ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ. ೪೩ ಚು ಕಡಿಮೆ ! ತಾರಾಬಾಯಿ - ನಿಜವು ; ಸೂರ್ಯಾಜಿ, ನೀವಾಡುವ ಮಾತು ನಿಜವು . ನಮ್ಮ ದೈವವೇ ಕೆಟ್ಟದು , ನನ್ನವರು ತುಕಾರಾಮನಂತೆ ಸಂಸಾರದ ಮೇಲೆ ತು ಲಸೀ ಪತ್ರವಿಟ್ಟ ಬಳಿಕ ನನ್ನ ಮಕ್ಕಳು ಮರಿಗಳು ಬಿಕ್ಕೆ ಬೇಡುವದೇ ಸರಿ . ದೇ ವರು ಈ ಗರ್ಭ ಭಾರದ ಆಯಾಸವನ್ನು ನನಗೆ ಯಾಕೆ ಉಂಟು ಮಾಡಿದನೋ ತಿಳಿಯದು ! ಸೂರ್ಯಾಜಿ --- ಸರಕಾರ, ಹೀಗೆ ಉದಾಸೀನರಾಗಬಾರದು , ಎಲ್ಲ ರಾಜ ಪುರುಷರ ಒಲವು ರಾಯಗಡದ ಕಡೆಗೆ ಇದ್ದರೂ , ಅದನ್ನು ಯುಕ್ತಿಪ್ರಯುಕ್ತಿಯಿಂ ದ ನಿಮ್ಮ ಕಡೆಗೆ ಕೂಡಿಕೊಳ್ಳುವದು ನಿಮ್ಮ ಕೈಯೊಳಗಿರುತ್ತದೆ , ಆಬಾಸಾಹೇಬ ರಂತು ರಾಜಾರಾಮ ಮಹಾರಾಜರನ್ನೇ ರಾಜ್ಯವಾಳಲಿಕ್ಕೆ ತಕ್ಕವರೆಂದು ಮುಂದೆ ಮಾಡಿದರು . ಇದು ದೆ, ಬಾಯಿ ಮಹೇಬರ ಹೊಟ್ಟೆಯಲ್ಲಿ ಸ್ವತಃ ಆಬಾನಾ ಹೇಬರೇ ಹುಟ್ಟಿ ಬರತಕ್ಕವರಿದ್ದಾರೆ. ಇಂಗ್ಲ ಭಾಗ್ಯ ಸಿಲಿಗಳು ನೀವಿರುತ್ತಿರಲು , ನಿಮ್ಮ ಮಕ್ಕಳು ಮರಿಗಳು ಬಿಕ್ಕೆ ಬೇಡುವು ? ಈ ದಾಸನು ಹೇಳುವ ಹಂಚಿಕೆಗೆ ಕಿವಿಗೊಡಬೇಕು. ಸದ್ಯಕ್ಕೆ ಮರಾಟರಲ್ಲಿ ಧನಾಜಿ ಜಾಧವ , ಸಂತಾಜಿ ಘೋರ ಪದೆ ಇವರು ಮುಖ್ಯ ವೀರರಾಗಿರುವರು . ಅವರ ಅಂತರಂಗವು ಶುದ್ಧವಿಲ್ಲೆಂಬದು ಬಾ ಸಾಹೇಬರಿಗೆ ಗೊತ್ತಿದ್ದ ಮಾತಾಗಿರುವದು , ಅವರಿಬ್ಬರ ಒಲವೂ ಏನೂ ಬಾಯಿಯವರ ಕಡೆಗೇ ಇರುತ್ತದೆ. ಆದರೆ ತಾವು ಯುಕ್ತಿಯಿಂದ ಒಬ್ಬರ ಮನಸ್ಸ ನ್ನು ತಮ್ಮ ಕಡೆಗೆ ಎಳಕೊಂಡು , ಏಸೂಬಾಯಿಯವರ ನಕ್ಷದ ಕಸುವನ್ನು ಕಡಿಮೆ ಮಾಡಬೇಕು. ನನ್ನ ಈ ಮಾತಿನಲ್ಲಿ ಬಾಯಿ ಸಾಹೇಬರವರ ವಿಶ್ವಾಸವು ಕೂಡ್ರ ಬಹುದೇನು ? ತಾರಾಬಾಯಿ - ಸೂರ್ಯಾಜೀ, ನಿನಗೆ ಸಂಶಯವೇಕೆ ? ನಮ್ಮ ಹಿತಕ್ಕಾಗಿ ದೇಹವನ್ನರ್ಪಿಸಲು ಸಿದ್ಧವಾಗಿರುವ ನಿಮ್ಮಂಥವರ ಮಾತನ್ನಲ್ಲದೆ ಇನ್ನು ಬೇರೆಯಾ ರ ಮಾತನ್ನು ನಾನು ಕೆಳಲ ? ಹೇಳು , ನಾನು ಏನು ಮಾಡಲಿ ಬೇಗನೆ ಹೇಳು . ಸೂರ್ಯೋಜಿ-ಭಾಯಿಸಾಹೇಬ, ಪರಾಕ್ರಮದಲ್ಲಿ ಸಂತಾಜಿಯು ಧನಾಜಿ ಗಿಂತ ಗುಂಜಿತೂಕ ಹೆ ಂದು ಹೇಳಬಹುದು; ಇದಕ್ಕಾಗಿ ಧನಾಜೆಯು ಅಂತರಂಗ ದಲ್ಲಿ ಹೊಟ್ಟೆಕಿಚ್ಚು ಪಡುತ್ತಿರುವನು.ಜಗದಳೆ ಮನೆತನದ ವತನವು ಮೂಲತಃ ನಮ್ಮ ಮನೆತನದ, ಅಂದರೆ ಯಾದವ ಮನೆತನದ ವತನವಾದ್ದರಿಂದ, ಅದು ತನ್ನ ಕಡೆಗೆ ಬರಬೇಕೆಂದು ಧನಾಜಿಯು ಯತ್ನಿಸುತ್ತಿರುವನು; ಆದರೆ ಅಭಾಸಾಹೇಬರ ಕಾಲದಿಂದ