ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನವುಣ್ಯ. ಸುತ್ತು ಕೈತೊಳಕೊಂಡು ಬೆನ್ನ ಹತ್ತಿದರು. ಕಾರಣ ವೇಷಾಂತರದಿಂದ ಮಾರ್ಗವನ್ನು ಕ್ರಮಿಸುತ್ತಿದ್ದ ರಾಜಪರಿವಾರಕ್ಕೆ ಬಹಳ ತೊಂದರೆಯಾಗಹತ್ತಿತು. ತಮ್ಮನ್ನು ಹಿಡಿಯು ವದಕ್ಕಾಗಿ ಬಾದಶಹನು ಕಾಸಮಖಾನನನ್ನು ಕಳುಹಿರುವನೆಂಬ ಸುದ್ದಿಯೂ ಅವರಿಗೆ ಗೊತ್ತಾಗಿತ್ತು. ಅವರು ಬಹು ಜಾಗರೂಕತೆಯಿಂದ ಮಾರ್ಗವನ್ನು ಕ್ರಮಿಸುತ್ತ ಬೆಂಗ ಳೂರಿಗೆ ಬಂದು ಒಂದು ಧರ್ಮಶಾಲೆಯಲ್ಲಿ ಇಳಿದುಕೊಂಡರು. ಇಷ್ಟು ಹೊತ್ತಿಗೆ ಎಷ್ಟೋ ಜನ ಮಹಾರಾಷ್ಟ್ರ ಸರದಾರರು ವೇಷಾಂತರದಿಂದ ಈ ರಾಜಪರಿವಾರವನ್ನು ಕೂಡಿಕೊಂಡದ್ದರಿಂದ, ಬೈರಾಗಿಗಳ ಸಂಘವು ದೊಡ್ಡದಾಗಿತ್ತು. ಹೀಗೆ ಮರಾಟರು ವಿಪತ್ಕಾಲದಲ್ಲಿ ವೇಷಾಂತರದಿಂದ ಹೊರಟಿದ್ದರೂ, ಅವರ ಲ್ಲಿಯ ಪರಸ್ಪರ ಪೂಜ್ಯಪೂಜಕ ಭಾವವು ಪ್ರಸಂಗದಲ್ಲಿ ವ್ಯಕ್ತವಾಗದೆ ಹೋಗುತ್ತಿದ್ದಿಲ್ಲ, ರಾಜಾರಾಮ ಮಹಾರಾಜರು ತಮ್ಮ ಸ್ವಾಮಿಯೆಂತಲೂ, ತಾವು ಅವರ ಸೇವಕರೆಂತಲೂ ತಿಳಿದು ಅವರು ನಡಕೊಳ್ಳುತ್ತಿದ್ದರು, ಒಂದುದಿನ ರಾಜಾರಾಮಮಹಾರಾಜರು ಕೈಕಾಲು ತೊಳಕೊಳ್ಳುವದಾಗಿ ಧರ್ಮಶಾಲೆಯ ಕಟ್ಟೆಯ ಮೇಲೆ ನಿಂತುಕೊಂಡಿದ್ದಾರೆ, ಧನಾ ಜಿಯು ಅವರ ಕಾಲುಗಳನ್ನು ತೊಳೆಯಹತ್ತಿದ್ದಾನೆ, ಸಂತಾಜಿಯು ನೀರುಹಾಕುತ್ತ ಲಿದ್ದಾನೆ, ಖಂಡೋಜಿಯು ಕಾಲುಒರಿಸುವದಕ್ಕಾಗಿ ವಸ್ತ್ರವನ್ನು ಹಿಡಕೊಂಡು ಆತುರ ದಿಂದ ನಿಂತುಕೊಂಡಿದ್ದಾನೆ. ಈ ಚಂದವನ್ನು ನೋಡಿ ಧರ್ಮಶಾಲೆಯ ಮತ್ತೊಂದು ಮೂಲೆಯಲ್ಲಿ ಇಳಿದುಕೊಂಡಿದ್ದವರಲ್ಲಿ ಒಬ್ಬನು ತನ್ನವರನ್ನು ಕುರಿತು- “ ಇವರು ಬೈರಾಗಿಗಳಂತೆ ಕಾಣುವದಿಲ್ಲ, ಯಾರೋ ವಿಪದ್ಧಸ್ತರಾದ ಘನವಂತರಿರುವರು. ಔರಂ ಗಜೇಬ ಬಾದಶಹನು ಡಂಗುರ ಸಾರಿರುವ ಜನರು ಇವರೇ ಇರುವಂತೆ ಕಾಣುತ್ತದೆ; ಇವರ ಬೆನ್ನು ಕಾಯತಕ್ಕದ್ದು ” ಎಂದು ನುಡಿದನು. ಕರ್ಮಧರ್ಮಸಂಯೋಗದಿಂದ ಖಂಡೋಜಿ ಚಿಟನೀಸನಿಗೆ ಕನ್ನಡವು ಬರುತ್ತಿತ್ತು. ಈ ಮಾತುಗಳನ್ನು ಕೇಳಿ ಖಂಡೋ ಬನು ಬೆದರಿದನು. ಆತನು ತನ್ನ ಪರಿವಾರಕ್ಕೆ ಏಕಾಂತದಲ್ಲಿ ಈ ಸಂಗತಿಯನ್ನು ತಿಳಿಸಿ, ಮರುದಿನವೇ ಎಲ್ಲ ಪರಿವಾರವನ್ನು ಅಲ್ಲಿಂದ ಸಾಗಿಸಿ ಒಬ್ಬಿಬ್ಬರೊಡನೆ ತಾನು ಧರ್ಮಶಾಲೆ ಯಲ್ಲಿ ಉಳಿದುಕೊಳ್ಳಬೇಕೆಂದು ಮಾಡಿದನು, ಕಾಸಮಖಾನನು ನೆಟ್ಟಗೆ ಬೆಂಗಳೂರಿಗೆ ಸಾಗಿಬರುತ್ತಿರುವನೆಂಬ ಸುದ್ದಿಯು ಖಂಡೋಜಿಗೆ ಹತ್ತಿತು; ಆದರೂ ಆ ಸ್ವಾಮಿಭಕ್ತನು ತನ್ನ ರಾಜಪರಿವಾರವು ಸುರಕ್ಷಿತ ಮುಂದಕ್ಕೆ ಜಿಂಜಿಗೆ ಮುಟ್ಟುವದಕ್ಕಾಗಿ ತಾನು ಕಾಸನ ಖಾನನ ಸೆರೆಯಾಳಾಗುವದು ಅವಶ್ಯವೆಂದು ನಿಶ್ಚಯಿಸಿದನು. ಖಂಡೋಜಿಯ ಈ ಭಯ ಸೂಚನೆಯಿಂದ ರಾಜಪರಿವಾರವು ಗಡಬಡಿಸಿ ಎಚ್ಚತ್ತಿತು. ಧನಾಜಿ, ಸಂತಾಜ, ದಾಭಾಡೆ ಯಿವರು ರಾಜಾರಾಮ ಮಹಾರಾಜರನ್ನು ರಕ್ಷಿಸುತ್ತ ಒಂದು ಹಾದಿಯನ್ನು ಹಿಡಿದು ನಡೆ ದರು. ಪ್ರಾದಪಂತನು ಉಳಿದ ಪವಾರವನ್ನು ಸಾಗಿಸಿಕೊಂಡು ಬೇರೊಂದು ಹಾದಿ ಯಿಂದ ಸಾಗಿಹೋದನು. ಖಂಡೋಬನು ಮಾತ್ರ ತಾನು ಯೋಚಿಸಿದಂತೆ ಧರ್ವ ಶಾಲೆಯಲ್ಲಿ ಶಾಂತಚಿತ್ತದಿಂದ ನಿಂತುಕೊಂಡನು