ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Sto ಸುರಸಗ್ರಂಥಮಾಲ. ಸಂತಾಜಿಯು ಮಹಾರಾಜರ ಸಲುವಾಗಿ ಸ್ವತಃ ದರ್ಭಪುಷ್ಪಗಳನ್ನು ತಕ್ಕೊಂಡು ಬಂದಿ ದ್ದನು. ಕುಶತೀರ್ಥದಲ್ಲಿ ಮಹಾರಾಜರೇ ಮೊದಲಾದವರ ಸ್ಥಾನವು ವಿಧ್ಯುಕ್ತವಾಗಿ ಆದಬಳಿಕ, ಶ್ರೀಕುಮಾರಸ್ವಾಮಿಯ ಪೂಜೆಗಾಗಿ ಎಲ್ಲರೂ ಹೋದರು. ಪೂಜಾಸಮಾ ರಂಭವು ಪ್ರೇಕ್ಷಣೀಯವೂ, ಹೃದಯಂಗಮವೂ ಆಗಿತ್ತು. ಕ್ಷತ್ರಿಯ ಕುಲಾವತಂಸರಾದ ರಾಜಾರಾಮ ಮಹಾರಾಜರು ಸ್ವಾಮಿಯನ್ನು ಪೂಜಿಸಹತ್ತಿದ್ದಾರೆ; ಸ್ವತಃ ಪ್ರಹ್ಲಾದನಂತ ರು ಪೂಜೆಯನ್ನು ಮಾಡಿಸಹತ್ತಿದ್ದಾರೆ; ವೀರನಾದ ಸಂತಾಜಿಯು ತಾನು ಸ್ವತಃ ತಾಜಿಯು ತಾನು ಸ್ವತಃ ತಂದಿದ ಕುಶಪುಷ್ಪ, ಪಾಲಾಕದಂಡ, ಮೃಗಚರ್ಮ, ಕೌಪೀನಗಳನ್ನು ಮಹಾರಾಜರ ಕೈಯಿಂದ ಶ್ರೀಕಾರ್ತಿಕೇಯನಿಗೆ ಅರ್ಪಿಸಹತ್ತಿದ್ದಾನೆ; ಎಲ್ಲ ಪರಿವಾರದ ಭಕ್ತಿಪರವಶತೆಯಿಂದ ಕುಳಿತುಕೊಂಡಿದೆ; ಮಹಾರಾಜರೇ ಮೊದಲಾದ ಎಲ್ಲ ಪರಿವಾರವು ಶುಭ್ರಭಸ್ಮಲೇಪನ ದಿಂದ ಶೈವಸಂಪತ್ತು ಹೊರಸೂಸಹತ್ತಿದೆ. ಇಂಥ ಗಂಭೀರ ಪ್ರಸಂಗದಲ್ಲಿ ಮಹಾರಾಜರು ಶ್ರೀಕುಮಾರಸ್ವಾಮಿಯನ್ನು ಭಕ್ತಿಯಿಂದ ಪೂಜಿಸಿದ ಬಳಿಕ ಪ್ರಹಾದಪಂತರು ಸ್ವಾಮಿಯ ಸಮ್ಮುಖದಲ್ಲಿ ಎಲ್ಲ ವೀರಪರಿವಾರವನ್ನು ಕುರಿತು- ವೀರರೇ, ಶ್ರೀಕುಮಾರಸ್ವಾಮಿಯ ಪೂಜಾಯೋಗವು ಇಂದು ನಮ್ಮೆಲ್ಲರಿಗೆ ಲಭಿಸಿದ್ದು ಸುದೈವವೆಂದು ತಿಳಿಯಿರಿ, ಶ್ರೀ ಕಾರ್ತಿ ಕೇಯನು ಕೂಸಾಗಿರುವಾಗ ದೇವಸೇನಾಧಿಪತ್ಯವನ್ನು ಕೈಕೊಂಡು ದುಷ್ಟ ತಾರಕಾಸು ರನನ್ನು ಸಂಹರಿಸಿದನು. ಇಂಥ ಮಹಾಪ್ರತಾಪಿಯ ಅನುಗ್ರಹಯೋಗವು ನಮ್ಮೆಲ್ಲರಿಗೂ ಒದಗಿರುತ್ತದೆ; ಅಂದಬಳಿಕ ಸ್ವಾಮಿ ಕಾರ್ಯಕ್ಕಾಗಿ ಟೊಂಕಕಟ್ಟಿದ್ದ ನಾವು ಅಂಜುವ ದೇಕೆ ? ಇನ್ನು ಮೇಲೆ ಶ್ರೀಕಾರ್ತಿಕೇಯನ ಕೃಪೆಯಿಂದ ನಮ್ಮೆಲ್ಲರ ತೋಳುಗಳಲ್ಲಿ ವಿಲ ಕ್ಷಣವಾದ ಸಾಮರ್ಥ್ಯವೂ, ನನ್ನ ಖಡ್ಗಧಾರೆಗಳಲ್ಲಿ ಅಪೂರ್ವತೀವ್ರತೆಯೂ ಪ್ರಾಪ್ತವಾ ಗುವಲ್ಲಿ ಸಂಶಯವಿಲ್ಲ. ಈಮೇರೆಗೆ ಎಲ್ಲ ಪೂಜಾವಿಧಿಗಳು ಮುಗಿದಬಳಿಕ ರಾಜಪರಿವಾರವು ಲೋಹಾದಿ ಯನ್ನು ಇಳಿತು, ಸಂತಾಜಿಯ ಅಂದಿನ ಆನಂದಕ್ಕೆ ಮೇರೆಯೇ ಇದ್ದಿಲ್ಲ, ತನ್ನ ಸ್ವಾಮಿಯನ್ನು, ಶಿವಪ್ರಭುವಿನಪುತ್ರನನ್ನು, ಗೋಬ್ರಾಹ್ಮಣಪ್ರತಿಪಾಲಕನನ್ನು ಎಷ್ಟು ಸನ್ಮಾನಿಸಿದರೂ, ಎಷ್ಟು ಪೂಜಿಸಿದರೂ ಆ ಸ್ವಾಮಿನಿಷ್ಠನಿಗೆ ತೃಪ್ತಿಯೇ ಆಗಲಿಲ್ಲ. ಆ ರಾಜಪರಿವಾರವು ಕೆಲವು ದಿನ ವಿಶ್ರಾಂತಿಯನ್ನು ಪಡೆದ ಬಳಿಕ ವೇಂಕಟಗಿರಿಯ ಮೇಲೆ ಹಾದು ಬೆಂಗಳೂರಿಗೆ ಹೋಗುವದಕ್ಕಾಗಿ ಕರ್ನಾಟಕದ ಬೈರಾಗಿಗಳ ವೇಷವನ್ನು ಹಾಕಿ ಕೊಂಡಿತು. ಕೃತ್ತಿಕಯೋಗದ ಮೂಲಕ ಬಹು ಜನ ಯಾತ್ರಿಕರು: ಲೋಹಾದ್ರಿಯಲ್ಲಿ ಕೂಡಿದ್ದರು. ಆಗ ಈ ಮಹಾರಾಷ್ಟ್ರ ಪರಿವಾರದ ಸಂಶಯವು ಬಹು ಜನ” ಗೆ ಉತ್ಪನ್ನ ವಾಯಿತು. ಇತ್ತ ಔರಂಗಜೇಬನು ಜಾರಿಮಾದಿ ರಾಜಪರಿವಾರವನ್ನು ಹಿಡಿದುಕೊ Kಮಗೆ, ಅಥವಾ ಆ ಪರಿವಾರದ ಗೊತ್ತು ಹಚ್ಚಿಕೊಟ್ಟವರಿಗೆ ದೊಡ್ಡ ದೊಡ್ಡ ಇನಾಮು ಗಳನ್ನು ಕೊಡುವೆನೆಂದು ಊರೂರಿಗೆ ಡಂಗುರ ಸಾರಿಸಿದ್ದನು. ದ್ರವ್ಯಲೋಭದಿಂದ ಎಷ್ಟೋ ಜನರು ತಮ್ಮ ಯಾತ್ರೆಯ ಪವಿತ್ರೋದ್ದೇಶವನ್ನು ಮರೆತು, ಈ ಹೊಸ ಜನರ