ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಡಿ, ಆತನು ಖಂಡೋಬನ ತಲೆಯಮೇಲೆ ಮಣ ಮಣ ಭಾರದ ಕಲ್ಲುಗಳನ್ನು ಇಡಿಸಿದನು. ಆಗ ಖಂಡೋಬನ ಕಣ್ಣುಗಳಲ್ಲಿ ದೀಪಹಚ್ಚಿದಂತಾಯಿತು. ಆಗ ಆತನಮುಖದಿಂದ-ಪಕ ಮೇಶ್ವರಾ, ಯಾವ ನನ್ನ ದುಷ್ಕರ್ಮದ ಪ್ರಾಯಶ್ಚಿತ್ತವೆಂದು ನನ್ನನ್ನು ಇಂಥ ಕಷ್ಟಕ್ಕೆ ಗುರಿ ಮೂಡಿದೆ?” ಎಂಬ ಉದ್ದಾರವು ಹೊರಟಿತು! ಆದರೂ ಆ ಸ್ವಾಮಿನಿಷ್ಠನು ಖಾನನಿಗೆ ಕೊಡುವ ಉತ್ತರದಲ್ಲಿ ಅಂತಠವಾಗಲಿಲ್ಲ. ಬಳಿಕ ಖಾನನು ಖಂಡೋಬನಿಗೆ ಬೂದಿಯ ಬರಿಯನ್ನು ಕಟ್ಟಿಸಿದನು; ಆದರೂ ಖಂಡೋಬನ ಉತ್ತರದಲ್ಲಿ ಅಂತರವಾಗಲಿಲ್ಲ. ಆಗ ಖಾನನು ಬೇಸತ್ತು ಖಂಡೋಬನನ್ನು ಸೆರೆಯಲ್ಲಿರಿಸುವಬಗ್ಗೆ ಆಜ್ಞಾಪಿಸಿದನು. ಕೂಡಲೆ ಖಂಡೋಬನ ಕಾಲಿಗೆ ಮಣ ಮಣದ ಬೇಡಿಗಳು ಬಂದವು. ಅದನ್ನು ಸಹಿಸಿ ಕೊಂಡು ಖಂಡೋಬನು ಮರಣದ ಹಾದಿಯನ್ನು ನೋಡುತ್ತ ತನ್ನ ಕೋಣೆಯಲ್ಲಿ ಹೋಗಿ ಬಿದ್ದುಕೊಂಡನು. ಮಧ್ಯರಾತ್ರಿಯಾಗಲು, ಖಾನನ ದೂತರು ರೊಟ್ಟಿ ಉರು ಳುಗಡ್ಡೆಗಳನ್ನು ಖಂಡೋಬನಿಗೆ ತಂದುಕೊಟ್ಟರು. ಆಗ ಖಂಡೋಬನು ಅವನ್ನು ತಿರ ಸಾರದಿಂದ ನೋಡಿ ಯಾತ್ರಿಕರಾದ ನಾವು ಮುಸಲ್ಮಾನರ ಕೈಯೊಳಗಿನ ಈ ಪದ ರ್ಥಗಳನ್ನು ಸರ್ವಥಾ ತಿನ್ನುವದಿಲ್ಲೆಂದು ಹಟಹಿಡಿದು ಅವನ್ನು ತಿರಸ್ಕರಿಸಿದನು. ಎರ ನೆಯ ದಿವಸವೂ ಅದೇಪ್ರಕಾರವಾಯಿತು. ಮೂರನೆಯ ದಿವಸವೂ ಹಾಗೆಯೇ ಆಯಿತು. ಮೂರುದಿವಸ ನಿರಾಹಾರವಾದ್ದರಿಂದ ಖಂಡೋಬನೂ ಅವನ ಸಂಗಡಿಗರೂ ತೀರ ಹೈರಾಣವಾದರು. ಅವರು ಕಣ್ಣಲ್ಲಿ ಜೀವಹಿಡಿದಿದ್ದರು. ಅವರ ಮೊಲೆಗಳು ಬಿಳು ಸೇರಿದವು; ಶಕ್ತಿಯು ಕ್ಷೀಣವಾಯಿತು; ಸರ್ವಾಂಗವು ಥರಥರ ನಡುಗಹತ್ತಿತು ಇಂಥ ಸ್ಥಿತಿಯನ್ನು ನೋಡಿ ಖಾನನಿಗೆ ದಯವು ಉತ್ಪನ್ನವಾಯಿತು. ಇವರು ನಿಜವಾದ ಬೈರಾಗಿಗಳೆಂದು ತಿಳಿದು ಆತನು ಅವರನ್ನು ಬಂಧಮುಕ್ತ ಮಾಡಿ ಬಿಟ್ಟು ಬಿಟ್ಟನು. * ಹೀಗೆ ಖಂಡೋ ಬಲ್ಲಾಳನು ಅಪೂರ್ವಸ್ವಾರ್ಥತ್ಯಾಗ ಮಾಡಿ, ತನ್ನ ಸ್ವಾಮಿಯ. ಸುರಕ್ಷಿತತೆಯ ಸಲುವಾಗಿ ಪರಿಪರಿಯ ಕಷ್ಟಗಳನ್ನು ಭೋಗಿಸಿದ್ದರಿಂದ, ಅತ್ತ ಜಾರ ಮನೇ ಮೊದಲಾದ ರಾಜಪರಿವಾರವು ಸುರಕ್ಷಿತವಾಗಿ ಜಿಂಜಿಗೆ ಮುಟ್ಟಿತು. ರಾಜಾರಾ ಮನು ಜಿಂಜೆಗೆ ಮುಟ್ಟಿದ ಸುದ್ದಿಯು ಹತ್ತಿದಕೂಡಲೆ ಮಹಾರಾಷ್ಟ್ರದೊಳಗಿನ ಒಬ್ಬೊ ಬರೇ ಮರಾಟ ಸರದಾರರೂ ದಂಡಾಳುಗಳೂ ಯುಕ್ತಿಪ್ರಯುಕ್ತಿಯಿಂದ ರಾಜಾರಾಮ ನನ್ನು ಕೂಡಿಕೊಂಡರು. ಇದರಿಂದ ರಾಜಾರಾಮನ ಬಲವು ದಿನದಿನಕ್ಕೆ ಹೆಚ್ಚಹತ್ತಿ, ಜಿಂಜಿಯು ಮಹಾರಾಷ್ಟರ ರಾಜಧಾನಿಯಾಯಿತು; ಆದರೆ ಖಂಡೋಬನ ಕಷ್ಟ ಪರಂಪರೆ ಯು ಮತ್ರ ಮುಗಿಯಲಿಲ್ಲ, ಆತನ ಹೆಂಡತಿಯು ತನ್ನ ಪತಿಗೊದಗಿದ ಕಷ್ಟಕ್ಕಾಗಿ ಹೊಟ್ಟಬೇನೆ ಹಚ್ಚಿಕೊಂಡು ದಿನದಿನಕ್ಕೆ ಕ್ಷೀಣವಾಗಹತ್ತಿದ್ದಳು. ಮಾರ್ಗಾಯಾಸ ದಿಂದ ಆಕೆಯ ಪ್ರಕೃತಿಯು ದಿನದಿನಕ್ಕೆ ಹೆಚ್ಚು ಹೆಚ್ಚು ಕ್ಷೀಣವಾಗಹತ್ತಿತು. ನೀಳೋ ಪಂತ ಮಹಾಡಿಕ, ಹಣಮಂತ ಇವರು ಸರ್ವ ಸೈನ್ಯದೊಡನೆ ಬಂದು ಮಹಾರಾಜರನ್ನು ಕಂಡು, ಅವರಿಗೆ ವಸ್ತಭೂಷಣಗಳನ್ನು ಅರ್ಪಿಸಿ ಅವರನ್ನು ಜಿಂಜಿಯಿಂದ ಚಂದಿದುರ್ಗಕ್ಕೆ