೨೨ನೆಯ ಪ್ರಕರಣ – ಸತ್ವಶಾಲಿತ್ವ. -(0)- ಇಮೇರೆಗೆ ಸೂರ್ಯಾಜೆಯ ವಿಶ್ವಾಸಘಾತದಿಂದ ರಾಯಗಡವು ಯಾತಿಕದ ಖಾನನ ವಶವಾಗಿ, ಏಸೂಬಾಯಿಯೂ, ಬಾಲಶಿವರಾಯನೂ ಬಾದಶಹನ ಕೈ ಸೇರಿದ ವರ್ತಮಾನವು ಖಂಡೋಬಾ ಚೀಟನೀಸನಿಗೆ ಗೊತ್ತಾಯಿತು. ಆತನು ರಾಜಾರಾ ಮಾದಿ ರಾಜಪರಿವಾರವನ್ನು ಪಲ್ಲಾಳಗಡದಿಂದ ಹೊರಹೊರಡಿಸಿ, ಆ ಪರಿವಾರದ ಪ್ರಾಣಸಂಕಟವನ್ನು ತಪ್ಪಿಸುವದಕ್ಕೆ ಅದನ್ನು ಪಲ್ಲಾಳಗಡದಿಂದ ವಿಶಾಲಗಡಕ್ಕೂ ವಿಶಾಲಗಡದಿಂದ ಜಿಂಜಿಗೂ ಹೊರಡಿಸಿಕೊಂಡು ಹೋಗುವಂತೆ ವ್ಯವಸ್ಥೆ ಮಾಡಬೇ ಕೆಂದು ಯೋಚಿಸಿ, ವೇಗದಿಂದ ಸಲ್ಲಾಳಗಡಕ್ಕೆ ಸಾಗಿದನು. ಆತನು ಬಲ್ಲಾಳಗಡಕ್ಕೆ ಮುಟ್ಟುವದರೊಳಗಾಗಿ, ಇತ್ತ ಬಾದಶಹನ ರೊಚ್ಚಿಗೆದ್ದಿದ್ದ ಸರದಾರರು ಸಹ್ಯಾದ್ರಿಯ ಸಾಲಿನ ದುರ್ಗಗಳನ್ನು ಭರದಿಂದ ಒಂದೊಂದಾಗಿ ವಶಮಾಡಿಕೊಳ್ಳಹತ್ತಿದರು, ಖಂ ಡೋಜಿಯು ರಾಯಗಡದ ವರ್ತಮಾನವನ್ನು ಮಹಾರಾಜರಿಗೆ ತಿಳಿಸಲು ಕೆಲವರ ಅಂ ತಃಕರಣಗಳು ದುಃಖದಿಂದಲೂ, ಕೆಲವರವು ತೈಷದಿಂದಲೂ ಸಂತಪ್ತವಾದವು. ಆದರೆ ಸಂತಪ್ತವಾಗಿ ಮೈಮರೆತು ಕುಳಿತುಕೊಳ್ಳಲಿಕ್ಕೆ ಸಮಯವಿದ್ದಿಲ್ಲ. ಬಾದಶಹನು ಮಿರಜ್, ಪಲ್ಲಾಳದ ಕಡೆಗೆ ತನ್ನ ಪ್ರಚಂಡ ಸೈನ್ಯವನ್ನು ಸಾಗಿಸಿದ್ದನು. ಈ ಪರಿಸ್ಥಿತಿಯನ್ನರಿತು ಪ್ರಹ್ಲಾದನಂತನು, ನೀಲೋಪಂತ ಪಿಂಗಳೆ, ಹರಜಿ ಮಹಾಡಿಕ ಇವರಿಗೆ "ಮಹಾರಾಜ ರು ಬರುವರಾದ್ದರಿಂದ ಕರ್ನಾಟಕದಲ್ಲಿ ಎಲ್ಲ ವ್ಯವಸ್ಥೆಯನ್ನು ಇಡಿರೆಂದ ಪತ್ರಗಳನ್ನು ಒರೆ ದನು; ಮತ್ತು ತನ್ನ ಪರಿವಾರದೊಳಗಿನ ಕೆಲವರನ್ನು ಬೇರೆ ಬೇರೆ ವೇಷಗಳಿಂದ, ಬೇರೆ ಬೇರೆ ಮಾರ್ಗವಾಗಿ ಜಿಂಜಿಯ ಕಡೆಗೆ ಮೊದಲೇ ಸಾಗಿಸಿದನು, ಇನ್ನು ಸ್ವತಃ ರಾಜಾರಾಮ ಮಹಾರಾಜರನ್ನು ಜಿಂಜಿಗೆ ಹ್ಯಾಗೆ ಕಳಿಸಬೇಕೆಂಬ ಆಲೋಚನೆಗೆ ಪ್ರಹ್ಲಾದಪಂತನು ಒಳಗಾದನು. ಬಾದಶಹನ ಸಂಪೂರ್ಣ ಕಣ್ಣು ರಾಜಾ ರಾಮ ಮಹಾರಾಜರ ಮೇಲೆ ಇತ್ತು. ಅದಿಷ್ಟು ಅಶಾಂಕುರವನ್ನು ಕಮರಿಸಿ ಬಿಟ್ಟರೆ, ಶಿವಾಜಿಯ ನಿರ್ವಂಶವಾಗಿ, ಬಾದಶಾಹಿಯು ನಿರಂಕುಶವೂ, ನಿರ್ಮೊರವೂ ಆಗುವದೆಂದು ಬಾದಶಹನು ತಿಳಿದಿದ್ದನು; ಆದ್ದರಿಂದ ತಟ್ಟನೆ ಮಹಾರಾಜರನ್ನು ಜಿಂಜಿಗೆ ಹೊರಡಿಸುವ ಹಾಗಿದ್ದಿಲ್ಲ. ಈ ದುರ್ಘಟ ಪ್ರಸಂಗದಿಂದ ಪಾರಾಗುವದಕ್ಕಾಗಿ ಪ್ರಹ್ಲಾದನಂತನೂ, ಪರಶುರಾಮಪಂತನೂ ಕೂಡಿ ಒಂದು ಹಂಚಿಕೆಯನ್ನು ಹುಡುಕಿದರು. ಮಹಾರಾಜರು ಇನ್ನೂ ದಕ್ಷಿಣದಲ್ಲಿಯೇ ಇರುತ್ತಿದ್ದು, ತಮ್ಮ ಪರಿವಾರದೊಡನೆ ದುರ್ಗದಿಂದ ದುರ್ಗಕ್ಕೆ ಅಲೆದಾಡುತ್ತ, ತಮ್ಮನ್ನು ಎಡತಾಕಿಸುವರೆಂಬಂತೆ ಬಾದಶಹನ ಸೈನ್ಯಕ್ಕೆ ತೋರಿಸಿ ಒಮ್ಮಿಂದೊಮ್ಮೆ ತಾವು ಕರ್ನಾಟಕದ ಕಡೆಗೆ ಸಾಗಬೇಕೆಂದು ಅವರು ಯೋಚಿಸಿದ್ದರು, ಈ ಕಾಲದಲ್ಲಿ ಪ್ರಹ್ಲಾದನಂತನ ಚಾತುರ್ಯವು ಒಳಿತಾಗಿ ವ್ಯಕ್ತವಾಯಿತು. ಆತನು
ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೧೬
ಗೋಚರ