ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ್ಯ ಅಂY ಕುಳ್ಳಿರಿಸಿ ಬಾಲಶಿವಾಜಿಯೊಡನೆ ವಿನೋದಮೂಡುತ್ತ ಆಕೆಯು ಬಾದಶಹನ ಬಳಿಗೆ ಬಂದಳು, ಅಗ ಬಾದಶಹನ, ಹಾಗು ಖಾನನ ಗುಪ್ತಾಲೋಚನೆಗಳು ನಡೆದಿದ್ದವು. ಗಣೋಜಿರಾವ ಶಿರ್ಕೆಯು, ತನ್ನ ತೂತನ್ನು ಬಾದಶಹನು ಕೇಳುವನೋ ಇಲ್ಲವೋ ಎಂದು ಮನಸ್ಸಿನಲ್ಲಿ ಎಣಿಕೆಹಾಕುತ್ತ ಉದಾಸೀನವೃತ್ತಿಯಿಂದ ನಿಂತುಕೊಂಡಿದ್ದನು. ನಾಗೋಜಿರಾವಮಾನೆಯು ಖಾನನನ್ನು ಕೆಟ್ಟ ಕಣ್ಣಿನಿಂದ ನೋಡುತ್ತ ನಿಂತುಕೊಂಡಿ ದ್ದನು, ಇದನ್ನು ನೋಡಿ ಬಾದಶಹನು ಮನಸ್ಸಿನಲ್ಲಿ ಬಹಳ ಸಮಧಾನಪಟ್ಟನು. ಯಾಕಂದರೆ, ಮರಾಟರಿಗೂ ಮುಸಲ್ಮಾನರಿಗೂ, ಮುಸಲ್ಮಾನರಿಗೂ ರಜಪೂತರಿಗೂ ರಜಪೂತರಿಗೂ ಮರಾಟರಿಗೂ ಸ್ನೇಹಭಾವವು ಇರಬಾರದೆಂದು ಆತನು ಯವಾಗಲೂ ಯತ್ನಿಸುತ್ತಿದ್ದನು. ಆ ಯತ್ನವು ಈಗ ತಾನಾಗಿ ಸಫಲವಾಗುವದನ್ನು ನೋಡಿ ಆ ತಂ ತಗಾರನಾದ ಬಾದಶಹನು ಆನಂದಪಟ್ಟನು. ಹೀಗಿರುವಾಗ ಬಾಲಶಿವರಾಯನು ಬಿಳಿ ಯಗಡ್ಡದ ಬಾದಶಹನ ಭವ್ಯಮೂರ್ತಿಯನ್ನು ನೋಡಿ ಕೌತುಕರಿಂದ ಆತನನ್ನು ಅಪ್ಪಿ ಕೊಂಡನು. ಆಮೇಲೆ ಆ ರಾಜಕುವರನು ಸಲಿಗೆಯಿಂದ ಔಬುನ್ನ ಸೆಯನ್ನು ಅಪ್ಪಿ ಕೊಂಡನು. ಇದನ್ನು ನೋಡಿ ಬಾದಶಹನಿಗೆ ಕೌತುಕವಾಯಿತು. ಬಾಲಶಿವಾಚಿರು ಜಬುನ್ನ ಸೆಯ ಮಗನಂತೆ ಬಾದಶಹನಿಗೆ ಕಂಡನು. ಇನ್ನೂ ಜಬುನ್ನ ಸೆಯ ಲಗ್ನವಾಗಿ ದ್ವಿಲ್ಲ. ಬಾದಶಹನ ಪ್ರೀತಿಯ ಮಗಳಿಗೆ ತಕ್ಕ ವರನು ದೊರೆಯದ್ದರಿಂದ, ಆಕೆಯು ಅವಿವಾಹಿತಳಾಗಿಯೇ ಇದ್ದಳು. ಮುಪ್ಪಿನ ಬಾದಶಹನಿಗೆ ತನ್ನ ಮಗಳ ಸಂಸಾರಸ್ ಖ್ಯವನ್ನು ನೋಡುವ ಯೋಗವು ಒದಗಿದ್ದಿಲ್ಲ. ಈಗ ಆ ಬಾಲಶಿವರಾಯನು ತನ್ನ ಮೊಮ್ಮಗನಂತೆ ತೋರಿ, ಬಾದಶಹನ ಕಣ್ಣು ಗಳೊಳಗಿಂದ ಆನಂದಾಶ್ರುಗಳು ಉದುರಿ ದವು. ತನ್ನ ಮೊಮ್ಮಗನಿಗೆ ಮಹಮ್ಮದೀಧರ್ಮದ ದೀಕ್ಷೆಯನ್ನು ಕೊಡಲೇಬೇಕೆಂದು ಆತನು ನಿಶ್ಚಯಿಸಲು, ಆ ವರ್ತಮನವನ್ನು ಕೇಳಿ ಏಸೂಬಾಯಿಯು ನೆರೆಯ ಡೇರೆ ಯಲ್ಲಿ ದುಃಖದಿಂದ ಅಕ್ರೋಶವೂಡತೊಡಗಿದಳು, ಏಸೂಬಾಯಿಯು ದುಃಖಿಸಹತ್ತಿದಂತೆ, ಆಕೆಯ ಅಣ್ಣನಾದ ಗಣೋಜಿರಾವ ಶಿರ್ಕೆಯ ಹೃದಯವು ಕರಗುತ್ತ ಹೋಯಿತು, ತಾನು ಬಾದಶಹನ ಹಿತವನ್ನು ಸಾಧಿ ಸಿದ್ದು, ಬಾದಶಹನು ಸಣ್ಣ ಪುಟ್ಟ ಸಂಗತಿಗಳಲ್ಲಿಯೂ ತನ್ನ ತೂತು ನಡಿಸದಿರುವದನ್ನು ನೋಡಿ ಗಣೋಜಿಯು ತನ್ನ ಸೇವಾವೃತ್ತಿಗಾಗಿ ತನ್ನನ್ನು ಹಳಿದುಕೊಳ್ಳಹತ್ತಿದನು ಅತ್ತ ನಾಗೋಜೀಮೂನೆಯ ಮನಸ್ಪೂ ಉದ್ವಿಗ್ನವಾಗಿತ್ತು, ತಾನು ಬಾದಶಹನ ಎಷ್ಟೋ ಹಿತಗಳನ್ನು ಸಾಧಿಸಿ, ಯಾತಕದಖಾನನ ಸಮನಸ್ಕಂಧನನಿಸಿದ್ದರೂ, ಖಾನನು ತನ್ನ ಜಾತಿಯವನೆಂಬ ಕಾರಣದಿಂದ ಬಾದಶಹನು ಆತನ ಮೂತು ಕೇಳಿ ತನ್ನ ತೂತು ಕೇಳಿ ದಿರುವದನ್ನು ನೋಡಿ ಮನೆಯು ಮನಸ್ಸಿನಲ್ಲಿ ಸಂತಾಪಿಗೊಂಡಿದ್ದನು. ಇy ಜಬುನ್ನ ಸೆಯು ಬಾದಸಹನ ನಿಶ್ಚಯವನ್ನು ನೋಡಿ ಕಣ್ಣೀರು ಸುರಿಸಹತ್ತಿದಳು. ಇಂಥ ದೊಡ್ಡ