ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಸಗ್ರಂಥಮಾಲೆ,

  • ಸ್ವಾಮಿಭಕ್ತಿಯ ಪ್ರಭಾವವು ಎಷ್ಟು ಪ್ರಬಲವಾದದ್ದೂ ತಿಳಿಯದು, ಈ ವರೆಗೆ ಖಂಡೋಬನು ಅನುಭವಿಸಿದ ಪರಿಪರಿಯ ಕಷ್ಟಗಳನ್ನು ಮನಸ್ಸಿನಲ್ಲಿ ತಂದರೆ, ಆತನ ನಿಸ್ವಾರ್ಥ ಬುದ್ದಿಯ ಪ್ರಯತ್ನಕ್ಕಾಗಿ ಯಾರಿಗಾದರೂ ಆಶ್ಚರ್ಯವಾಗಬಹುದು. ಆತನು ಬಹುದಿವಸ ರಾಯಗಡದ ಬಳಿಯ ದೇವಾಲಯದಲ್ಲಿ ಸೆರೆಯಾಳಾಗಿದ್ದನು. ಬಳಿಕ ಸಂತಾಜಿಗೆ ಸಹಾಯಕನಾಗಿ ಔರಂಗಜೇಬನ ಡೇರೆಯ ಕಳಸವನ್ನು ತರುವಾಗ ಕಷ್ಟಪ ಟ್ಟನು. ಇನ್ನೂ ಹಲವು ಪ್ರಸಂಗಗಳಲ್ಲಿ ಆ ಸ್ವಾಮಿನಿಷ್ಠನು ಸ್ವಾಮಿಕಾರ್ಯಕ್ಕಾಗಿ ತಾಪಪಟ್ಟಿರುವದು ವಾಚಕರಿಗೆ ಗೊತ್ತಿರಬಹುದು. ಹೀಗೆ ನಿಸ್ವಾರ್ಥ ಬುದ್ದಿಯಿಂದ ಸಾಮಿಕಾರ್ಯಕಾಗಿ ದೇಹವನ್ನು ಅರ್ಪಿಸುವ ಜನರು ಆಗಿನ ಕಾಲದಲ್ಲಿ ಹಲವರು ಇದ್ದದ್ದರಿಂದಲೇ, ಮರಾಟರ ರಾಜ್ಯದ ಪುನರ್ಘಟನೆಯಾಯಿತೆಂಬ ಮೂತನ್ನು ನಾವು ಹಿಂದೆ ಹೇಳಿರಬಹುದು; ಈಗಾದರೂ ಹೇಳುವೆವು. ಈ ಸ್ವಾರ್ಥರಹಿತವಾದ ಆಚರ ಣೆಯೇ ಎಲ್ಲ ಕಾರ್ಯಗಳ ಸಿದ್ದಿಗೆ ಮೂಲಾಧಾರವಾದ್ದರಿಂದ, ಆ ಗುಣವನ್ನು ಬೈಲಿಗಳ ಯುವದಕ್ಕಾಗಿ ಅದನ್ನು ಎಷ್ಟು ಸಾರಿ ಹೇಳಿದರೂ ಲಾಭವೇಯಿರುವದು. ಇರಲಿ, ಖಂ ಜೋಬನು ಧರ್ಮಶಾಲೆಯಲ್ಲಿ ಉಳಿದುಕೊಂಡು, ತನ್ನ ಸ್ವಾಮಿಯು ಇಷ್ಟು ಹೊತ್ತಿಗೆ ಎಷ್ಟು ದೂರ ಹೋಗಿರಬಹುದೆಂದು ಯೋಚಿಸುತ್ತ ಎರಡು ದಿನಗಳನ್ನು ಕಳೆಯುತ್ತಿ ರಲು, ಮೂರನೆಯ ದಿವಸ ಕಾಶಿಮಖಾನನು ಪರಿವಾರದೊಡನೆ ಬಂದು ಖಂಡೋಬ ನನ್ನೂ ಆತನ ಸಂಗಡಿಗರನ್ನೂ ಸೆರೆಹಿಡಿದನು. ಬಳಿಕ ಖಾನನು ಅವರನ್ನು ಗದ್ದರಿಸಿ ಅವರಿಗೆ ಬೆದರಿಕೆ ಹಾಕಿ ಖಂಡೋಬನನ್ನೂ ಅವನಜನರನ್ನೂ ಕುರಿತು-11ನಿಮ್ಮ ಅರಸನು ಯಾರು? ನೀವು ಯಾರು ಯಾರು ಇರುವಿರಿ”? ಎಂದು ಕೇಳಲು, ಅದಕ್ಕೆ ೩ಂಡೋಬನು(ನಾವು ಬಡ ಬೈರಾಗಿಗಳು, ತೀರ್ಥ ಯಾತ್ರೆಗಳನ್ನು ಮೂಡುತ್ತ ಸಂಚರಿಸುತ್ತಿರುವೆವು. ನಮ್ಮ ಸಂಗಡ ಇನ್ನೂ ನಾಲ್ಕಾರು ಜನರು ಇದ್ದರು. ಅವರು ಎತ್ತಕಡೆಗೋ ಹೋದರು. ನಾವು ಅಲ್ಲಲ್ಲಿಯ ಯಾತ್ರೆಗಳನ್ನು ಮೂಡುತ್ತ ರಾಮೇಶ್ ರಕ್ಕೆ ಹೋಗುವೆವು.” ಎಂದು ಪರಿಪರಿಯಾಗಿ ಹೇಳಿಕೊಂಡನು; ಆದರೆ ಕಾಶಿಮಖಾನನಿಗೆ ಆ ತೂತು ಹ್ಯಾಗೆ ಒಪ್ಪಿಗೆಯಾಗಬೇಕು? ಇವರಸಂಗಡ ಇದ್ದ ಬೇರೆ ಹತ್ತು ಹನ್ನೆರಡು ಜನರಲ್ಲಿಯೇ ಇವರ ಅರಸನು ಇರಬಹುದೆಂದು ತಿಳಿದು, ಖಂಡೋಬನನ್ನು ಹುಣಸಿಯ ಬರಲುಗಳಿಂದ ಹೊಡೆಯಿರೆಂದು ತನ್ನ ಸೇವಕರಿಗೆ ಆಜ್ಞಾಪಿಸಿದನು.

ಖಂಡೋಬನ ಬೆನ್ನ ಮೇಲೆ ಹುಣಸಿಯ ಬರಲುಗಳ ಬಾಸಾಳಗಳು ಮೂಡಹತ್ತಿ ದವು; ಆತನ ಪಂಚಪ್ರಾಣಗಳು ವ್ಯಾಕುಲವಾದವು. ಆದರೂ ಆ ಸ್ವಾಮಿನಿಷ್ಠನು ಸತ್ಯ ಸ್ವರೂಪವನ್ನು ಪ್ರಕಟನೂಡಲಿಲ್ಲ. ತಾವು ಬೈರಾಗಿಗಳು; ತಮ್ಮನ್ನು ಸುಮ್ಮನೆ ಪೀಡಿ ಸಬಾರದು; ನಮ್ಮಂಥ ಯಾತ್ರಿಕರನ್ನು ಹೀಗೆ ಹಿಂಸೆ ಸಡಿಸುವದರಿಂದ ನಿಮ್ಮ ಕಲ್ಯಾಣ ವಾಗದು; ಅಲ್ಲಾನ ಕ್ಷೌಭಕ್ಕೆ ನೀವು ಪಾತ್ರರಾಗಬೇಕಾಗುವದು?” ಎಂದು ಹೇಳುತ್ತ ಲಿದ್ದನು. ಇದರಿಂದ ಖಾನನ ಮನಸ್ಸಿನಮೇಲೆ ಸತ್ಪರಿಣಾಮವಾಗುವದರ ಬದಲು