ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುರಸಗ್ರಂಥಮಾಲಾ, ಮನೆತನದವರಮೇಲೆ ಇಂಥ ಕಠಿಣಪ್ರಸಂಗ ಬಂದದ್ದರಿಂದ ಆಕೆಗೆ ಬಹಳ ವ್ಯಸನವಾ ಗಿತ್ತು, ಆಕೆಯು ಬಾದಶಹನನ್ನು ಕುರಿತು ವಿನಯದಿಂದ-“ನನ್ನ ಮೋರೆನೋಡಿ ಈ ಕೂಸಿನ ತಾಯಿಯನ್ನು ದುಃಖಕ್ಕೆ ಈಡುಮೂಡಬೇಡಿರಿ, ಇವರ ಸುಖವನ್ನು ನೋಡಿ ನನಗೆ ಸುಖವಾಗುತ್ತದೆ. ಇವರ ಅಂತಃಕರಣಕ್ಕೆ ವ್ಯಥೆಯಾಗುವದನ್ನು ನೋಡಿ ನನ್ನ ಅಂತಃಕರಣಕ್ಕೆ ವ್ಯಥೆಯಾಗುತ್ತದೆ” ಎಂದು ಮೊಣಕಾಲೂರಿ ಪ್ರಾರ್ಥಿ 'ಸುತ್ತಿದ್ದಳು. ಅತ್ತ ಏಸೂಬಾಯಿಯು ಒಂದೇಸವನೆ ಕಣ್ಣೀರು ಸುರಿಸುತ್ತಿದ್ದಳು. ಬಾದಶಹನು-ಅದೇನು ಕೇಳುವಹಾಗಿಲ್ಲ, ಇಂದಿನ ಜಯದಪಾಲನ್ನು ಪೈಗಂಬರನಿಗೆ ಕೊಡಲೇಬೇಕೆಂದು ಹಟಹಿಡಿದಿದ್ದನು, “ಎಂಥ ಕೃತಘ್ನ ಬಾದಶಹನಿವನು? ಎಂದು ಖಾನನು ಸಂತಾಪಗೊಂಡಿದ್ದನು, ಅಷ್ಟರಲ್ಲಿ ಏಸೂಬಾಯಿಯ ಆಶ್ರಿತನಾದ ಖಂಡೋಜಿ ಗುಜರನು (ಖಂಡೋಬಾಚೀಟನೀಸನಲ್ಲ) ಬಾದಶಹನ ಬಳಿಗೆಬಂದು ಸ್ಪಷ್ಟವಾಗಿ ನುಡಿದ ನೇನಂದರೆ-ವೈಭವಶಾಲಿಯಾದ ಅಲಮಗೀರನೇ, ನಾನು ಪ್ರತಾಪರಾವ ಗುಜರನ ಮಗನು, ಶಿವಾಜಿಯ ಆಪ್ತನು, ಬಾದಶಾಹಿಯ ಕಡುತರವಾದ ವೈರಿಯು, ರಾಜಾರಾಮ ಮಹಾರಾಜರ ಬೀಗನು, ಹೀಗೆ ರಾಜವಂಶಕ್ಕೆ ಸಂಬಂಧಿಸಿದವನೂ, ಮೊಗಲರಿಗೆ ಯಮಸ್ವರೂಪಿಯೂ ಆದ ನಾನು ನಿನ್ನ ಪೈಗಂಬರನ ಧರ್ಮವನ್ನು ಸ್ವೀಕರಿಸಲಿಕ್ಕೆ ಸಿದ್ಧ ನಾಗಿ ಬಂದಿದ್ದೇನೆ. ನನಗೆ ಮುಸಲ್ಮಾನಧರ್ಮದ ದೀಕ್ಷೆಯನ್ನು ಕೊಟ್ಟು, ನಿನ್ನ ಉದಾ ರಮನಸ್ಸಿನ ಶಹಾಜಾದಿಗೆ ಪರಧರ್ಮದವರಮೇಲೆಯೂ ಅಂತಃಕರಣ ಮೊಡಲಿಕ್ಕೆ ಬರು ಇದೆಂಬ ಕೀರ್ತಿಯನ್ನು ದಿಗಂತದಲ್ಲಿ ಹಬ್ಬಿಸು; ಮತ್ತು ಜಯಶಾಲಿಯಾದ ಔರಂಗಜೇ ಬನು ಸೋತವರಮೇಲೆ ಉಪಕಾರಮೂಡುವನೆಂಬ ಕೀರ್ತಿಯನ್ನು ಸಂಪಾದಿಸು, ನಡೆ, ನನ್ನನ್ನು ಮುಸಲ್ಮಾನನಾಗನೂಡು! ಈ ಮೇರೆಗೆ ಖಂಡೋಜಿರಾವ ಗುಜರನು ಸ್ವಾಮಿಕಾರ್ಯಕ್ಕಾಗಿ ಮಡಿದ ಸ್ವಾ ರ್ಥತ್ಯಾಗಕ್ಕಾಗಿ ಎಲ್ಲರು ದಂಗು ಬಡೆದು ನಿಂತುಕೊಂಡರು. ಇದರಿಂದ ಗಣೋಜಿ, ಮನೋಜಿ ಇವರ ಮನಸ್ಸಿಗೆ ಬರೆಕೊಟ್ಟಂತಾಯಿತು. ಹಿಂದಕ್ಕೆ ಸಂಭಾಜಿಯು ಯಾವ ತೋಷದಿಂದ ತನ್ನ ದೇಹಯಜ್ಞವನ್ನು ಮೂಡಿದನೋ, ಅದೇ ದ್ವೇಷದಿಂದ ಖಂಡೋಜಿಯ ಇಂದು ತನ್ನ ಆತ್ಮಯಜ್ಞವನ್ನು ಮೂಡಿದನು! ಇಂಥ ದೊಡ್ಡ ಯೋಗ್ಯತೆಯ ಮಂಟನು ಪೈಗಂಬರನ ಶಿಷ್ಯನಾಗಲು ಸಿದ್ದನಾದದ್ದನ್ನು ನೋಡಿ, ಬಾದಶಹನಿಗೆ ಸಂತೋಷವಾಯಿ ತು, ಶಹಾಜಾದಿ ಯು ಅಂತಃಕರಣಪೂರ್ವಕವಾಗಿ ಈಶ್ವರನನ್ನು ಪ್ರಾರ್ಥಿಸಿದಳು. ಏಸೂಬಾಯಿಯ ದುಃಖಾಶ್ರುಗಳು ಅದೃಶ್ಯವಾದವು ಈಮೇರೆಗೆ ಖಂಡೋಜಿರಾವ ಗುಜರನು ಬಾಲಶಿವರಾಯನ ಬದಲಾಗಿ ಮುಸಲ್ಮಾನನಾದ್ದರಿಂದ, ಶಿವಾಜಿಯವಂಶ ಕ್ಕೆ ಬಂದೊದಗಿದ್ದ ಆರಿಷ್ಟದ ನಿವಾರಣವಾಯಿತು!