ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬ ಶಿವಪ್ರಭುವಿನಪುಣ್ಯ ಇವರೆಲ್ಲರು ಸಂತಾಜಿಯ ಗೂಢತಂತ್ರಜಾಲಕಳಪಟ್ಟವರೆಂಬ ಮಾತು ವಾಚಕರ ಮನಸ್ಸಿಗೆ ಹೊಳೆದಿದ್ದರೂ, ನಾವು ಅದನ್ನು ದೃಢೀಕರಿಸುವದಕ್ಕಾಗಿ ಮತ್ತೆ ಹೇಳುವೆವು. ಈಗ ಸಂಶಾಚಿಯು ತನ್ನ ಮೂಲಪ್ರತಿಜ್ಞೆಯನ್ನು ನೆರವೇರಿ ಸುವದಕ್ಕಾಗಿ ಬಾದಷಹನ ಛ»»ಟೆಯಿಂದ ಎರಡು ಮೂರು ಮೈಲಿನ ಅಂತರದಲ್ಲಿಯ ಒಂದು ಅರಣ್ಯದಲ್ಲಿಯ ಗಿಡದ ಬುಡದಲ್ಲಿ ಕುಳಿತು, ಮುಂದೆ ಏನು ಮಾಡ ಬೇಕೆಂದು ಆಲೋಚಿಸುತ್ತಲಿದ್ದನು. ಅಷ್ಟರಲ್ಲಿಯೇ, ಖಂಡೋಬಾ ಚಿಟನೀಸ ನು ಆತನ ಎದುರಿಗೆ ಬರಹತ್ತಿದನು. ಆತನನ್ನು ನೋಡಿ ಸಂತಾಜಿಗೆ ಬಹಳ ಸ ಮಾಧಾನವಾಯಿತು, ಈತನು ಸೂರ್ಯಾಜೆಯ ಗೊತ್ತುಹಚ್ಚಿ, ಆತನ ರಾಜದ್ರೋ ಹದ ನಡತೆಗಾಗಿ ಆತನಿಗೆ ರಾಜಶಾಸನವಾಡಿಸಿ ಇಷ್ಟರಲ್ಲಿ ತನ್ನ ಬಳಿಗೆ ಬಂದಿರ ಬಹುದೆಂದು ತಿಳಿದು ಆತನು ಖಂಡೋಬನನ್ನು ಕುರಿತು-ಖಂಡೋಬೇರಾವ, ದು ಈ ಸೂರ್ಯಾಜಿಗೆ ತಕ್ಕ ಶಾಸನವಾಯಿತಷ್ಟೆ? ಎಂದು ಕೇಳಲು, ಖಂಡೋಜಿ ಯು- ಇಲ್ಲ ಆ ದುಷ್ಟನು ಸಿಗಲಿಲ್ಲ. ಸಂತಾಜೀರಾವ, ನಮ್ಮ ಮರಾಟರಲ್ಲಿಯಾದರೂ ಐಕ್ಯವೆಲ್ಲಿರುತ್ತದೆ? ತಾರಾಬಾಯಿಸಾಹೇಬರು ಏಸಬಾಯಿಸಾಹೇಬ ಕವರ ವಿಷಯವಾಗಿ ಅಸೂಯೆಪಡುತ್ತಲಿದ್ದು, ಬಾಲಶಿವರಾಯನಿಗೆ ಪಟ್ಟವಾಗದಂ ತ ಅವರು ಅಂತರಂಗದಲ್ಲಿ ಯೋಚಿಸುವಹಾಗೆ ತೋರತ್ತದೆ. ಸೂರ್ಯಾಜಿಯು ಈ ಗೃಹಕಲಹಾಗ್ನಿಯಲ್ಲಿ ಹುಲ್ಲುಹಾಕಲಿಕ್ಕೆ ಹಿಂದೆ ಮುಂದೆ ನೋಡುವಹಾಗಿಲ್ಲ. ಶರಾಬಾಯಿಯವರೇ ಸೂರ್ಯಾಜಿಯನ್ನು ಬಚ್ಚಿಟ್ಟು, ಆತನು ತನ್ನ ಕೈಗೆ ಹದಹಾಗೆ ಮಾಡಿದರೆಂಬ ಸಂಶಯವು ನನ್ನನ್ನು ಬಾಧಿಸಹತ್ತಿದೆ. ಹೀಗೆ ಬೇಲಿಯೇ ಎದ್ದು ಹೊಲವನ್ನು ಮೇಯಹತ್ತಿದರೆ, ಪರಿಣಾಮವು ಹ್ಯಾಗಾಗಲೇ ಕು! ನಾನು ಕೂಡಲೆ ರಾಯಗಡದ ಹಾದಿಗಜೋಕಾಜಿಯನ್ನು ಕಳಿಸಿದ್ದೇನೆ ನಾನು ಸ್ವತ: ಪಲ್ಲಾಳಗಡದಲ್ಲಿ ಶೋಧಮಾಡಿದನು. ಆದರೂ ಆ ನೀಚ ಸ ರ್ಯಾಜಿಯು ಕತ್ತು ಹತ್ತಲಿಲ್ಲ. ಹೀಗೆ ಶೋಧನಾಡುತ್ತ ವ್ಯರ್ಥಕಾಲಹರಣ ಮಾಡುವದಕ್ಕಿಂತ, ಆ ಘಾತಕ ಸ್ವಭಾವದ ಸೂರ್ಯಾಜಿಯು ಕದಾಚಿತ್ ತುಳಾಪುರ ಕೈ ಬಾದಶಹನ ಕಡೆಗೆ ಬಂದಿದ್ದರೂ ಬಂದಿರಬಹುದೆಂದು ತಿಳಿದು ಇತ್ತ ಕಡೆಗೆ ಇಂದೆನು, ಮೇಲಾಗಿ ಸಂತುಜಿರಾವ, ನೀವು ಕೈಕೊಂಡಿರುವ ಕಾರ್ಯವು ಸಾ ಮಾನ್ಯವಾದದ್ದಲ್ಲ; ನಿಮ್ಮ ಪ್ರತಿಜ್ಞೆಯು ಸೌಮ್ಯವಾದದ್ದಲ್ಲ. ಇಂಥ ಪ್ರ ಸಂಗದಲ್ಲಿ ಪ್ರತಿಯೊಬ್ಬ ಸ್ವಾಮಿಭಕ್ತನು ನಿಮಗೆ ಸಹಾಯಮಾಡಲಿಕ್ಕೆ ಮುಂದುವ