ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ್ಯ ៧១ ನ ಅಪ್ಪಣೆಯಂತೆ ಚಿತ್ರಗಳನ್ನು ತೆಗೆಯುವದಕ್ಕೆ ಅವರು ಆತುರಪಡುತ್ತಲಿದ್ದರು. ಅವರು ಹೋಗಹೊಗುತ್ತ ಒಬ್ಬನು ಸಾಂಕೇತಿಕವಾದ ತಮ್ಮ ರಾಮೋಶಿಯ ಗುಭಾಷೆಯಲ್ಲಿ-ದೇವರಾವ ಖತಿಗdಿ, (ಸೂರ್ಯನು ಮುಳುಗಿದನು) ಎಂ ದು ಸೂಚಿಸಿದನು, ಇತ್ತ ದರೆಗಿಣಿಯು ಆ ಚಿರ್ತಗಾರರನ್ನು ಬಕ್ಷಿಗೆ ಒಪ್ಪಿಸಿ ದಳು, ಹಾದಿಯಹಿಡಿದು ಹೋಗುವಾಗ ಆ ಚಿತ್ರಗಾರರು ಸುತ್ತುಮುತ್ತು ಬ ಹು ಸೂಕ್ಷ್ಮ ರೀತಿಯಿಂದ ಅವಲೋಕಿಸುವದರ ಕಾರಣವು ದರೋಗಿಣಿಗೆ ತಿಳಿಯಲಿ ೪. ಈ ತಿರುಳರು ಹುಟ್ಟಿದಾಗಿನಿಂದ ಇ೦ಧ ವೈಭವವನ್ನು ನೋಡದಿರುವದ ರಿಂದ, ಹೀಗೆ ಕಕ್ಕ ಬಿಕ್ಕಿಯಾಗಿ ನೋಡುವರೆದು ಆಕೆಯು ತರ್ಕಿಸಿದಳು, ಬ& ಯ ಬಳಿಗೆ ಹೋದಮೇಲೆ ಚಿತ್ರಗಾರರು ಚಿತ್ರಗಳನ್ನು ಬರೆದರು. ಬಕ್ಷಿಯು ಆ ವನ್ನು ಬಾದಶಹನಿಗೆ ತೋರಿಸಿದನು. ಆ ಚಿತ್ರಗಳಲ್ಲಿ ಭಾಗಶ ಕಸ ಸ್ವತಃ ಒಂದೆ ರಡು ಚಿತ್ರಗಳನ್ನು ಬರೆದು ಪೂರ್ಣಮಾಡಿದನು. ಎಷ್ಟೋ 3 ಗಳ ಮೇಲೆ ಕೈ ತಃ ಬಾದಶಹನು ಕುರಾಣದ ವಾಕ್ಯಗಳನ್ನು ಬರೆದನು ಈ ೬ ಬರೆಯುವ ಕಲೆ ಸಕ್ಕೆ ಅಂದಿನರಾತ್ರಿಯು ಸಾಲದಾಯಿತು. ಈ ಪ್ರಸಂಗದಲ್ಲಿ ಬಾದಶಹನು ಚಿತ, ಗಾರರನ್ನು ಒಂದೆರಡುಸಾರೆ ತನ್ನ ಬಳಿಗೆ ಕರೆಸಿಕೊಂಡಿದ್ದನು. ಪ್ರತಿ ಒಂದು ಸಾರೆ ಬಾದಶಹನ ಬಳಿಗೆ ಹೋಗಿ ಬರುವಾಗ ಚಿತ್ರಗಾರರಿಗೆ ಹೊಸಹೊಸ ಆನಂದದ ತರೆ ಗಳು ಹುಟ್ಟುತ್ತಿದ್ದವು. ಬಾದಶಹನಿಗಂತು ಚಿತ,ದ ಹುಚ್ಚು ಹಿಡಿದಂತಾಗಿತ್ತು. ಚಿತ್ರದ ಕಲಸವು ಮುಗಿಯುವದರೊಳಗೆ ಬೆಳ್ಳಗೆ ಬೆಳಗಾಯಿತು. ಮರುದಿನ ಈ ಚಿತ್ರದ ಸುದ್ದಿಯು ಛಾವಣಿಯು ತು೦ಬಹದ್ದಿತು, ಬಾದಶಹನು ಚಿತ್ರಗಾರರಿಂದ ತೆಗೆಸಿದ ಹಾಗೂ ಗೈತ: ಕೈಮುಟ್ಟಿತೆಗೆದ ಈ ಚಿತ್ರಗಳನ್ನು ನೋಡಲಿಕ್ಕೆ ದರ್ಬಾರ ದ ಜನರು ಆತುರಪಡಹತ್ತಿದರು, ಬಾದಶಹನ ಅಪ್ಪಣೆಯಿಂದ ಬಕ್ತಿಯು ಚಿತ್ರಗೀತೆ ರರೊಡನೆ ಛಾವಣಿಯತುಂಬ ಚಿತ್ರಗಳನ್ನು ತೋರಿಸುತ್ತ ತಿರುಗಾಡುತ್ತಿದ್ದನ್ನು ಬಾದಶಹನ ಚಿತ್ರದ ಸಂಗಡ ತಮ್ಮ ಚಿತ್ರಗಳೂ ಇರಬೇಕೆಂಬ ಉಬ್ಬಿನಿಂದ ದೊಡ್ಡ ದೊಡ್ಡ ಜನರು ತಮ್ಮ ಚಿತ್ರಗಳನ್ನು ಪಟದಲ್ಲಿ ತಗಿಸಹತ್ತಿದರು. ಸಂಜೆಯವರೆಗೆ ಚಿತ್ರಗಾರರು ಚಿತ್ರತಗೆಯುವ ಕೆಲಸದಲ್ಲಿ ಮುಣುಗಿಹೋಗಿದ್ದರು. ಬೇಸರವಿಲ್ಲ ದೆ ಚಿತ್ರಗಳನ್ನು ತೆಗೆಯುವ ಇಷ್ಟು ಉತ್ಸಾಹವು ಅವರಿಗೆ ಎಲ್ಲಿಂದ ಬಂದಿರಬಹದೋ ದೇವರಿಗೆ ಗೊತ್ತು! ಸಂಜೆಯವರೆಗೆ ಅವರು ಚಿರ್ತಗಳನ್ನು ತೋರಿಸಿ, ತಮ್ಮ ಸ್ಥಳ ದಲ್ಲಿ ತಮ್ಮವರಿಬ್ಬರನ್ನು ಇಟ್ಟು, ಈಗ ಬರುತ್ತೇವೆಂದು ಹೇಳಿ ಅದನು ಎತ್ತಿ , ಹೊರಟು ಹೋದರು.