು ಕುರಿತು ತಾರಾಬಾಯಿ-ಸೂರ್ಯಾಜೀ, ಬಿ, ಕುಳಿತುಕೊಳ್ಳಿರಿ, ನಿಮ್ಮ ಹಾದಿಯನ್ನೇ ನೋಡುತ್ತಿದ್ದನು. ರಾಯಗಡದಕಡೆಯ ಸುದ್ದಿಯೇನು?