ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9Y ಸುರಸಗ್ರಂಥಮಾ ಅಹುಡುಗನು ನನ್ನ ಮನಸ್ಸಿಗೆ ಬಂದಿರುತ್ತಾನೆ, ಆತನು ನನ್ನ ಭೋಜನಪಾತ್ರೆಯಲ್ಲಿ ಊಟಕ್ಕೆ ಕುಳಿತುಕೊಳ್ಳಲೇ ಬೇಕು ಖಾನ-ಖಾವಿಂದ, ಬೇಡಿರಿ, ಆ ದೊಡ್ಡ ಮನೆತನದ ಹೆಣ್ಣು ಮಗಳಿಗೆ ನಾನು ವಚನ ಕೊಟ್ಟಿರುವದರಿಂದ, ಅವರನ್ನು ಮುಸಲ್ಮಾನರನ್ನು ಮೂಡಬೇಡಿರಿ, ನಾನು ಹಾಗೆ ವಚನಕೊಡದಿದ್ದರೆ ಆ ಶೂರಸ್ತ್ರೀಯು ತನ್ನ ಮಗನನ್ನು ತುಂಡರಿಸಿ, ತಾನು ಅಗ್ನಿಪ್ರವೇಶ ಮೂಡುತ್ತಿದ್ದಳು. ಬೇಕಾದರೆ ಆ ತಸಳೆ, ಮನೆ, ನಿಂಬಾಳಕರ ಇವರನ್ನು, ಉದಯ ನುವನ್ನು ಕುಲಗೆಡಿಸಿದಂತ ಕುಲಗೆಡಿಸಿ, ಬಾದಶಾಹಿಯ ಚಾಕರರನ್ನು ಕೂಡಿಕೊಳ್ಳಿರಿ, ಕಳ್ಳರು; ಬಾದಶಹರ ಚಾಕರಿಯನ್ನು ಮೂಡುವಂತೆ ಮೇಲೆ ಮೇಲೆ ತೋರಿಸಿ ಒಳಗಿಂ ದೊಳಗೆ ಆ ಸಂತಾನಿಗೆ ಸಹಾಯಮಡಿ, ಬಾದಶಾಹಿಯ ರಾಜ್ಯವನ್ನು ಸುಲಿಯುವರು. ಈಮೇರೆಗೆ ಖಾನನು ಮತಾಡುವದನ್ನು ಅಕಸ್ಮಾತ್ತಾಗಿ ಗಣೋಜಿರಾವ ಶಿರ್ಕೆ ಯೊಡನೆ ಅಲ್ಲಿಗೆಬಂದ ನಾಗೋಜಿರಾವನೆಯು ಕೇಳಿ ಸಿಟ್ಟಿನಿಂದ ಖಾನಸನ್ನು ಕುರಿತು ನಾಗೋಜಿರಾವ-ಯಾರು ಬಾದಶಾಹಿಯ ರಾಜ್ಯವನ್ನು ಸುಲಿಯುವರು? ಖಾನ, ಒಂದು ರಾಯಗಡವನ್ನು ಗೆದ್ದೆನೆಂದು ಇಷ್ಟು ಏರಬೇಡಿರಿ, ರಂಡೆಮುಂಡೆ ಹೆಂಗಸನ್ನೂ, ಅಳಬುರುಕ ಹುಡುಗನನ್ನೂ ಗೆದ್ದರೆ ಮಹಾಪೌರುಷವಾಗಲಿಲ್ಲ. ಆ ಕೆಲಸವನ್ನು ಯಾ *ಕಾದರೂ ಮೂಡಬಹುದು; ಆದರೆ ಮರಾಟರೊಳಗಿನ ಮಹಾ ಮಹಾ ವೀರರನ್ನು ಗೆಲ್ಲ ಹೋಗಿರಿ ! ನಿಮ್ಮ ಬೆಳಕು ಇನ್ನು ಮುಂದೆ ಬೀಳುವದದೆ ! ಗಣೋಜಿರಾವಶಿರ್ಕೆ- ಖಾವಿಂದ, ನನ್ನದೊಂದು ಪ್ರಾರ್ಥನೆಯಿದೆ, ನನ್ನ ತಂಗಿ ಯನ್ನು ತಾವು ಸೆರೆಹಿಡತಂದಿರಿ; ಇದು ಸಂತೋಷದ ಮೂತೇಸರಿ, ಇದು ನಮ್ಮ ಪ್ರತಿ ಜ್ಞೆಗೆ ಅನುಕೂಲವಾದದ್ದು; ಆದರೆ ಇನ್ನು ನಮ್ಮ ತಂಗಿಗೆ ದುಃಖವಾಗಬಾರದೆಂದು, ಆಕೆ ಯ ಪ್ರತ್ಯಕ್ಷ ಅಣ್ಣನಾದ ನನ್ನ ವಶಕ್ಕೆ ಆಕೆಯನ್ನೂ ಆಕೆಯ ಮಗನನ್ನೂ ಒಪ್ಪಿಸಬೇಕು. ಅವರು ನನ್ನ ಸೆರೆಯಲ್ಲಿರುವದರಿಂದ ಕೆಲಮಟ್ಟಿಗಾದರೂ ಸಮಧಾನಪಟ್ಟು ತಮ್ಮ ಜೀ ವಕ್ಕೆ ಅಪಾಯ ಮೂಡಿಕೊಳ್ಳದೆಯಿರಬಹುದು. ಖಾನ-ಖಾವಿಂದ, ಬೇಡ. ಈ ಮರಾಟರು ಮೆಲ್ಲನೆ ಅವರನ್ನು ಬಂಧಮುಕ್ತ ಮೂಡಿ ಬಿಡಬಹುದು. ಅವರನ್ನು ನಂಬಲಾಗದು. ಬಾದಶಹ-ಛಛೇ! ಅರಸು ಮನೆತನದವರಲ್ಲಿ ಈಗ ಯಾರಾದರೂ ಇಸ್ಲಾಮ ಧರ್ಮಕ್ಕೆ ಮನವನ್ನು ಕೊಡಲೇಬೇಕು ಹಿಂದಕ್ಕೆ ಸಂಭಾಜಿಯು ಪೈಗಂಬರನ ಅಪ ಮನದೂಡಿದ್ದು ಈಗ ತೊಳೆದು ಹೋಗಲೇಬೇಕು.* ಬಾದಶಹನು ಈ ಮೇರೆಗೆ ಮತಾಡುತ್ತಿರಲು, ಶಹಾಜಾದಿಯು ಏಸೂಬಾಯಿ ಯನ್ನೂ, ಬಾಲಶಿವರಾಯನನ್ನೂ ಕಾಣಲಿಕ್ಕೆ ಹೋಗಿ, ಅವರನ್ನು ಕರಕೊಂಡುಬಂ ದಳು, ಏಸೂಬಾಯಿಯನ್ನು ಬಾದಶಹನ ಡೇರೆಯ ಬಳಿಯಲ್ಲಿಯ ಒಂದು ಡೇರೆಯಲ್ಲಿ