ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪ್ರಣ್ಯ, ಅda ಪುರವನ್ನು ನುಂಗಿ ನೀರು ಹಿಡಿದರು, ನಿಜಾಮಶಾಹಿಯನ್ನು ಗೊತ್ತಿಗಹಚ್ಚಿದರು. ಆದ್ದ ರಿಂದ ಈ ಮರಾಟರ ಪ್ರಸ್ವವನ್ನು ನಿಮ್ಮ ಸರದಾರರಮುಂದೆ ಬೆಳಿಸಬಾರದು. ಬಾದಶಹ-ಆದ್ದರಿಂದಲೇ ನಿನ್ನ ಕೈಗೆ ಸಿಕ್ಕ ಮರಾಟರಕುಲಗೆಡಿಸಿ ನನ್ನ ಬಳಿಯ ಇಟ್ಟುಕೊಳ್ಳಬೇಕೆಂದು ನಿಶ್ಚಯಿಸಿರುತ್ತೇನೆ” ಇದರಿಂದ ಮರಾಟರು ಈ ಕುಲಗೇಡಿಗಳ ಮೇಲೆ ದ್ವೇಷ ಮಡುವರು. ಈ ಕುಲಗೇಡಿಗಳು ನನ್ನನ್ನು ಅವಲಂಬಿಸಿ ಇರಬೇಕಾಗು ವದು! ಈ ಸೂರ್ಯಾಜೆಯನ್ನೇ ನಾನು ಕುಲಗೆಡಿಸಿದೆನೆಂದರೆ, ಈತನ ಮನೆತನದಲ್ಲಿ ಇ ತಂಡವಾಗುವದು, ಈತನ ದೇಶಮುಖಿಯಲ್ಲಾಗುವ ಎರಡು ಪಾಲುಗಳಲ್ಲಿ ಒಂದು ಮುಸಲಮನರದು, ಒಂದು ಹಿಂದುಗಳದು, ಇಬ್ಬರು ಒಕ್ಕಟ್ಟಿನಿಂದ ನನ್ನನ್ನು ಎಂದೂ ಎದುರಿಸಲಾರರು. ಆದ್ದರಿಂದ ಸೂರ್ಯಾಜಿ, ನಾನು ನಿನಗೆ ಹೇಳುವದೇನಂದರೆ, ನೀ ನು ಪೈಗಂಬರನ ದಾಸನಾಗಲೇಬೇಕು.

  • ಸೂರ್ಯಾಜಿ-ಏನು? ನಾನು ಮುಸಲಾನನಾಗಲಾ ? ಅಂದಮೇಲೆ ಬಾದಶಹಾ. ನೀನು ನನಗೆ ಕೊಟ್ಟ ವೈಭವವನ್ನು ನಾನು ಹಾಗೆ ಭೋಗಿಸಬೇಕು ! ಹತ್ತು ಜನ ನನ್ನ ಜಾತಿಯವರ ಕಣ್ಣುಗಳು ಕುಕ್ಕುವಂತಹ ವೈಭವವು ನನಗೆ ಬೇಕು, ಇಲ್ಲದಿದ್ದರೆ ಉಪ ಯೋಗವೇನು ? ನನ್ನ ವೈಭವವನ್ನು ನೋಡಿ ನನ್ನ ಆಸ್ತೇಷ್ಟರು ಹೊಟ್ಟೆಕಿಚ್ಚು ಬಟ್ಟಷ್ಟು ನನಗೆ ಸಮಧಾನವು ನೀನು ನನ್ನನ್ನು ಮುಸಲ್ಮಾನನನ್ನಾಗಿ ಮೂಡಿದರೆ, ನನ್ನನ್ನು ನೋಡಿ ನನ್ನ ಜನರು ದ್ವೇಷ ಮೂಡಬಹುದಲ್ಲದೆ, ಹೊಟ್ಟೆ ಕಿಚ್ಚು ಬಡಲಿಕ್ಕಿಲ್ಲ. ನನ್ನ ಕುಲಗೆಡಿಸದೆ ನನಗೆ ನಾಯಿಯ ದೇಶಮುಖಿಯನ್ನು ಕೊಟ್ಟರೆ, ಅಂಥ ಆಶೆಯನ್ನು ಬೇರೆ ಸ್ವಜನುಗೆ ತೋರಿಸಿ, ಹಲವು ಜನ ಮರಾಟರನ್ನು ನಿನ್ನ ಪಕ್ಷಕ್ಕೆ ಒಲಿಸಿಕೊಳ್ಳಲಿಕ್ಕೆ ನನಗೆ ಅನುಕೂಲವಾಗಬಹುದು,

ಖಾನ-ಇಲ್ಲಿ ನೋಡು ಸೂರ್ಯಾಜಿ, ವಿಶ್ವಾಸಘಾತಕಿಗಳು ಬಾದಶಹರಿಗೆ ವಿ ಶ್ವಾಸದ ಮತುಗಳನ್ನು ಹೇಳುವ ಗೊಡವಿಗೆ ಹೋಗಬಾರದು. ನೀನು ಮುಸಲ್ಮಾನ ನಾಗಲೇಬೇಕು, ಇಲ್ಲದಿದ್ದರೆ ದ್ರೋಹಿಯೆಂದು ತಿಳಿದು ನಿನಗೆ ದೇಹಾಂತಪ್ರಾಯದ ಶಿಕ್ಷೆಯನ್ನು ವಿಧಿಸುವೆವು , ಲೋಭದಿಂದ ಒಬ್ಬ ಒಡೆಯನ ಮೇಲೆ ತಿರುಗಿಬಿದ್ದವನು ಮತ್ತೊಬ್ಬನಮೇಲೆ ತಿರುಗಿ ಬೀಳದೆಯಿರಬಹುದೆ ?" ಸೂರ್ಯಾಜಿ-ಹೀಗೋ ! ನಿಮ್ಮಂತೆಯೇ ಆಗಲಿ, ಉದ್ಯೋಗಮೂಡುವದು ಹೊಟ್ಟೆಯ ಸಲುವಾಗಿಯೇ ಅಲ್ಲವೆ? ಅಂದಬಳಿಕ ನನಗೆ ಲಾಭವಾಗುವ ಪ್ರಸಂಗದಲ್ಲಿ ಧರ್ಮದ ಪ್ರತಿಬಂಧವಾದರೂ ಯಾಕೆ? ನನಗೆ ರಾಮನೂ ಅಷ್ಟೆ, ರಹಿಮನೂ ಅಷ್ಟೆ ! ಖಾನ, ನಾನು ಮುಸಲ್ದಾನ ನಾಗುತ್ತೇನೆ; ಆದರೆ ವಾಯಿಯ ದೇಶಮುಖನೆಂದು ನನ್ನ ಅಣ್ಣ ತಮ್ಮಂದಿರಮುಂದೆ ನಾನು ಮೆರೆಯಲಿಕ್ಕೆ ಬೇಕುಮತ್ರ.

  • ಬಾದಶಹ- ಎಲಾ,ಈ ವಿಶ್ವಾಸಘಾತಕಿಯನ್ನು ಅತ್ತ ತಳ್ಳಿಕೊಂಡುಹೋಗಿರೋ! (ಖಾನ, ಆ ಸಂಭಾಜಿಯ ಮಗನನ್ನ ಹೆಂಡತಿಯನ್ನೂ ಮುಸಲ್ಮಾನರನ್ನು ಮೂಡಿಬಿಡಿರಿ.