೧೮೮ ಸದ್ಯೋಧಚಂದ್ರಿಕೆ. ಮಾಡಿದಿರಿ?ವಾಯಿಯ ದೇಶಮುಖಿಯ ಸಂಬಂಧದಿಂದ ನೀವು ನಿಶ್ಚಿಂತರಾಗಿರಬೇಕು, ಕೋಟೆಯು ಕೈ ಸೇರಿದಕೂಡಲೆ ನಾನೂ ನೀವೂ ತುಳಾಪುರಕ್ಕೆ ಬಾದಶಹನ ಬಳಿಗೆ ಹೋಗೋಣ , ಸತ? ನಾನು ಬಾದಶಹನ ಮುಂದೆ ಹೇಳಿ ನಿಮಗೆ ದೇಶಮುಖಿ ಯನ್ನು ಕೊಡಿಸುತ್ತೆನೆ ಕೋಟೆಯನ್ನು ಕೈವಶ ಮಾಡಿಕೊಳ್ಳುವದು ನನಗೆ ಅಸಾಧ್ಯವೆಂದು ನೀವು ತಿಳಿಯಬೇಡಿರಿ. ಹತ್ತು ತಿಂಗಳು ಹತ್ತುವ ಒಂದು ವರ್ಷ ಹತ್ತಿತು ! ಆದರೆ ನಿಮಗೆ ದೇಶಮುಖಿಯು ಸಿಗುವದೊತ್ತಗುಳಿದು , ಬಾದಶಹನು ನಿಮ್ಮೆಲ್ಲರ ರುಂಡಗಳನ್ನು ದುರ್ಗದ ಅಗಸೆ ಬಾಗಿಲಿಗೆ ಕಟ್ಟಿ ಸಿಯಾನೆಂಬದನ್ನು ಚೆನ್ನಾಗಿ ನೆನಪಿನಲ್ಲಿಡಿ. ಈಮೇರೆಗೆ ಖಾನನು ಸೂರ್ಯಾಜಿಯನ್ನು ಬೆದರಿಸಲು, ಸೂರ್ಯೋಜಿಗೆ ಆತನ ಮತೇ ನಿಜವಾಗಿ ತೋರಿತು; ಯ ಕಂದು, ಇನ್ನು ರಾಯಗಡದ ಮುತ್ತಿಗೆಯನ್ನು ಎಬ್ಬಿಸಲಿಕ್ಕೆ ಹೊರಗಿನಿಂದ ಸಹಾಯವು ಒದಗುವ ಹಾಗಿದ್ದಿಲ್ಲ. ಪಲ್ಲಾಳಗಡದಲ್ಲಿ ದ್ದ ರಾಜಮಂಡಲವನ್ನು ಗೊತ್ತಿಗೆ ಹಚ್ಚುವದಕ್ಕಾಗಿ ಅಸದಖಾನನು ಹೊರಡುವದು ನಿಶ್ಚಯವಾದಂತಾಗಿ ಇಂಥ ಸ್ಥಿತಿಯಲ್ಲಿ ತಾನು ತನ್ನ ತಾಯಿಯ ದೇಶಮುಖಿ ಯನ್ನಾದರೂ ಯೂಕ ಕಳಕೊಳ್ಳಬೇಕೆಂದು ಸೂರ್ಯಾಜೆಯು ಯೋಚಿಸಿದನು. ಅಷ್ಟರಲ್ಲಿ ಆತನ ಮನಸ್ಸಿನಲ್ಲಿ ಮತ್ತೊಂದು ವಿಂಕಾರವು ಉತ್ಪನ್ನವಾಯಿತು, ಏನೂ ಬಾಯಿಯ೦ಧ ಒಬ್ಬ ವಿಧವೆಯು ತನ್ನ ಪರಾಕ್ರಮದಿಂದ ಈವರೆಗೆ ರಾಯಗಡದ ಕೋಟೆಯನ್ನು ಕಾಯ್ದುಕೊಂಡಿದ್ದು, ತಾನು ಈಗ ಮೊಗಲರನ್ನು ಕೂಡಿ, ಆ ಶೂರ ಸ್ತ್ರೀಯ ಸ್ವರಾಜ್ಯೋದ್ದಾರದ ಕಾರ್ಯಕ್ಕೆ ವಿಘ್ನವನ್ನುಂಟುಮಡುವದು ಅಯೋ ಗ್ಯವೆಂದು ಭಾವಿಸಿದನು. ಆದರೆ ಕಡೆಗೆ ಬಾದಶಹನಿಗೇ ಗೆಲವು ಬರುವದು ನಿಶ್ಚಯ ವೆಂಬ ವಿಚಾರವು ಆತನಲ್ಲಿ ದೃಢವಾಗಿ, ಇಡಿಯ ಮಹಾರಾಷ್ಟ್ರ ರಾಜ್ಯವು ಮುಣುಗು ತಿರುವಾಗ, ತಾನು ಬಾದಶಹನಿಂದ ವಾಯಿಯ ದೇಶಮುಖಿಯನ್ನಾದರೂ ಸಂಪಾದಿ ಸುವದು ಅಷ್ಟರ ಮಟ್ಟಿಗೆ ಮಹಾರಾಷ್ಕರ ಹಿತವನ್ನೇ ಮೂಡಿದ ಹಾಗಾಗುತ್ತದೆಂದು ಆತನು ಸಮಧಾನವೂಡಿಕೊಂಡನು. ಒಂದು ಪಕ್ಷದಲ್ಲಿ ಏಸಬಾಯಿಯು ಜಯಶಾಲಿಯಗಿ ಮಹಾರಾಷ್ಟ್ರ ರಾಜ್ಯವು ಉಳಿದರೆ, ನನ್ನ ಘಾತಕತನವೆಲ್ಲ ಖಂ ಡೋಬನಿಗೂ, ಸಂತಾಜಿಗೂ ಗೊತ್ತಗಿರುವದರಿಂದ ಅವರು ನನ್ನನ್ನು ಗೊತ್ತಿಗೆ ಹ wದೆ ಬಿಡರೆಂದು ಆತನು ನಿಶ್ಚಯಿಸಿದನು. ಒಟ್ಟಿಗೆ ಮೊಗಲರಿಗೆ ಜಯವಾಗುವದರ ಲ್ಲಿಯೇ ತನ್ನ ಹಿತವಿರುವದೆಂದು ತಿಳಿದು ಆ ವಿಶ್ವಾಸಘಾತಕಿಯು ಖಾನನನ್ನು ಕುರಿ ತು-ಖಾನಸಾಹೇಬ, ನಾನು ಇದು ಕೋಟೆಯನ್ನು ನಿಶ್ಚಯವಾಗಿ ನಿಮ್ಮ ಕೈಗೆ
ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೯೭
ಗೋಚರ